ಮೈಸೂರು ವಿವಿ : ವಿದ್ಯಾರ್ಥಿಗಳ ಪ್ರವೇಶಾತಿ ಮಾಹಿತಿಗೆ ವರದಾನವಾಯ್ತು ‘ಎಲ್‌ಇಡಿ ಸ್ಕ್ರೀನ್’

kannada t-shirts

 

ಮೈಸೂರು, ಜ24, 2022 : (www.justkannada.in news ) ಮೈಸೂರು ವಿಶ್ವವಿದ್ಯಾಲಯದಲ್ಲಿ ಇದೀಗ ಪ್ರವೇಶಾತಿ ಸಮಯ. ಕೊರೊನಾ ಇರುವುದರಿಂದ ವಿದ್ಯಾರ್ಥಿಗಳು, ಪೋಷಕರು ಮಾಹಿತಿಗೆ ಗುಂಪುಗೂಡುವಂತಿಲ್ಲ. ಇದನ್ನು ಮನಗಂಡು ಎರಡು ವರ್ಷದ ಹಿಂದೆಯೇ ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಶುರು ಮಾಡಿದ್ದ ‘ಎಲ್‌ಇಡಿ ಸ್ಕ್ರೀನ್’ ವ್ಯವಸ್ಥೆ ಇದೀಗ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನ ಉಂಟು ಮಾಡಿದೆ.

ಕೊರೊನಾ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಆನ್ಲೈನ್ ಹಾಗೂ ಆಫ್ಲೈನ್ ಪ್ರವೇಶಾತಿ ನಡೆಯುತ್ತಿದೆ. ದೂರದೂರಿನಿಂದ ವಿದ್ಯಾರ್ಥಿಗಳು ಬಂದಿರುತ್ತಾರೆ. ಅವರಿಗೆ ಪ್ರವೇಶಾತಿ ಸಮಯದಲ್ಲಿ ಸೂಕ್ತ ಮಾಹಿತಿ ಬೇಕಾಗಿರುತ್ತದೆ. ಯಾವ ಬ್ಯಾಂಕಿಗೆ ಹೋಗಿ ಶುಲ್ಕ ಕಟ್ಟಬೇಕು? ವೆಬ್ಸೈಟ್ ಯಾವುದು? ಎಂಬಿತ್ಯಾದಿ ಪ್ರಶ್ನೆಗಳು ಸಹಜ. ಈ ಹಿಂದೆ ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗುತ್ತಿದ್ದರೂ ವಿಸ್ಕೃತವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಸಿಗುತ್ತಿರಲಿಲ್ಲ. ಈ ಹಿನ್ನೆಲೆ ವಿವಿಯ ಕಾರ್ಯ ಚಟುವಟಿಕೆಯ ಜತೆಗೆ ವಿದ್ಯಾರ್ಥಿಗಳಿಗೆ ಬೇಕಾದ ಸಮಗ್ರ ಮಾಹಿತಿಯನ್ನು ಕ್ಯಾಂಪಸ್‌ನ ಐದು ಕಡೆ ಎಲ್ಇಡಿ ಸ್ಕ್ರೀನ್ ಮೂಲಕ ವಿಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮೈಸೂರು ವಿವಿ ಶುರು ಮಾಡಿದ ಮೇಲೆ ಕರ್ನಾಟಕ ರಾಜ್ಯ ಮುಕ್ತ ವಿವಿ ಹಾಗೂ ರಿಜಿನಲ್ ಕಾಲೇಜಿನಲ್ಲೂ ಈ ಕಾನ್ಸೆಪ್ಟ್ ಆರಂಭವಾಗಿದೆ.

ಐದು ಕಡೆ ಅಳವಡಿಕೆ:

ಮೈಸೂರು ವಿಶ್ವವಿದ್ಯಾಲಯದಲ್ಲಿ 2020ರಲ್ಲೇ ಐದು ಕಡೆ ‘ಎಲ್‌ಇಡಿ ಸ್ಕ್ರೀನ್’ ಅಳವಡಿಸಲಾಯಿತು. ಕ್ರಾಫರ್ಡ್ ಹಾಲ್ ಮುಂಭಾಗ, ವಿವಿ ಪ್ರವೇಶದ್ವಾರದ ಬಳಿಯ ಕುವೆಂಪು ಪ್ರತಿಮೆ ಎದುರು, ಗ್ರಂಥಾಲಯ ಬಳಿ, ಸೆನೆಟ್ ಭವನ ಹಾಗೂ ಜೇಸಿ ಕಾಲೇಜಿನ ಎಂಟ್ರಿ ಜಾಗದಲ್ಲಿ ಒಂದೊಂದು ಎಲ್ಇಡಿ ಸ್ಕ್ರೀನ್ ಹಾಕಲಾಗಿದೆ. ವಿಶ್ವವಿದ್ಯಾಲಯದ ನಾನಾ ವಿಭಾಗಗಳಲ್ಲಿ ಏರ್ಪಡಿಸುವ ಕಾರ್ಯಕ್ರಮಗಳು, ವಿವಿ ಯೋಜನೆಗಳು, ಪ್ರವೇಶಾತಿ, ಪರೀಕ್ಷೆ, ನೋಟಿಫಿಕೇಶನ್ ಸೇರಿದಂತೆ ನಾನಾ ಮಾಹಿತಿಗಳನ್ನು ಎಲ್‌ಇಡಿ ಸ್ಕ್ರೀನ್ ಮೂಕ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪಿಸಲಾಗುತ್ತಿದೆ.

