ಅಪ್ಪಾಜಿಗೆ ಗೌರವ ಡಾಕ್ಟರೇಟ್ ಸಿಕ್ಕಾಗ 47 ವರ್ಷ, ಪುನೀತ್ ಗೆ ಸಿಕ್ಕಾಗಲೂ 47 ವರ್ಷ: ರಾಘವೇಂದ್ರ ರಾಜ್ ಕುಮಾರ್ ಭಾವುಕ

kannada t-shirts

ಮೈಸೂರು.ಮಾರ್ಚ್,22,2022(www.justkannada.in):  ನಮ್ಮ ತಂದೆ ಡಾ.ರಾಜ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದಾಗ ಅವರಿಗೆ 47 ವರ್ಷ. ಆದರೆ‌ ಇದೀಗ ಪುನೀತ್ ರಾಜ್‍ ಕುಮಾರ್ ಸಿಕ್ಕಾಗಲೂ 47 ವರ್ಷ ಎಂದು ಅಣ್ಣ ರಾಘವೇಂದ್ರ ರಾಜ್ ಕುಮಾರ್ ಭಾವುಕರಾದರು.

ಕ್ರಾಫರ್ಡ್ ಹಾಲ್ ನಲ್ಲಿ ‌ನಡೆದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಹೂವಿನ ಜೊತೆ ನಾರು ಸ್ವರ್ಗಕ್ಕೆ ಸೇರಿದಂತೆ ತಮ್ಮನಿಂದ ನಾವು ಕೂಡ ಧನ್ಯರಾಗಿದ್ದೇವೆ. ಮೈಸೂರು ವಿಶ್ವವಿದ್ಯಾನಿಲಯ ಸರಸ್ವತಿ ದೇಗುಲ. ನಾನು ಇಲ್ಲಿ ಚಿಕ್ಕವನು. ಮೈಸೂರು ವಿವಿ ಪ್ರಶಸ್ತಿ ನೀಡಿ ನಮ್ಮ ಜವಾಬ್ದಾರಿ ಹೆಚ್ಚು ಮಾಡಿದೆ. ಇದನ್ನು ನಮ್ಮ ಕುಟುಂಬ ಉಳಿಸಿಕೊಳ್ಳುತ್ತದೆ ಎಂದರು.

ಜೀವನ ಒಂದು ಚಕ್ರ. 1976 ರಲ್ಲಿ ಅಪ್ಪಾಜಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿತು. ಆಗ ಅವರಿಗೆ 47 ವರ್ಷ ಪುನೀತ್ 9 ತಿಂಗಳ ಮಗು. ಇದೀಗ ಮೈಸೂರು ವಿಶ್ವವಿದ್ಯಾನಿಲಯ ಪುನೀತ್ ರಾಜ್‍ಕುಮಾರ್ ಗೆ ಗೌರವ ಡಾಕ್ಟರೇಟ್ ನೀಡಿದೆ. ಅವನಿಗೂ ಈಗ 47 ವರ್ಷ ಎಂದು ಭಾವುಕರಾಗಿ ಮಾತು ಮುಗಿಸಿದರು.

Key words: mysore university-punith rajkumar- Honorary Doctorate

website developers in mysore