ಪಂಡಿತ್ ನೆಹರು ಅವರನ್ನು ಟೀಕಿಸುವುದು ಬಿಜೆಪಿಗೆ ಶೋಭಾಯಮಾನ ತರದು : ಅಡಗೂರು ವಿಶ್ವನಾಥ್

 

ಮೈಸೂರು, ಆ.16, 2021 : (www.justkannada.in news) ಪಂಡಿತ್ ನೆಹರು ಅವರ ಬಗ್ಗೆ ಬಿಜೆಪಿ ಮುಖಂಡ ಸಿ.ಟಿ.ರವಿ ಮಾಡಿರೋ ಟೀಕೆ ಯಾರು ಮೆಚ್ಚುವಂತದ್ದಲ್ಲ. ಸಿ.ಟಿ.ರವಿ ನಮ್ಮ‌ ಪಕ್ಷದವರೇ, ಬಿಜೆಪಿ ಕಾರ್ಯದರ್ಶಿಗಳು. ಆದರೆ ಈ ರೀತಿಯ ಮಾತು ಶೋಭಾಯಮಾನ ತರುವಂತದ್ದಲ್ಲ. ಸಿ.ಟಿ.ರವಿ ಅವರು ಮೊದಲು ಓದಿ ಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್ ಹೇಳಿದಿಷ್ಟು…

ನೆಹರು ಮೃತಪಟ್ಟ ವೇಳೆ ಇದೇ ವಾಜಪೇಯಿ ಅವರೇ ಬಣ್ಣಿಸಿದ್ದಾರೆ. ಮೊದಲು ಇದನ್ನ ಸಿ.ಟಿ.ರವಿ ಅವರು ಓದಿಕೊಳ್ಳಬೇಕು‌. ಬಲಿಷ್ಠ ಭಾರತ ಕಟ್ಟಿದ ನೆಹರು ಬಗ್ಗೆ ಹುಕ್ಕಾಬಾರ್ ಆರೋಪ ಸಲ್ಲದು. ವಿರೋಧ ಪಕ್ಷದಲ್ಲಿದ್ದರು ಸಹ ಆರೋಗ್ಯಕರ ಚರ್ಚೆ ಮಾಡಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲುತ್ತೆ. ಇದೆಲ್ಲವು ಭಾರತದ ಚರಿತ್ರೆಯಾಗಿವೆ. ನೆಹರು ಅವರ ಆದರ್ಶ, ಕಾರ್ಯಕ್ರಮ ನಿಜಕ್ಕು ಶ್ಲಾಘನೀಯ.
ಆದರೆ ಅವರ ಬಗ್ಗೆ ಹುಕ್ಕಾ ಬಾರ್ ಎಂದು ಲಘುವಾಗಿ ಮಾತನಾಡಬಾರದು. ನಿಮಗೆ ಏನ್ ಗೊತ್ತಿದೆ ನೆಹರು ಅವರ ಬಗ್ಗೆ. ನೆಹರು ಅವರು ಭಾರತದ ಅಸ್ಮಿತೆ- ಭಾರತದ ಗರ್ವ. ಭಾರತದ ಅಸ್ಮಿತೆಯನ್ನ ಹೀಗೆ ಟೀಕೆ‌ ಮಾಡಬಾರದು. ಯಾರಿಗೋ ಓಲೈಸದಕ್ಕೋ? ಪ್ರಚಾರ ಪಡೆಯೋದಕ್ಕಾಗಿ ಈ ರೀತಿ ಹೇಳಿಕೆ ಸರಿಯಲ್ಲ. ಸಿ.ಟಿ.ರವಿ ಅವರ ಈ ಹೇಳಿಕೆಯನ್ನ ನಾನು ಖಂಡಿಸುತ್ತೇನೆ.
ಮೈಸೂರಿನಲ್ಲಿ ಸ್ವಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧವೇ ಆಕ್ರೋಶ ಹೊರಹಾಕಿದ ವಿಶ್ವನಾಥ್.

ಪ್ರಿಯಾಂಕ ಖರ್ಗೆ ಕೂಡ ವಾಜಪೇಯಿ ಬಗ್ಗೆ ಕುಡುಕ ಅನ್ನಬಾರದು. ವಾಜಪೇಯಿ ಭಾಷಣವನ್ನ ಕೇಳಲು ಒಂದು ವಾರ ದೆಹಲಿಯಲ್ಲೇ ಉಳಿಯುತ್ತಿದ್ದೆ. ಹೆದ್ದಾರಿ ಅಭಿವೃದ್ದಿ ಮೂಲಕ ಸಂಪರ್ಕ ಸಾಧನೆ ಸುಧಾರಣೆ. ನಿಮ್ಮ ತಂದೆಯನ್ನ ನೋಡಿ ಕಲಿತುಕೊಳ್ಳಿ. ನಿಮ್ಮ ತಂದೆ ಖರ್ಗೆ ನಮ್ಮ ನಾಯಕರು. ವೈಯುಕ್ತಿಕ ಜೀವನದ ಬಗ್ಗೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ಐವರು ಮಾಜಿ ಮುಖ್ಯಮಂತ್ರಿಗಳು ಯಾಕೆ ಮೌನ ವಹಿಸಿದ್ದೀರಿ. ಮಾಜಿ ಸಿಎಂಗಳಾದ ಹೆಚ್ಡಿಕೆ, ಸಿದ್ದರಾಮಯ್ಯ, ಬಿಎಸ್ವೈ, ಸದಾನಂದಗೌಡ, ಜಗದೀಶ್ ಶೆಟ್ಟರ್ ಇದ್ದೀರಿ. ನೀವುಗಳು ಈ ಬಗ್ಗೆ ಮಾತನಾಡಿ. ಯಾಕೆ‌ ನಿಮ್ಮ ಶಾಸಕರಿಗೆ ಶಟಪ್ ಅಂತ ಹೇಳುವ ನೈತಿಕತೆ ಕಳೆದುಕೊಂಡಿದ್ದೀರ. ಮೈಸೂರಿನಲ್ಲಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿಕೆ.

