ಇಂದಿನಿಂದ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಆರಂಭಿಸಿದ ಮೈಸೂರು ವಿವಿ…

Promotion

ಮೈಸೂರು,ಜನವರಿ,21,2021(www.justkannada.in):  ಮೈಸೂರು ವಿಶ್ವ ವಿದ್ಯಾನಿಲಯ ಇಂದಿನಿಂದ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ ಆರಂಭಿಸಿದ್ದು, ಈ ನಡುವೆ ರೂಪಾಂತರ ಕೊರೋನಾ ಭೀತಿ ಹಿನ್ನೆಲೆ ಹೊಸ ವಿದ್ಯಾರ್ಥಿಗಳ  ಪ್ರವೇಶಾತಿ ಕಡಿಮೆಯಾಗಿದೆ.jk-logo-justkannada-mysore

ಕೊರೊನಾ ಹಿನ್ನಲೆ ಕಳೆದ ವರ್ಷ ವಿದೇಶಿ ವಿದ್ಯಾರ್ಥಿಗಳು ತಮ್ಮ ತಾಯ್ನಾಡಿಗೆ ತೆರಳಿದ್ದು, ಮೈಸೂರು ವಿವಿಗೆ ವಿದೇಶಿ ವಿದ್ಯಾರ್ಥಿಗಳು ಆಗಮಿಸುತ್ತಿಲ್ಲ. ಜತೆಗೆ  ರೂಪಾಂತರ ಕೊರೊನಾ ಆತಂಕದಿಂದ ವಿದ್ಯಾರ್ಥಿಗಳು ವಿವಿ ಕಡೆ ಮುಖ ಮಾಡುತ್ತಿಲ್ಲ.

ಮೈಸೂರಿನಲ್ಲಿ ರೂಪಾಂತರ ಕೊರೊನಾ ಪತ್ತೆಯಾಗದಿದ್ದರೂ ಸಹ ವಿದ್ಯಾರ್ಥಿಗಳಿಗೆ ಇನ್ನು ಆತಂಕ ದೂರವಾಗಿಲ್ಲ. ಹೀಗಾಗಿ  ಮೈಸೂರು ವಿವಿ ವಿದೇಶಿ ವಿದ್ಯಾರ್ಥಿಗಳ ಆಗಮನ ನಿರೀಕ್ಷೆಯಲ್ಲಿದೆ.

Key words: Mysore  university-started -admission – Post Graduate