ಡಿ.23, 24ರಂದು ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದಿಂದ ರಾಷ್ಟ್ರ ಮಟ್ಟದ ವೆಬಿನಾರ್

ಮೈಸೂರು,ಡಿಸೆಂಬರ್,21,2020(www.justkannada.in) : ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಭಾರತದಲ್ಲಿ ಗಾಂಧಿ ಮತ್ತು ಅವರ ಸಮಕಾಲೀನರು ವಿಷಯ ಕುರಿತು ಡಿಸೆಂಬರ್ 23 ಮತ್ತು 24 ರಂದು ಎರಡು ದಿನಗಳ ರಾಷ್ಟ್ರ ಮಟ್ಟದ ವೆಬಿನಾರ್ ಆಯೋಜಿಸಲಾಗಿದೆ.Teachers,solve,problems,Government,bound,Minister,R.Ashokಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಎಂ.ಎಸ್.ಶೇಖರ್ ಈ ಕುರಿತು ಮಾತನಾಡಿ, ವೆಬಿನಾರ್ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆಯಲಿದ್ದು, ಡಿಸೆಂಬರ್ 23 ರಂದು ಬೆಳಿಗ್ಗೆ 10ಕ್ಕೆ ವೆಬಿನಾರ್ ಅನ್ನು ಮೈಸೂರು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಷ್ಟ್ರ ಮಟ್ಟದ ವೆಬಿನಾರ್ ನಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್, ಗಾಂಧೀಜಿ ಮತ್ತು ರಾಮಮನೋಹರ ಲೋಹಿಯಾ, ಗಾಂಧೀಜಿ ಮತ್ತು ರವೀಂದ್ರನಾಥ್ ಠಾಗೂರ್, ಗಾಂಧೀಜಿ ಮತ್ತು ನಾರಾಯಣಗುರು, ಗಾಂಧೀಜಿ ಮತ್ತು ವಿನೋಬಾ ಬಾವೆ, ಗಾಂಧೀಜಿ ಮತ್ತು ಕಸ್ತೂರಬಾ ಮುಂತಾದ 17 ಪ್ರಬಂಧಗಳ ಮಂಡನೆ ಮಾಡಲಾಗುವುದು ಎಂದು ಹೇಳಿದರು.

Mysore VV-Dec.23, 24th-Gandhi-Studies-Center-Nationwide-webinar

ವೆಬಿನಾರ್ ನಲ್ಲಿ ರಾಷ್ಟ್ರದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಹಿರಿಯ ತಜ್ಞರುಗಳು ಪ್ರಬಂಧ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.

English summary….

National-level webinar on Dec. 23, 24, from Gandhi Research Centre, UoM
Mysuru, Dec. 21, 2020 (www.justkannada.in): The Gandhi Research Centre, University of Mysore has organised a national-level webinar on the topic, “Gandhi and his Contemporaries in India’, on December 23, and 24.
Addressing a press meet in Mysuru, Mr. M.S. Shekar, Director, Gandhi Research Centre, University of Mysore explained that Prof. G. Hemanth Kumar, Vice-Chancellor, University of Mysore will inaugurate the two-day webinar at 10 am on December 23.Mysore VV-Dec.23, 24th-Gandhi-Studies-Center-Nationwide-webinar
About 17 different thesis and essays on Gandhiji and Ambedkar, Gandhiji and Rammanohar Lohia, Gandhiji and Ravindranath Tagore, Gandhiji and Narayanaguru, Gandhiji and Vinobha Bhave, Gandhiji and Kasturba will be presented in the webinar. Renowned senior experts from various reputed universities of the country will present the thesis and essays.
Keywords: National-level webinar/ Gandhiji and his contemporaries/ University of Mysore

key words : Mysore VV-Dec.23, 24th-Gandhi-Studies-Center-
Nationwide-webinar