“ಮೈಸೂರು ವಿವಿ, ಎಟಿಐ ಒಪ್ಪಂದದಂತೆ ಸರ್ಕಾರಿ ಅಧಿಕಾರಿಗಳ ಕೌಶಲಾಭಿವೃದ್ಧಿಗಾಗಿ ಆನ್ ಲೈನ್ ಕೋರ್ಸ್‌ ಗಳ ಪರಿಚಯ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

kannada t-shirts

ಮೈಸೂರು,ಮಾರ್ಚ್,17,2021 (www.justkannada.in) : ಮೈಸೂರು ವಿಶ್ವವಿದ್ಯಾಲಯವು ಆಡಳಿತ ತರಬೇತಿ ಸಂಸ್ಥೆ(ಎಟಿಐ) ಜೊತೆಗೆ ೨೦೨೦, ಜ.೨೬ರಂದು ಮಾಡಿಕೊಂಡ ಒಪ್ಪಂದದ ಪ್ರಕಾರ ಸರ್ಕಾರಿ ಅಧಿಕಾರಿಗಳ ಕೌಶಲಾಭಿವೃದ್ಧಿಯಾಗುವಂತೆ ಮ್ಯಾಸಿವ್ ಓಪನ್ ಎಂಡ್ ಆನ್‌ ಲೈನ್ ಕೋರ್ಸ್ ‌ಗಳನ್ನು ಪರಿಚಯಿಸುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

jkಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ‘ಸ್ವಯಂ’- ಡಿಜಿಟಲ್ ಲರ್ನಿಂಗ್ ಎಂಡ್ ಮಾನಿಟರಿಂಗ್ ಸೆಲ್, ಮೈಸೂರು ವಿಶ್ವವಿದ್ಯಾನಿಲಯದ ಇಎಂಆರ್‌ಸಿ ಹಾಗೂ ಆಡಳಿತ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ‘ಡೆವಲಪ್‌ಮೆಂಟ್ ಆಫ್ ಇ-ಕಂಟೆಂಟ್ಸ್ ಫಾರ್ ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸಸ್ (ಎಂಒಒಸಿ)’ ವಿಷಯದ ಬಗ್ಗೆ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅವಶ್ಯಕತೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಾಗಾರ

ಸರ್ಕಾರಿ ನೌಕರರ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಒಪ್ಪಂದದ ಪ್ರಕಾರ ಈ ಕಾರ್ಯಾಗಾರ ನಡೆಯುತ್ತಿದ್ದು, ಅವಶ್ಯಕತೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಾಗಾರಗಳನ್ನು ನಡೆಸಲು ನಾವು ಸಿದ್ಧ ಎಂದರು.

ಎಟಿಐ ಜಂಟಿ ಸಿದ್ಧತೆ ಮತ್ತು ವಿತರಣಾ ಆಯ್ಕೆಗಳಲ್ಲಿನ ವಿವಿಧ ಕೇಂದ್ರಗಳಲ್ಲಿ ಐದು ವೃತ್ತಿಪರ ಪ್ರಮಾಣಪತ್ರ ಕೋರ್ಸ್‌ಗಳು, ರಾಜ್ಯ ಸರ್ಕಾರದ ನೋಂದಾಯಿತ, ದಾಖಲಾದ ಅಧಿಕಾರಿಗಳಿಗೆ. ಇ-ಲರ್ನಿಂಗ್ ಕೋರ್ಸ್, ಪಠ್ಯಕ್ರಮದ ವಿನ್ಯಾಸ, ಕೋರ್ಸ್ ವಿಷಯ ತಯಾರಿಕೆ, ಆಡಿಯೋ-ವಿಡಿಯೋ ಸಂಪನ್ಮೂಲಗಳ ರೆಕಾರ್ಡಿಂಗ್, ವೆಬ್ ಪೋರ್ಟಲ್ ಸಂಪನ್ಮೂಲಗಳು, ಪರೀಕ್ಷಾ ಪ್ರಕ್ರಿಯೆ ಮತ್ತು ಆನ್‌ಲೈನ್‌ ಕಾರ್ಯಕ್ರಮದ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಪ್ರತಿಯೊಂದು ಹಂತದಲ್ಲೂ ಸಮನ್ವಯ ಸಾಧಿಸುತ್ತದೆ ಎಂದು ವಿವರಿಸಿದರು.

