ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ‘ಯೋಗ’ ಮತ್ತು ಕಬಡ್ಡಿ ಪಂದ್ಯಾವಳಿಗೆ ಮೈಸೂರು ವಿವಿ ತಂಡ ಆಯ್ಕೆ.

ಮೈಸೂರು,ಡಿಸೆಂಬರ್,21,2021(www.justkannada.in):  ಭುವನೇಶ್ವರದ ಕೆಐಐಟಿ ವಿಶ್ವವಿದ್ಯಾಲಯದಲ್ಲಿ ಡಿ.25 ರಿಂದ 28ರವರೆಗೆ ನಡೆಯಲಿರುವ 2021-22ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ‘ಯೋಗ’ ಪಂದ್ಯಾವಳಿಗೆ ಹಾಗೂ ತಿರುಚುನಪಳ್ಳಿಯ ಭಾರತೀದಾಸನ್ ವಿಶ್ವವಿದ್ಯಾಲಯದಲ್ಲಿ ಡಿ.23 ರಿಂದ 27 ರವರೆಗೆ ನಡೆಯುವ 2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಪಂದ್ಯಾವಳಿಗೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ.
ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಸೋಮವಾರ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದೆ.
ಯೋಗ ಪಟುಗಳಾದ ನಂಜನಗೂಡು ಸರ್ಕಾರಿ ಕಾಲೇಜಿನ ಎಸ್.ಕೀರ್ತನಾ(ನಾಯಕಿ), ದಿವ್ಯಾ, ಮಹಾರಾಣಿ ವಿಜ್ಞಾನ ಕಾಲೇಜಿನ ಟಿ.ಸುಶ್ಮೆತಾ, ಗುಂಡ್ಲುಪೇಟೆ ಸರ್ಕಾರಿ ಕಾಲೇಜಿನ ತುಳಸಿ, ಮದ್ದೂರು ಸರ್ಕಾರಿ ಕಾಲೇಜಿನ ಮೋನಿಕಾ, ಎಂ.ಎಚ್.ರೋಹಿತ್, ಎನ್.ಸಿ.ಸುಭಾಷ್, ಎಸ್.ಕಾರ್ತಿಕ್, ನಂಜನಗೂಡು ಸಿಟಿಜನ್ ಕಾಲೇಜಿನ ಎನ್.ಎಲ್.ವಿವೇಕ್, ಮಹಾರಾಜ ಎಂ.ಕಾಲೇಜಿನ ಮನೋಜ್ ಕುಮಾರ್ ಯೋಗ ತಂಡಕ್ಕೆ ಆಯ್ಕೆಯಾಗಿದ್ದಾರೆ. ತರಬೇತುದಾರ ಪಿ.ಭಾಸ್ಕರ್, ತಂಡದ ವ್ಯವಸ್ಥಾಪಕ ಅಂಥೋನಿ ಮೊಸಸ್ ಜತೆ ತಮ್ಮ ಯೋಗ ತಂಡ ಕೆಐಐಟಿ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಬೆಳೆಸಿದೆ.
ಕಬಡ್ಡಿ ತಂಡಕ್ಕೆ ಆಯ್ಕೆ:
ಎಸ್‌ಬಿಆರ್‌ಆರ್ ಮಹಾಜನ ಕಾಲೇಜಿನ ಹೇಮಂತ್ (ನಾಯಕ), ಚನ್ನರಾಯಪಟ್ಟಣದ ಸರ್ಕಾರಿ ಕಾಲೇಜಿನ ಜಿ.ಎನ್.ಅರುಣ್, ಆದರ್ಶ, ವಿದ್ಯಾವಿಕಾಸ ಕಾಲೇಜಿನ ಬಿ.ಆರ್.ರಾಕೇಶ್, ಭರತ್, ಸದಾಶಿವ, ಶಶಾಂಕ, ಪಾಂಡುಪುರದ ವಿಜಯ ಕಾಲೇಜಿನ ಬಿ.ಆರ್.ಅಮೀತ್, ಮಹೇಶ್, ಹಾಸನದ ಹಾರೋನಹಳ್ಳಿ ರಾಮಸ್ವಾಮಿ ಕಾಲೇಜಿನ ಪ್ರಶಾತ್ ಕುಮಾರ್ ತಮ್ಮ ಸಾಮರ್ಥ್ಯವನ್ನು ಸಾದರ ಪಡಿಸಿ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ತರಬೇತುದಾರ ನಂದೀಶ್, ವ್ಯವಸ್ಥಾಪಕ ಪ್ರಕಾಶ್ ಕುಮಾರ್ ಜತೆ ತಮ್ಮ ತಂಡ ಭಾರತೀದಾಸನ್ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಬಡ್ಡಿ ತಂಡದ
* 2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಮೈಸೂರು ವಿವಿಯ ತಂಡದ ಜತೆ ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ. ಕೃಷ್ಣಯ್ಯ, ತರಬೇತುದಾರ ನಂದೀಶ್, ವ್ಯವಸ್ಥಾಪಕ ಪ್ರಕಾಶ್ ಕುಮಾರ್ ಇದ್ದಾರೆ.

ಯೋಗ ತಂಡ
* 2021-22ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ‘ಯೋಗ’ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಮೈಸೂರು ವಿವಿಯ ತಂಡದ ಜತೆ ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ. ಕೃಷ್ಣಯ್ಯ, ತರಬೇತುದಾರ ಪಿ.ಭಾಸ್ಕರ್, ತಂಡದ ವ್ಯವಸ್ಥಾಪಕ ಅಂಥೋನಿ ಮೊಸಸ್ ಇದ್ದಾರೆ.

key words: Mysore university- team -selected – All India Inter University -Yoga Tournament – Kabaddi Tournament.