ಮೈಸೂರು ವಿವಿ ಸ್ನಾತಕೋತ್ತರ ಪದವಿ ಪರೀಕ್ಷೆಯ ಉತ್ತರ ಪತ್ರಿಕೆ ಜೆರಾಕ್ಸ್ ಪ್ರತಿಗಾಗಿ ಮತ್ತು ಚಾಲೆಂಜ್ ವ್ಯಾಲುಯೇಷನ್‌ ಗೆ ಅರ್ಜಿ ಸಲ್ಲಿಸಲು ಅವಕಾಶ.

kannada t-shirts

ಮೈಸೂರು,ಜುಲೈ,29,2021(www.justkannada.in): ಫೆಬ್ರವರಿ/ಮಾರ್ಚ್/ಏಪ್ರಿಲ್ 2021ರಲ್ಲಿ ನಡೆದ  ಸ್ನಾತಕೋತ್ತರ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿಗಾಗಿ ಮತ್ತು ಚಾಲೆಂಜ್ ವ್ಯಾಲುಯೇಷನ್‌ ಗೆ ಅರ್ಜಿ ಸಲ್ಲಿಸಲು ಮೈಸೂರು ವಿಶ್ವ ವಿದ್ಯಾನಿಲಯ ಅವಕಾಶ ಕಲ್ಪಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಮೈಸೂರು ವಿವಿ ಪರೀಕ್ಷಾಂಗ ಕುಲ ಸಚಿವ, ಫೆಬ್ರವರಿ/ಮಾರ್ಚ್/ಏಪ್ರಿಲ್ 2021ರಲ್ಲಿ ನಡೆದ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಫಲಿತಾಂಶಗಳಿಗೆ ಸಂಬಂಧಿಸಿದಂತೆ, ನಿಯಮಾನುಸಾರ ಫಲಿತಾಂಶ ಪ್ರಕಟವಾದ 10 ದಿನಗಳೊಳಗೆ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ ಪಡೆಯಲು ಹಾಗೂ ಫಲಿತಾಂಶ ಪ್ರಕಟವಾದ 15 ದಿನಗಳೊಳಗೆ ಚಾಲೆಂಜ್ ವ್ಯಾಲುಯೇಷನ್‌ ಗಾಗಿ ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಮೈಸೂರು ವಿಶ್ವವಿದ್ಯಾನಿಲಯದ website www.uni-mysore.ac.in ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಿಶ್ವವಿದ್ಯಾನಿಲಯದ ವೆಬ್‌ ಸೈಟ್‌ನಲ್ಲಿ ಕಲ್ಪಿಸಿರುವ ವೆಬ್‌ಸೈಟ್ ಲಿಂಕ್ (Post Result Service) ನಲ್ಲಿ ವಿದ್ಯಾರ್ಥಿಗಳು ನೊಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ವಿದ್ಯಾರ್ಥಿಯು ಲಾಗ್ ಇನ್ ಆದರೆ ಪರೀಕ್ಷಾ ವಿವರಗಳು ದೊರೆಯುತ್ತವೆ.

ನಂತರ ಯಾವ ಸೆಮಿಸ್ಟರಿನ ಆದರ ಯಾವ ವಿಷಯಕ್ಕೆ/ವಿಷಯಗಳಿಗೆ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ/ಚಾಲೆಂಜ್ ವ್ಯಾಲುಯೇಷನ್‌ ಬೇಕಾಗಿದೆ ಎಂದು ಗುರುತಿಸಬೇಕು ಹಾಗೂ ನಿಗಧಿತ ಶುಲ್ಕವನ್ನು Atom ಪೇಮೆಂಟ್ ಲಿಂಕ್ ಮುಖಾಂತರ ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮುಖಾಂತರ ಪಾವತಿಸಿದ ನಂತರ ಇದರ ಮುದ್ರಿತ ಒಂದು ಪ್ರತಿಯನ್ನು ವ್ಯಾಸಂಗ ಮಾಡಿದ ಅಧ್ಯಯನ ವಿಭಾಗಕ್ಕೆ/ಕಾಲೇಜಿಗೆ ನೀಡಿ ಸ್ವೀಕೃತಿ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2419407 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Mysore university-Opportunity – apply – Xerox copy – Postgraduate- Examination – Challenge Valuation.

website developers in mysore