Mysore Vivi-ATI contract-skill-development-government-officials-Introduction-Online-Courses-Chancellor-Prof.G.Hemant Kumar

ಅಭಿವೃದ್ಧಿಯ ಉದ್ದೇಶಕ್ಕಾಗಿ ಎಟಿಐ ಮತ್ತು ಸಂಪನ್ಮೂಲ ವ್ಯಕ್ತಿಗಳ ಅಧ್ಯಾಪಕ ಸದಸ್ಯರಿಗೆ , ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು MOOCS ನ ವಿಷಯ ವಿತರಣೆ ಮತ್ತು ಅಭಿವೃದ್ಧಿ ಸಂಬಂಧಿಸಿದಂತೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಿ ಎಂದು ತಿಳಿಸಿದರು.

ಆನ್‌ಲೈನ್  ಉಪನ್ಯಾಸಗಳು, ಸಾಮಾನ್ಯ ತರಗತಿಗಳಿಂತ ಇನ್ನೂ ಹೆಚ್ಚು ಪರಿಣಾಮಕಾರಿ

ಕಾರ್ಯಗಾರವನ್ನು ಆನ್‌ ಲೈನ್ ಮೂಲಕ ಉದ್ಘಾಟಿಸಿದ ಆಡಳಿತ ತರಬೇತಿ ಸಂಸ್ಥೆಯ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ವಿ.ಮಂಜುಳ ಅವರು ಮಾತನಾಡಿ, ಆನ್‌ಲೈನ್ ಮೂಲಕ ಮಾಡುವ ಪಾಠ, ಉಪನ್ಯಾಸಗಳು ಸಾಮಾನ್ಯ ತರಗತಿಗಳಿಂತ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರಬೇಕು ಎಂದರು.

ಸಾಮಾನ್ಯವಾಗಿ ತರಗತಿಯಲ್ಲಿ ಎಲ್ಲರೂ ಒಂದೆಡೆ ಕುಳಿತು ಪಾಠ ಕೇಳುವ ಕಾರಣ ಎಲ್ಲರ ಗಮನವೂ ಉಪನ್ಯಾಸಕರ ಮೇಲಿರುತ್ತದೆ. ಆದರೆ, ಆನ್ ‌ಲೈನ್‌ನಲ್ಲಿ ಪಾಠ ಕೇಳುವಾಗ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿರುತ್ತಾರೆ. ಆದ್ದರಿಂದ, ಅವರ ಗಮನ ಸೆಳೆಯುವಂತೆ, ಪರಿಣಾಮಕಾರಿಯಾಗಿ ವಿಷಯ ಮಂಡನೆ ಮಾಡಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕರು ತಮ್ಮ ಧ್ವನಿಯ ಏರಿಳಿತಗಳ ಬಗ್ಗೆಯೂ ಗಮನವಿಡಬೇಕು, ಅಂಕಿ-ಅಂಶಗಳು, ಚಿತ್ರಗಳು ಮಾತ್ರವಲ್ಲದೆ ವಿಡಿಯೋಗಳನ್ನು ತೋರಿಸಿ ಗಮನಸೆಳೆಯಬೇಕು ಎಂದು ತಿಳಿಸಿದರು.

