ಮೈಸೂರಲ್ಲಿ ಯೋಗ ಡೇ : ಪ್ರವಾಸೋದ್ಯಮ ಇಲಾಖೆ ಬೇಜಾವಾಬ್ದಾರಿ ಜಾಹಿರಾತು….!

 

ಮೈಸೂರು, ಜೂ.21, 2019 : (www.justkannada.in news) : ವಿಶ್ವಯೋಗದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರವಾಸೋಧ್ಯಮ ಇಲಾಖೆ ಬೇಜವಾಭ್ದಾರಿ ವರ್ತನೆ ತೋರಿ ಲಕ್ಷಾಂತರ ರೂ. ಪೋಲು ಮಾಡಿದೆ.

‘ ವರ್ಲ್ಡ್ ಯೋಗ ಡೇ ‘ ಅಂಗವಾಗಿ ಇಂದು ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನಕ್ಕೆ ವೇದಿಕೆ ಸಿದ್ಧಪಡಿಸಲಾಗಿತ್ತು. ಈ ಹಿಂದೆ ಯೋಗ ಪ್ರದರ್ಶನದ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದ ಮೈಸೂರು ನಗರ, ಈ ಬಾರಿ ಆರಂಭದಲ್ಲೇ ನಿರಾಸಕ್ತಿ ತೋರಿಸುವ ಮೂಲಕ ದಾಖಲೆ ಅವಕಾಶದಿಂದ ಹಿಂದಡಿಯಿಟ್ಟಿತು.
ಈ ಬಾರಿ ಯೋಗ ಪ್ರದರ್ಶನದಲ್ಲಿ ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಅಂಕಿ-ಅಂಶಗಳ ಪ್ರಕಾರ ಇಂದು ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದವರ ಸಂಖ್ಯೆ 40,000 ಮಾತ್ರ. ಆದರೆ ಈ ಸಮಾರಂಭದ ಪ್ರಚಾರಕ್ಕಾಗಿ ಪ್ರವಾಸೋಧ್ಯಮ ಇಲಾಖೆ ಲಕ್ಷಗಟ್ಟಲೇ ಹಣ ವೆಚ್ಚ ಮಾಡಿದೆ. ಅದು ಅವೈಜ್ಞಾನಿಕವಾಗಿ ಎಂಬುದು ಅಸಮಧಾನಕ್ಕೆ ಕಾರಣ.

ಬೇಜಾವಾಬ್ದಾರಿ ಜಾಹಿರಾತು :
ಯೋಗ ದಿನದ ಅಂಗವಾಗಿ ಮಾಧ್ಯಮಗಳಿಗೆ ಇಂದು ಜಾಹಿರಾತು ಬಿಡುಗಡೆ ಮಾಡಿರುವುದು ಅತ್ಯಂತ ಬೇಜವಾಬ್ದಾರಿ ಪರಮಾವಧಿ. ಕಾರಣ ಇಂದು ಬೆಳಗ್ಗೆ 6 ಗಂಟೆಗೆ ಯೋಗ ಪ್ರದರ್ಶನ ನಿಗಧಿಯಾಗಿದದ್ದು. ಆದರೆ ದಿನ ಪತ್ರಿಕೆಗಳು ಓದುಗರನ್ನು ತಲುಪುದು ಕನಿಷ್ಠ ಪಕ್ಷ ಮುಂಜಾನೆ 6.30 ರ ನಂತರವೇ. ಪತ್ರಿಕೆ ಓದಿ ಕಾರ್ಯಕ್ರಮದ ಬಗ್ಗೆ ಮಾಹಿತಿ ಗ್ರಹಿಸಲು ಕನಿಷ್ಟ 8 ಗಂಟೆಯಾಗುತ್ತದೆ. ಅಂದ ಮೇಲೆ ಜನ ಜಾಹಿರಾತು ನೋಡಿಕೊಂಡು ಕಾರ್ಯಕ್ರಮಕ್ಕೆ ಬರಲು ಸಾಧ್ಯವೆ. ಜನಕ್ಕೆ ಪ್ರಚಾರದ ಉದ್ದೇಶ ತಲುಪಿಸಲು ವಿಫಲವಾದರೆ ವೆಚ್ಚ ಮಾಡಿದ ಹಣ ಅನಗತ್ಯ ಪೋಲು ಮಾಡಿದಂತೆ ಅಲ್ಲವೇ..?
ಜಾಹಿರಾತು ನೀಡುವುದೇ ಆಗಿದ್ದರೆ ಒಂದು ದಿನ ಮೊದಲೇ ಈ ಸಂಬಂಧ ಪ್ರಚಾರ ಮಾಡಬೇಕು ಎಂಬ ಸಾಮಾನ್ಯ ಜ್ಞಾನವೂ ಅಧಿಕಾರಿಗಳಿಗೆ ಇಲ್ಲದಾಯಿತೇ..? ಎಂಬುದು ಪ್ರಶ್ನೆ.

ಕೋಟಿ ರೂ. ವೆಚ್ಚ:
ಯೋಗ ದಿನದ ಅಂಗವಾಗಿ ಕಾರ್ಯಕ್ರಮ ಸಂಘಟಿಸಲು ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆಗೆ 60 ಲಕ್ಷ ರೂ.ಗಳ ಅನುದಾನ ನೀಡಿದೆ. ಜತೆಗೆ ಮೈಸೂರಿನ ಗಣಪತಿ ಸಚ್ಚಿದಾನಂದ ಅಶ್ರಮ ಹಾಗೂ ಸುತ್ತೂರು ಮಠದ ಆರ್ಥಿಕ ನೆರವು ಸೇರಿದಂತೆ ಒಟ್ಟು ಒಂದು ಕೋಟಿ ರೂ. ವೆಚ್ಚದಲ್ಲಿ ಯೋಗದಿನ ಸಂಘಟಿಸಲಾಗಿದೆ. ಆದರೆ ಭಾಗವಹಿಸಿದ್ದ ಯೋಗಪಟುಗಳು 40 ಸಾವಿರ ಮಂದಿ ಮಾತ್ರ.

key words : mysore-world-yoga-day-celebration-tourism- department- unnecessary-expense