ಅಶಕ್ತರ ಪಾಲಿನ ಆಶಾಕಿರಣ ಮೈಸೂರಿನ ಉಷಾಕಿರಣ ಕಣ್ಣಾಸ್ಪತ್ರೆ.

Mysore-Usha Kiran- Eye Hospital-free-treatment 

kannada t-shirts

 

ಮೈಸೂರು, ಜೂ.08, 2022 : (www.justkannada.in news)ಉಷಾ ಕಿರಣ್ ಚಾರಿಟಬಲ್ ಟ್ರಸ್ಟ್ ಹಾಗೂ ಉಷಾ ಕಿರಣ್ ಕಣ್ಣಿನ ಆಸ್ಪತ್ರೆ ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸುಪರಿಚಿತ. ಸಂಸ್ಥೆಯು ಕಳೆದ ಹನ್ನೆರಡು ವರ್ಷಗಳಿಂದ ಮೈಸೂರಿನ ‘ಶ್ರೀ ವಿವೇಕಾನಂದ ಸೇವಾಶ್ರಮ’ ದ ಜೊತಗೂಡಿ ಕಣ್ಣಿನ ತೊಂದರೆಯಿರುವ ಬಡಮಕ್ಕಳಿಗೆ ಶಸ್ತ್ರಚಿಕಿತ್ಸೆಗಳನ್ನೂ ಸೇರಿದಂತೆ, ಉಚಿತ ಚಿಕಿತ್ಸೆಯ ಸೇವೆಯನ್ನು ತಲುಪಿಸುತ್ತಿದೆ.

ಈವರೆಗೆ ಸುಮಾರು ನಾಲ್ಕು ಲಕ್ಷ ಮಕ್ಕಳನ್ನು ಪರೀಕ್ಷೆ ಮಾಡಲಾಗಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡಕ ಕೊಡಲಾಗಿದೆ , ಹಾಗು ಮುನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಶಸ್ತ್ರಚಿಕಿತ್ಸೆಯಿಂದ ಅವರ ಕಣ್ಣಿನ ತೊಂದರೆಗಳನ್ನು ಪರಿಹರಿಸಲಾಗಿದೆ.

ಹದಿನೆಂಟು ವರ್ಷಗಳವರೆಗಿನ ಮಕ್ಕಳಲ್ಲಿ ಕಣ್ಣಿನ ಪೊರೆ, ಮಾಲುಗಣ್ಣು, ಇಳಿಬಿದ್ದ ಕಣ್ಣುರೆಪ್ಪೆಗಳು, ಕಣ್ಣೀರಿನ ಚೀಲದ ಊತ ಅಥವಾ ಹರಿಯುವಿಕೆ, ರೆಟಿನಾ ಮತ್ತಿತರ ಕಣ್ಣಿನ ಒಳಗಿನ ಭಾಗಗಳಲ್ಲಿ ಬೆಳೆದ ದುರ್ಮಾಂಸದ ತೊಂದರೆ, ರೆಟಿನೋಪತಿ, ಇನ್ಯಾವುದೇ ಕಾರಣದಿಂದ ಕಣ್ಣಿಗೆ ಬಿದ್ದ ಏಟು, ಅಥವಾ ಹುಟ್ಟಿನಿಂದಲೇ ಬರಬಹುದಾದ ಹಲವಾರು ಕಣ್ಣಿನ ತೊಂದರೆಗಳೂ ಸೇರಿದಂತೆ ಕಣ್ಣಿನ ಹತ್ತು ಹಲವು ತೊಂದರೆಗಳಿಗೆ ಇಲ್ಲಿ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗುತ್ತದೆ.

ಈ ಉಚಿತ ಶಸ್ತ್ರಚಿಕಿತ್ಸೆಯ ಯೋಜನೆಯ ಫಲಾನುಭವಿಗಳನ್ನು ಆರ್ಥಿಕ ಸಂಕಷ್ಟದಲ್ಲಿ ಇರುವ, ಸೂಕ್ತ ಚಿಕಿತ್ಸೆ ಬೇಕಾಗಿರುವ ಮಕ್ಕಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನ ಮೂಲಕ, ಗುರುತಿಸಲಾಗುತ್ತದೆಯಾದರೂ ಆಯುಷ್ಮಾನ್ ಭಾರತ್ ನ ಯಾವುದೇ ಹಣಕಾಸಿನ ಬೆಂಬಲವನ್ನು ಈ ಯೋಜನೆ ಪಡೆಯುತ್ತಿಲ್ಲ. ಚಿಕಿತ್ಸೆಯ ಪೂರಾ ವೆಚ್ಚವನ್ನು, ಉಷಾ ಕಿರಣ್ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀವಿವೇಕಾನಂದ ಸೇವಾಶ್ರಮ ಹಲವಾರು ದಾನಿಗಳ ಮತ್ತು ಸಂಸ್ಥೆಗಳ ಬೆಂಬಲದಿಂದ ನಡೆಸುತ್ತಿದ್ದಾರೆ. ಚಿಕಿತ್ಸೆಗೆ ಒಳಗಾಗುವ ಮಕ್ಕಳ ಕುಟುಂಬಗಳ ಆದಾಯದ ಆಧಾರದಿಂದ ಮಾತ್ರವೇ ಯಾರಿಗೆ ಉಚಿತ ಚಿಕಿತ್ಸೆ ನೀಡಬೇಕೆಂಬ ನಿರ್ಧಾರ ಮಾಡಲಾಗುತ್ತದೆ. ಯಾವ ಮಕ್ಕಳಿಗೂ ಚಿಕಿತ್ಸೆ ನಿರಾಕರಿಸಲಾಗುವುದಿಲ್ಲ.