ಮೈಸೂರು ವಿವಿ ತಾಂತ್ರಿಕವಾಗಿ ನಿರಂತರ ಸುಧಾರಣೆಗಳನ್ನು ಮಾಡಿಕೊಳ್ಳುತ್ತಿದೆ

ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಮೈಸೂರು ವಿವಿ ತಾಂತ್ರಿಕವಾಗಿ ನಿರಂತರ ಸುಧಾರಣೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರಸ್ತುತ ೧೦ ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಹಾಗೂ ೩ ಸ್ನಾತಕಪೂರ್ವ ಕೋರ್ಸ್‌ಗಳನ್ನು ಆರಂಭಿಸಿದ್ದು, ಪ್ರಪಂಚದಾದ್ಯಂತ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಕಲಿಯುತ್ತಿದ್ದಾರೆ ಎಂದರು.Mysore Vivi-ATI contract-skill-development-government-officials-Introduction-Online-Courses-Chancellor-Prof.G.Hemant Kumarಆನ್‌ಲೈನ್ ತರಗತಿಗಳು ಆಫ್ ‌ಲೈನ್ ತರಗತಿಗಳಿಗಿಂತ ಸುಲಭ. ಬೇರೆ ಬೇರೆ ವೃತ್ತಿಗಳಲ್ಲಿರುವ ಉದ್ಯೋಗಿಗಳು ಸುಲಭವಾಗಿ ತಮ್ಮಿಷ್ಟದ ಕೋರ್ಸ್ ಮಾಡಬಹುದು. ಅಲ್ಲದೇ ಇಂತಹ ಸಮಯಕ್ಕೆ, ಇಂತಹ ಸ್ಥಳಕ್ಕೆ ತಲುಪಿ ಪಾಠ ಕೇಳಬೇಕು ಎಂಬ ಯೋಚನೆಯಿಲ್ಲ. ಆನ್‌ಲೈನ್‌ನಿಂದಾಗಿ ಎಲ್ಲವೂ ಸುಲಭವಾಗುತ್ತದೆ ಎಂದು ತಿಳಿಸಿದರು.

ಕಾರ್ಯಗಾರದಲ್ಲಿ ಇಎಂಆರ್‌ಸಿ ನಿರ್ದೇಶಕ ಪ್ರೊ.ಎಚ್.ರಾಜಶೇಖರ್, ಮೈವಿವಿ ‘ಸ್ವಯಂ’ ಕೋರ್ಸ್‌ಗಳ ಸಂಯೋಜಕ ಡಾ.ಎಚ್.ಎಸ್.ಕುಮಾರ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ENGLISH SUMMARY….
Online courses for skill development of govt. officers as per UoM, ATE agreement: Prof. G. Hemanth Kumar
Mysuru, Mar.17, 2021 (www.justkannada.in): “According to an agreement between the University of Mysore, in association with the Administrative Training Institute (ATI) mad on July 26, 2020, the University of Mysore is introducing Massive Open and Online Courses for skill development of government officials,” informed Prof. G. Hemanth Kumar, Vice-Chancellor, University of Mysore.Mysore Vivi-ATI contract-skill-development-government-officials-Introduction-Online-Courses-Chancellor-Prof.G.Hemant Kumar
He participated in a one-day workshop on the topic ‘Development of E-Contents for Massive Open Online Courses (MOOC), organized jointly by ‘Swayam’- Digital Learning and Monitoring Cell, EMRC, University of Mysore and the Administrative Training Institute, held at the Vignana Bhavana in Manasagangotri today.
Presiding over the program he said, this workshop is being held as per an agreement to develop skills and hone the knowledge of government employees. “More such workshops will be conducted in the coming days if required.”
“It is a vocational course conducted at various selected centres of ATI. It helps in E-learning, designing of curriculum, preparation of course subjects, audio-visual resource recording, web portal resources, maintaining of the examination process and online program quality,” he explained.
Prof. H. Rajashekar, Director EMRC, Dr. H.S. Kumar, Coordinator, ‘SWAYAM’ Course, University of Mysore, and others participated in the workshop.
Keywords: University of Mysore/ course for skill development of government officers/ Administrative Training Institute

key words : Mysore Vivi-ATI contract-skill-development-government-officials-Introduction-Online-Courses-Chancellor-Prof.G.Hemant Kumar

website developers in mysore