ಕೋವಿಡ್ ಸಂಕಷ್ಟದಲ್ಲಿ ಮೈಸೂರಿಗರಿಗೆ ನೆರವಾಗಲು ‘ಸ್ವಸ್ಥ್’ ಮಾಹಿತಿ ತಾಣ ರೂಪಿಸಿದ ವಿದ್ಯಾವರ್ಧಕ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿ ವಾರಿಯರ್ಸ್ !ಕೋವಿಡ್ ಸಂಕಷ್ಟದಲ್ಲಿ ಮೈಸೂರಿಗರಿಗೆ ನೆರವಾಗಲು ‘ಸ್ವಸ್ಥ್’ ಮಾಹಿತಿ ತಾಣ ರೂಪಿಸಿದ ವಿದ್ಯಾವರ್ಧಕ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿ ವಾರಿಯರ್ಸ್ !

kannada t-shirts

ಮೈಸೂರು, ಮೇ 19, 2021 (www.justkannada.in): ಕೊರೊನಾ ಸಂಕಷ್ಟ ಕಾಲದಲ್ಲಿ ಜನರಿಗೆ ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಗರದ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾಡಳಿತದ ಸಹಕಾರದೊಂದಿಗೆ “ಸ್ವಸ್ಥ್ ಮೈಸೂರು” ವೆಬ್ಸೈಟ್ಅನ್ನು ರೂಪಿಸಿದ್ದಾರೆ.

ಆಸ್ಪತ್ರೆಗಳ ಬೆಡ್ ಲಭ್ಯತೆ, ರೆಮಿಡಿಸಿವಿರ್, ಕೊರೊನಾ ಲಸಿಕೆ ಎಲ್ಲಿ ದೊರೆಯುತ್ತದೆ, ಉಚಿತ ಊಟ, ಔಷಧ, ಕೋವಿಡ್ ಕೇರ್ ಸೆಂಟರ್ ಮತ್ತಿತರ ಮಾಹಿತಿ ಈ ಜಾಲತಾಣಗಳಲ್ಲಿ ನೀಡಲಾಗಿದೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಮೈಸೂರಿನ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ 7 ವಿದ್ಯಾರ್ಥಿಗಳು ಸ್ವಸ್ತ್ ಮೈಸೂರು.ಕಾಂ www.svasthmysuru.com ಎಂಬ ವೆಬ್ಸೈಟ್ ರೂಪಿಸಿದ್ದಾರೆ.

ಮೈಸೂರಿನಲ್ಲಿ ಉಲ್ಬಣಗೊಳ್ಳುತ್ತಿದ್ದ ಕೊರೊನಾ ಪ್ರಕರಣದಿಂದಾಗಿ ಒಂದೊಂದು ಮಾಹಿತಿಗೂ ಜನರು ಪರದಾಡುವುದನ್ನು ಗಮನಿಸುತ್ತಿದ್ದ ನಾವು, ವೆಬ್ಸೈಟ್ನಲ್ಲಿ ಸಂಪೂರ್ಣ ವಿವರ ನೀಡಲು ನಿರ್ಧರಿಸಿದೆವು. ಇದಕ್ಕಾಗಿ ನಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ತಮ್ಮ ಯೋಜನೆ ಕುರಿತು ವಿವರಿಸಿದೆವು. ಖುಷಿಯಿಂದಲೇ ಈ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿದ ಪ್ರೊ.ಸದಾಶಿವೆಗೌಡ ಅವರು, ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

ಬಳಿಕ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕೋವಿಡ್ ವಾರ್ ರೂಂ ಉಸ್ತುವಾರಿ ಮಂಜುನಾಥ್ ಕೂಡ ಇದಕ್ಕೆ ಸಹಕಾರ ಎಲ್ಲಾ ರೀತಿಯ ಮಾಹಿತಿ, ಸಹಕಾರ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ವಿದ್ಯಾರ್ಥಿಗಳ ಪೂರ್ವ ಸಿದ್ಧತೆ ಪರಿಶೀಲಿಸಿ, ಕೆಲ ಉಪಯುಕ್ತ ಸಲಹೆಗಳನ್ನು ನೀಡಿದ್ದರು ಎಂದು ಎಂದು ವೆಬ್ಸೈಟ್ ರೂಪಿಸುವ ಗುಂಪಿನ ಸದಸ್ಯೆಯಾದ ವಿದ್ಯಾರ್ಥಿನಿ ಗಣ್ಯ ತಿಳಿಸಿದ್ದಾರೆ.

ಜಾಲತಾಣ ರೂಪಿಸಿದ ವಿದ್ಯಾರ್ಥಿ ವಾರಿಯರ್ಸ್ ಗಳಿವರು…

ಕಾಲೇಜಿನ ಬಿಇ ಮೂರನೇ ಮತ್ತು ನಾಲ್ಕನೇ ವರ್ಷದ ವಿದ್ಯಾರ್ಥಿಗಳಾದ ಮೋಹನ್ ಕುಮಾರ್, ಗಣ್ಯ ಎ, ವಿಶೃತ್ , ಶೀತಲ್ , ಸುಷ್ಮಾ ಗಣೇಶ್, ಸಂಜನಾ ಶ್ರೀನಾಥ್, ಯೋಗೇಶ್ ಈ ಏಳು ಮಂದಿಯ ತಂಡ ವೆಬ್ಸೈಟ್ನ ರೂವಾರಿಗಳು.

website developers in mysore