mysore-dc-does-not-power-spend-10-paise-all-power-vijayendra-mlc-h-vishwanath

ಖಾತೆ ಹಂಚಿಕೆ ವಿಚಾರದಲ್ಲಿ ಕ್ಯಾತೆ ತೆಗೆದಿರುವ ಸಚಿವರ ವಿರುದ್ಧ ಹರಿಹಾಯ್ದ ಎಚ್ ವಿಶ್ವನಾಥ್.

ಎಲ್ಲಾ ಸಚಿವರು ಸರ್ಕಾರದ ಭಾಗವಾಗಿರಲಿದ್ದಾರೆ. ಯಾವುದೇ ಖಾತೆಯನ್ನು, ಸಣ್ಣ ಖಾತೆ ದೊಡ್ಡ ಖಾತೆ ಎಂದುಕೊಳ್ಳಬಾರದು. ಕೊಟ್ಟಿರುವ ಖಾತೆಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಯಾವುದೇ ಖಾತೆ ಸಿಕ್ಕಿದ್ದರೂ ಸಮರ್ಥವಾಗಿ ನಿಭಾಯಿಸಬೇಕು. ಪ್ರಭಾವಿ ಖಾತೆಗಾಗಿ ಕ್ಯಾತೆ ತೆಗೆದಿರುವ ಸಚಿವರಿಗೆ ಕಿವಿ ಮಾತು ಹೇಳಿದ ಎಚ್ ವಿಶ್ವನಾಥ್.
ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕೆಂಬ ವಿಚಾರ. ಬಿಜೆಪಿ ನಾಯಕರ ಹೇಳಿಕೆಗೆ ಎಚ್ ವಿಶ್ವನಾಥ್ ಟಾಂಗ್. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕೆಂಬುದು ಸಣ್ಣತನವಾಗಿದೆ. ವಾಜಪೇಯಿ ಹೆಸರಿನಲ್ಲೂ ಕೆಲವು ಯೋಜನೆಗಳು ಇಲ್ಲವೇ. ಅದೇ ರೀತಿ ಬೇರೆ ಬೇರೆ ನಾಯಕರ ಹೆಸರಿನಲ್ಲೂ ಯೋಜನೆಗಳನ್ನು ತರಲಾಗಿದೆ. ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಹೇಳಿಕೆ

ಸಿಎಂ ಬಸವರಾಜ ಬೊಮ್ಮಾಯಿಗೆ ಯಡಿಯೂರಪ್ಪ ಸಲಹೆ :

ಹೈಕಮಾಂಡ್ ಸಲಹೆ ವಿಚಾರ. ತಂದೆ ಮಾವನ ಮಾರ್ಗದರ್ಶನ ತೆಗೆದುಕೊಳ್ಳಬೇಕು. ಆದರೆ ಅತ್ತೆಯ ಮಾರ್ಗದರ್ಶನ ತೆಗೆದುಕೊಳ್ಳಬಾರದು. ಮೈಸೂರಿನಲ್ಲಿ ಎಂ.ಎಲ್‌.ಸಿ ಎಚ್ ವಿಶ್ವನಾಥ್ ಹೇಳಿಕೆ.

ಶಾಲಾ ಕಾಲೇಜುಗಳ ಆರಂಭಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಎಚ್ ವಿಶ್ವನಾಥ್ ಪ್ರತಿಕ್ರಿಯೆ.

ಶಾಲೆಗಳನ್ನು ತೆರೆಯುವುದು ಸಣ್ಣ ವಿಚಾರವಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು, ತಜ್ಞರ ಜೊತೆ ಚರ್ಚಿಸಿ ಸಲಹೆ ಪಡೆಯಬೇಕು. ಶಾಲೆ ಆರಂಭದ ಬಗ್ಗೆ ಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಈ ಕುರಿತು ಪೋಷಕರು, ತಜ್ಞರು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆ ನಂತರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಹೇಳಿಕೆ.

key words : mysore-vishwanath-bjp-neharu-c.t.ravi

———