‘‘ಹೊರಗಿನಿಂದ ಬಂದ ಪಾಲಕರು ಹಾಗೂ ವಿದ್ಯಾರ್ಥಿಗಳು ವಿವಿಗೆ ಸಂಬಂಧಪಟ್ಟ ಮಾಹಿತಿಯನ್ನು ಎಲ್ಇಡಿ ಸ್ಕ್ರೀನ್ ಮೂಲಕ ತಿಳಿದುಕೊಳ್ಳಬಹುದು. ತಾಂತ್ರಿಕ ನುರಿತರು ಹಾಗೂ ಅಧ್ಯಾಪಕರು ಇದರಲ್ಲಿ ಕೆಲಸ ಮಾಡಲಿದ್ದಾರೆ. ಅವರು ಪ್ರತಿ ಎರಡು-ಮೂರು ಗಂಟೆಗೆ ಏನು ಪ್ರಸಾರವಾಗಬೇಕೆಂಬುದನ್ನು ನಿರ್ಧರಿಸುತ್ತಾರೆ. ಹಳ್ಳಿಗಳಿಂದ ಬರುವ ಸಾಕಷ್ಟು ಜನರಿಗೆ ಇದು ಅನುಕೂಲ ಒದಗಿಸಿದೆ. ಕೊರೊನಾ ಸಮಯ ಬೇರೆ ಆಗಿರುವುದರಿಂದ ಪ್ರವೇಶಾತಿಗೆ ಸಂಬಂಧಪಟ್ಟ ಸಮಗ್ರ ಮಾಹಿತಿ ಲಭ್ಯವಾಗುತ್ತಿದೆ,’’ ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಎಲ್ಇಡಿ ಸ್ಕ್ರೀನ್ ಪ್ರಯೋಜನವೇನು?:

ವಿವಿಯಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆ ಪ್ರತಿಯೊಬ್ಬ ವಿದ್ಯಾರ್ಥಿಗೂ ತಿಳಿಯಬೇಕೆಂಬ ಉದ್ದೇಶದಿಂದ ಈ ಎಲ್ಇಡಿ ಸ್ಕ್ರೀನ್ ಹಾಕಲಾಗಿದೆ. ವಿವಿಯಲ್ಲಿ ನಾನಾ ವಿಭಾಗಗಳಿದ್ದು, ಪ್ರತಿಯೊಂದು ವಿಭಾಗದಲ್ಲಿ ಏನಾದರೂ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ, ಇತರೆ ವಿಭಾಗದ ವಿದ್ಯಾರ್ಥಿಗಳಿಗೆ ಏನಾಗುತ್ತಿದೆ ಎಂಬ ಮಾಹಿತಿಯೇ ಇರುವುದಿಲ್ಲ. ಹಾಗಾಗಿ ಆಯಾ ವಿಭಾಗದಲ್ಲಿ ನಡೆಯುವ ವಿಚಾರ ಸಂಕಿರಣ, ಸಂವಾದ, ಕಾರ್ಯಕ್ರಮಗಳನ್ನು ಎಲ್ಇಡಿ ಸ್ಕ್ರೀನ್ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಯುವಂತೆ ನೇರ ಪ್ರಸಾರ ಮಾಡಲಾಗುತ್ತದೆ. ಅಲ್ಲದೆ, ಕ್ಯಾಂಪಸ್ ಒಳಗೆ ಆಗುವ ಕ್ರಿಡಾಕೂಟ, ಆಚರಣೆ ಮುಂತಾದ ಮಾಹಿತಿಯೂ ಬಿತ್ತರವಾಗಲಿದೆ. ಕ್ಲಾಕ್ ಟವರ್, ವಿಜ್ಞಾನ ಭವನ, ಜೆಸಿ ಎಂಟ್ರಿ ಜಾಗದಲ್ಲಿ ಹಾಕಿರುವುದರಿಂದ ವಿದ್ಯಾರ್ಥಿಗಳು ಸಂಚಾರ ಮಾಡುತ್ತಲೇ ಮಾಹಿತಿಯನ್ನು ನೋಡಬಹುದು.

key words : Mysore-university-LED-screen-display

ENGLISH SUMMARY…

UoM: LED screens – A boon for students seeking admission information
Mysuru, January 24, 2022 (www.justkannada.in): It is admissions time at the University of Mysore. But due to the COVID-19 Pandemic rules students and parents are not supposed to gather in groups. Prof. G. Hemanth Kumar, who is well aware of this from the last two years thought about installation of an LED screen for the benefit of the students, which has attracted appreciation from many people now.
Online and offline admissions are in process everywhere due to the pandemic. Students from far off places come for admission to the University of Mysore. They require proper information about admissions like which bank should they visit to pay the fee? which is the official website of the University? etc. Though earlier also all this information was put in the notice board, the students were not able to get the information. In this context LED screens have been put up at five places in the University campus to provide complete information to the students about admissions and activities of the University. The Karnataka State Open University (KSOU) and the Regional College also have followed the footsteps of the University of Mysore’s LED concept.
LED screens have been installed at five different places in the campus in the year 2020. One in front of the Crawford Hall, one near the Kuvempu Statue at the entrance of the University, one each near the library, Senate Bhavan and JC College entrance. Information like the various programs offered by different departments of the University, University programs, admission details, examination details, notifications, etc. are flashed through these LED screens.
The objective of installing the LED screens is to ensure that each and every student is aware about the various activities and programs that are running in the University. There are different departments in the University and one or the other programs will be going on. But the students of other departments will not know about it. All the details like seminars, interactions, and other program details are shown on the LED screens for the benefit of the students. Also arrangements are made to telecast the sports and other functions live. As these screens are put up at strategic points like the clock tower, Vignana Bhavana and JC College entrance, the students can collect information while passing through.
Keywords: University of Mysore/ Prof. G. Hemanth Kumar/ LED screens/ information

website developers in mysore