ಮೈಸೂರು ವಿವಿ 100ನೇ ಘಟಿಕೋತ್ಸವ : ಪ್ರಧಾನಿ ಮೋದಿ ವರ್ಚುವಲ್ ಭಾಷಣ ವೀಕ್ಷಣೆಗೆ ವಿವಿಯಿಂದ ಸಕಲ ವ್ಯವಸ್ಥೆ

kannada t-shirts

ಮೈಸೂರು,ಅಕ್ಟೋಬರ್,16,2020(www.justkannada.in) : ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವ ಅ.19ರಂದು ನಡೆಯಲಿದ್ದು, ಘಟಿಕೋತ್ಸವ ಉದ್ದೇಶಿಸಿ ಪ್ರಧಾನಿ ಮೋದಿ ಅವರು ಭಾಷಣ ಮಾಡುತ್ತಿರುವುದು ಈ ಬಾರಿಯ ವಿಶೇಷ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಂತೋಷವ್ಯಕ್ತಪಡಿಸಿದರು.jk-logo-justkannada-logo

ಶುಕ್ರವಾರ ಸುದ್ದಿಗೋಷ್ಠಿಯಯಲ್ಲಿ ಮಾತನಾಡಿದ ಅವರು, ಕ್ರಾಫರ್ಡ್ ಹಾಲ್ ನ ಸಭಾಂಗಣದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ವರ್ಚುವಲ್ ಲೈವ್ ಮೂಲಕ ಪ್ರಧಾನಿ ಮೋದಿ ಅವರು 25ನಿಮಿಷಗಳ ಕಾಲ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದರು.

ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಬಾಯಿ ರೂಡಾಭಾಯ್ ವಾಲಾ ಅವರು ಅಧ್ಯಕ್ಷತೆವಹಿಸಲಿದ್ದು, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಭಾಗವಹಿಸಲಿದ್ದಾರೆ. ಕೊರೊನಾ ಹಿನ್ನಲೆ ಕಾರ್ಯಕ್ರಮಕ್ಕೆ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸಿಂಡಿಕೇಟ್ ಮತ್ತು ಶಿಕ್ಷಣ ಮಂಡಳಿಯ ಸದಸ್ಯರು ಭಾಗವಹಿಸುವರು ಎಂದು ಹೇಳಿದರು.Mysore VV-100th-Anniversary-Prime Minister-Modi-Virtual-Speech-Views-View

29,018 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ, 654 ಮಂದಿಗೆ ಪಿಹೆಚ್‌ಡಿ

ಈ ಬಾರಿ 29,018 ವಿದ್ಯಾರ್ಥಿಗಳಿಗೆ ವಿವಿಧ ಪದವ,(18,344 ಮಂದಿ ಮಹಿಳೆಯರು ಮತ್ತು 10674 ಮಂದಿ ಪುರುಷರು), 654 ವಿದ್ಯಾರ್ಥಿಗಳಿಗೆ ಪಿಹೆಚ್‌ಡಿ(264 ಮಂದಿ ಮಹಿಳೆಯರು, 390ಮಂದಿ ಪುರುಷರು), 7971 ಮಂದಿಗೆ ಸ್ನಾತಕೋತ್ತರ ಪದವಿ, 20,393 ಮಂದಿಗೆ ಸ್ನಾತಕಪದವಿಯನ್ನು ಪ್ರಧಾನ ಮಾಡಲಾಗುವುದು. ಒಟ್ಟು 392 ಪದಕಗಳು ಮತ್ತು 198 ಬಹುಮಾನಗಳನ್ನು 230 ಅಭ್ಯರ್ಥಿಗಳು ಪಡೆದುಕೊಂಡಿದ್ದು. ಈ ಸಂದರ್ಭ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಕೂಡಾ ಪಿಹೆಚ್‌ಡಿ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಘಟಿಕೋತ್ಸವ ಕಾರ್ಯಕ್ರಮದ ರೂಪರೇಷೆ

ಕೊರೊನಾ ಹಿನ್ನೆಲೆಯಲ್ಲಿ ಅತಿಹೆಚ್ಚು ಚಿನ್ನದ ಪದಕ ಪಡೆದ 30 ಮಂದಿಗೆ ಮಾತ್ರ ಬೆಳಗ್ಗೆ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುವುದು. ಮಧ್ಯಾಹ್ನ 2.30ಕ್ಕೆ ಆಂಧ್ರ ಪ್ರದೇಶದ ಕೇಂದ್ರ ವಿವಿ ಕುಲಪತಿ ಪ್ರೊ.ಎಸ್.ಎ.ಕೋರಿ ಅತಿಥಿಯಾಗಿ ಭಾಗವಹಿಸಲಿದ್ದು, ಈ ಸಂದರ್ಭ ಎಲ್ಲಾ ನಿಕಾಯದ ವಿದ್ಯಾರ್ಥಿಗಳಿಗೆ 25 ಮಂದಿಯಂತೆ ಅವಕಾಶ ನೀಡಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಬಾಕ್ಸ್ ಮಾದರಿಯಲ್ಲಿ ಪದಕ ವಿತರಣೆ

ಈ ಬಾರಿ ಕೊರೊಳಿಗೆ ಧರಿಸುವ ಮಾದರಿಯಲ್ಲಿ ಪದಕಗಳನ್ನು ವಿತರಿಸುವುದಿಲ್ಲ. ಬಾಕ್ಸ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡಲಾಗುವುದು. 100ನೇ ಘಟಿಕೋತ್ಸವದ ಹಿನ್ನೆಲೆ 12 ತಿಂಗಳು ವಿಶೇಷ ಉಪನ್ಯಾಸ ಏರ್ಪಡಿಸುವ ಆಲೋಚನೆಯಿತ್ತು. ಆದರೆ, ಕೊರೊನಾದಿಂದಾಗಿ ಅದು ಸಾಧ್ಯವಾಗಿಲ್ಲ. ಜನವರಯಿಂದ ವಿಶೇಷ ಉಪನ್ಯಾಸ ಆರಂಭಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಯೂಟ್ಯೂಬ್, ಫೇಸ್ ಬುಕ್ ಲೈವ್ ಸೇರಿದಂತೆ ಮೂರು ಕಡೆ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ

ಘಟಿಕೋತ್ಸವ ಕಾರ್ಯಕ್ರಮವನ್ನು (https://uni-mysore.ac.in/), ವಿವಿಯ uomlive Youtube Channel ಮತ್ತು Facebook page ನಲ್ಲಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುವುದು. ಅದಲ್ಲದೇ, ಸೆನೆಟ್ ಹಾಲ್, ವಿಜ್ಞಾನಭವನ, ಶತಮಾನೋತ್ಸವ ಭವನದಲ್ಲಿ ಒಟ್ಟು ಮೂರು ಕಡೆಗಳಲ್ಲಿ ಪ್ರಾಧ್ಯಾಪಕರು ಹಾಗೂ ಪೋಷಕರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೋ.ಹೇಮಂತ್ ಕುಮಾರ್ ತಿಳಿಸಿದರು.

key words : Mysore VV-100th-Anniversary-Prime Minister-Modi-Virtual-Speech-Views-View

website developers in mysore