ಚಿಕ್ಕ ಮಕ್ಕಳಲ್ಲಿ ಇಂತಹ ಕಣ್ಣಿನ ತೊಂದರೆಗಳು ಕಂಡು ಬಂದು, ಅವರ ಪೋಷಕರಿಗೆ ಚಿಕಿತ್ಸೆಯ ವೆಚ್ಚವನ್ನು ತುಂಬಿಸಲು ಸಾಧ್ಯವಿಲ್ಲವೆನ್ನಿಸಿದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಉಷಾ ಕಿರಣ್ ಕಣ್ಣಿನ ಆಸ್ಪತ್ರೆಯ ಡಾ. ರವಿಶಂಕರ್ ಅವರನ್ನು (ದೂ.ಸಂ. 9845971425), ಅಥವಾ ಶ್ರೀ ವಿವೇಕಾನಂದ ಸೇವಾಶ್ರಮದ ಶ್ರೀ ಸೇತೂರಾಂ ಅವರನ್ನು (ದೂ.ಸಂ. 8105946140) ಸಂಪರ್ಕಿಸಿ. ನಿಮಗೆ ಇಂತಹ ಮಕ್ಕಳ ವಿಷಯ ಗೊತ್ತಿದ್ದರೆ, ಅವರ ಕುಟುಂಬಗಳೊಡನೆ ಈ ವಿಷಯವನ್ನು ಹಂಚಿಕೊಳ್ಳಿ. ನಂತರ ಆ ಮಕ್ಕಳಿಗೆ ಮುಂದಿನ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುವುದು.

ಇದು ಮೈಸೂರಿಗೆ ಮಾತ್ರ ಸೀಮಿತವಾಗಿರದೇ, ದೇಶದ ಯಾವುದೇ ಭಾಗದಿಂದ ಬರುವ ಮಕ್ಕಳಿಗೂ ಕೂಡ ಅನ್ವಯವಾಗುತ್ತದೆ. ಮಕ್ಕಳ ಚಿಕಿತ್ಸೆ ಎಷ್ಟು ಜರೂರಾಗಿದೆ, ಮತ್ತು ಅವರ ಹಣಕಾಸಿನ ಪರಿಸ್ಥಿತಿ – ಇವೆರಡೇ ಉಚಿತ ಶಸ್ತ್ರಚಿಕಿತ್ಸೆ ಮಾಡಲು ಬೇಕಾಗುವ ಅಳತೆಗೋಲು.

15 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಇಂತಹ ದೊಡ್ಡ ಯೋಜನೆ ಹಲವಾರು ಜನರ ಮತ್ತು ಸಂಸ್ಥೆಗಳ ಸಹಕಾರವಿಲ್ಲದೇ ಯಶಸ್ವಿಯಾಗಲು ಸಾಧ್ಯವಿಲ್ಲ.

-ಸುನೀತಾ ಮಂಜುನಾಥ್

key words : Mysore-Usha Kiran- Eye Hospital-free-treatment

ENGLISH SUMMARY : 

This is ongoing work of Usha Kiran Eye Hospital ,Mysore with Sri Vivekakanda Sevashrama , at Mysore, from last 15 years- any child coming from lower socio- economic strata,needing Surgical care/cure of ailments for the eye will be taken care .

Diseases handled are – cataracts at birth or in young age, traumatic cataract, squints, droopy lids, problems of tear sac leading to tearing, Swelling of tear sac, Tumors / growth of Retina and other structures of the eye, Retinopathy of prematurity (a condition developed in neonatal babies due to low birth weight), eye Injuries etc but not limited to listed entities upto age 18 years .

No questions will be asked if family has Ayushman Bharath Health Card( used as a yard stick only , and this program does not receive any support from that great program) .If not ,we may ask few questions to ascertain economic background of the family and no deserving child will be denied treatment.

Any friends – recognising such problems in children, whose parents can not afford the care , can feel free to contact Dr Ravi Shankar , or Mr Sethuram, of Sri Vivekananda Sevashrama to Co- ordinate the efforts to take up corrective / curative surgery.There is no geographic boundary/limit – child can be from anywhere within India. Contact numbers are as follows….Dr K V Ravishankar – 9845971425, Mr Sethuram – 8105946140

We acknowledge assistance/ support from many institutions/individuals/ family over long periods of time in continuing this labour of love.

Work of this nature can not be undertaken without your major involvement.

website developers in mysore