ಕೊರೊನಾ ವಾರಿಯರ್ಸ್ ಚಿಕಿತ್ಸೆಗೆ ಮೈಸೂರಲ್ಲಿ ‘ವಿಕ್ರಂ’ ಆಸ್ಪತ್ರೆ ಸಜ್ಜು.

 

ಮೈಸೂರು, ಜು.20, 2020 : (www.justkannada.in news) : ಕೋವಿಡ್-೧೯ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸು ಅಧಿಕಾರಿಗಳು, ವೈದ್ಯರು ಹಾಗೂ ಪೊಲೀಸರಿಗಾಗಿ ಮೈಸೂರಿನ ವಿಕ್ರಂ ಆಸ್ಪತ್ರೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

ಯಾದವಗಿರಿಯ ವಿವೇಕಾನಂದ ರಸ್ತೆಯಲ್ಲಿರುವ ವಿಕ್ರಂ ಜೇಷ್ಠ ಆಸ್ಪತ್ರೆಯಲ್ಲಿ ನಾಳೆಯಿಂದ ಚಿಕಿತ್ಸೆ ಆರಂಭ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕರಿ ಅಭಿರಾಮ್ ಜಿ.ಶಂಕರ್ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಸೌಲಭ್ಯ ಪರಿಶೀಲಿಸಿದರು.

Mysore-vikarm-hospital-covid-warriors-separate-treatment

ಆಸ್ಪತ್ರೆಯ ೩ ಮತ್ತು ೪ನೇ ಮಹಡಿಯಲ್ಲಿ ೯೦ ಹಾಸಿಗೆ ಸಿದ್ದಗೊಂಡಿದೆ. ವಿಕ್ರಂ ಆಸ್ಪತ್ರೆಗೆ ವೆಂಟಿಲೇಟರ್, ಸೆಂಟ್ರಲೈಸಡ್ ಆಕ್ಸಿಜನ್, ಹಾಸಿಗೆ , ಪಿಪಿಇ ಕಿಟ್, ಔಷಧಿ, ಜನರೇಟರ್ ಮುಂತಾದ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾಡಳಿತ ಒದಗಿಸಿದೆ, ಕೇವಲ ಫ್ರೆಂಟ್‌ಲೈನ್ ವಾರಿಯರ್ಸ್   ಎಂದೇನಿಲ್ಲ, ಕೋವಿಡ್ ನೋಡಲ್ ಅಧಿಕಾರಿಗಳು ರೆಫರ್ ಮಾಡಿ ಕಳುಹಿಸುವ ರೋಗಿಗಳೀಗೆ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಉದ್ದೇಶ ಹೊಂದಲಾಗಿದೆ.

ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ. ವೆಂಕಟೇಶ್, ಮುಡಾ ಆಯುಕ್ತ  ಡಾ. ಡಿ.ಬಿ.ನಟೇಶ್, ಎಸ್ಪಿ ಸಿ.ಬಿ ರಿಷ್ಯಂತ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ. ಶೀಲಾ ಮತ್ತಿತರರು ಹಾಜರಿದ್ದರು.

 

ooooo

key words : Mysore-vikarm-hospital-covid-warriors-separate-treatment