ರಾಜ್ಯದ ಮೊಟ್ಟ ಮೊದಲ ವೈಫೈ ಗ್ರಾಮ ಖ್ಯಾತಿ ಪಡೆದ ಮೈಸೂರಿನ ಈ ಗ್ರಾಮ.

ಮೈಸೂರು,ಮಾರ್ಚ್,3,2022(www.justkannada.in): ಮೈಸೂರು ಜಿಲ್ಲೆಯ ರಮ್ಮನಹಳ್ಳಿ ರಾಜ್ಯದ ಮೊಟ್ಟ ಮೊದಲ ವೈಫೈ ಗ್ರಾಮ ಎಂಬ ಖ್ಯಾತಿಗೆ ಪಾತ್ರವಾಗಿದೆ.

 ಹೌದು ಈ ಗ್ರಾಮದ ಮೂಲೆ ಮೂಲೆಯೂ ಈಗ ವೈ ಫೈ ಮಯವಾಗಿದೆ, ಬಿಎಸ್ಎನ್ಎಲ್ ವತಿಯಿಂದ ಸಾರ್ವಜನಿಕ ವೈ ಫೈ ಸೌಲಭ್ಯ ಪಡೆದ ಮೊದಲ ಗ್ರಾಮವಾಗಿದ್ದು ಈ ಮೂಲಕ ಡಿಜಿಟಲ್ ಹೆಗ್ಗಳಿಕೆಗೆ ಪಾತ್ರವಾಗಿದೆ. 50 ಎಂಬಿಪಿಎಸ್ ವೇಗದ ತನಕ ಇಂಟರ್ ನೆಟ್‌ ಸಂಪರ್ಕ,ಬಿಎಸ್‌ಎನ್‌ಎಲ್ ವೈ-ಫೈ 69 ಸೇರಿದಂತೆ 5 ಯೋಜನೆಗಳು ಜಾರಿಯಾಗಿವೆ.

69 ರೂ. ಪಾವತಿ ಮಾಡಿ 30 ದಿನದ ತನಕ 30 ಜಿಬಿ ಡೇಟಾ ಬಳಕೆ ಮಾಡಬಹುದಾಗಿದೆ, ಬಿಎಸ್‌ಎನ್‌ಎಲ್ ವೈಫೈ 9 ಯೋಜನೆಯಡಿ 9 ರೂ. ಪಾವತಿ ಮಾಡಿ ದಿನಕ್ಕೆ 1 ಜಿಬಿ ಡೇಟಾ, ಮೊಬೈಲ್ ಅಥವಾ ಲ್ಯಾಪ್ ಟಾಪ್ ಮೂಲಕ ವೈ-ಫೈ ಸಂಪರ್ಕ ಪಡೆಯಬಹುದಾಗಿದೆ.

Key words: Mysore-village – first -WiFi – state