ಹಸ್ತ ಪ್ರತಿಗಳಿಗೆ ಪುಸ್ತಕ ರೂಪ: ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ 

 

ಮೈಸೂರು, ಡಿ.21, 2021 : (www.justkannada,in news ) 12ನೇ ಶತಮಾನದಿಂದ 19ನೇ ಶತಮಾನದ ನಡುವೆ ರಚನೆಯಾಗಿ ಈಗಲೂ ಹಸ್ತಪ್ರತಿಗಳ ರೂಪದಲ್ಲಿಯೇ ಉಳಿದಿರುವ ವಚನ ಸಾಹಿತ್ಯ ಮತ್ತು ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ಸಂಗ್ರಹಿಸಿ ವಿದ್ವಾಂಸರಿಂದ ಸಂಪಾದಿಸಿಕೊಂಡು ಪ್ರಕಟಿಸುವುದು ‘ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ’ ಉದ್ದೇಶವಾಗಿದೆ ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಹ‌ಸ್ತಪ್ರತಿ ಪ್ರಕಟಣಾಮಾಲೆ ಕೃತಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ್ದು ಹೀಗೆ…

ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಹಸ್ತಪ್ರತಿ ಪ್ರಕಟಮಾಲೆ ಒಂದು ಅಪರೂಪದ ಯೋಜನೆ ಆಗಿದ್ದು, ವಿಶ್ವವಿದ್ಯಾನಿಲಯದ ಧ್ಯೇಯೋದ್ದೇಶಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯಗತ ಮಾಡುತ್ತಿರುವುದು ಸಂತೋಷದ ವಿಷಯ. ಕೇಂದ್ರವು 2018ರಲ್ಲಿ ವಿಶ್ವವಿದ್ಯಾನಿಲಯದ ಅನುಮತಿಯೊಂದಿಗೆ ಆರಂಭವಾದ ಹಸ್ತಪ್ರತಿ ಪ್ರಕಟಣಾಮಾಲೆ ಈಗ ಲೋಕಾರ್ಪಣೆಗೊಂಡ ನಾಲ್ಕು ಕೃತಿಗಳೂ ಸೇರಿದಂತೆ ಒಟ್ಟು ಒಂಬತ್ತು ಅಪರೂಪದ ಹೊತ್ತಿಗೆಗಳನ್ನು ಹೊರತಂದಿದೆ.

ಈ ಹಿಂದೆ ತರಳ ಚರಪತಿಯ – ಬಸವ ಚರಿತ್ರೆ, ಚನ್ನಬಸವ ವಿರಚಿತ – ಶರಣ ಬಸವೇಶ್ವರ ಚರಿತೆ, ಕಾಶಿರಾಮ ವಿರಚಿತ – ಗಿರಿಮಲ್ಲಿಕಾರ್ಜುನ ಚರಿತ್ರೆ, ಅಜ್ಞಾತಕವಿಯ – ಬಸವ ಸಾಂಗತ್ಯ, ಅಜ್ಞಾತಕವಿಯ – ಬಸವ ಚಾರಿತ್ರ್ಯ, ಚೆನ್ನರಾಮಯ್ಯನ – ಶಿವಶರಣ ಮೈದುನ ರಾಮನಯ್ಯನ ಚರಿತ್ರೆ ಕೃತಿಗಳು ವಿದ್ವಾಂಸರಿಂದ ಸಂಪಾದನೆಗೊಂಡು ಶ್ರೀ ಬಸವೇಶ್ವರ ಕೇಂದ್ರದ ಮೂಲಕ ಈಗಾಗಲೇ ಪ್ರಕಟವಾಗಿವೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಶ್ರೀ ಬಸವೇಶ್ವರ ಕೇಂದ್ರವು ಪ್ರಕಟಣೆಗಳ ಜೊತೆಗೆ ಹತ್ತಾರು ವಿಸ್ತರಣಾ: ಕಾರ್ಯಕ್ರಮಗಳನ್ನು ಚಾಮರಾಜನಗರದಿಂದ ಹಿಡಿದು ಮೈಸೂರು ಸೇರಿದಂತೆ ಚಿಕ್ಕಮಗಳೂರಿನವರೆಗೂ ಹಮ್ಮಿಕೊಂಡು ಬಂದಿದೆ. ಆ ಮೂಲಕ ಶರಣರ ಮೌಲ್ಯಗಳು ಪ್ರಚಾರ ಪಡೆದಿವೆ. ಇದು ಹೆಚ್ಚಿನ ಮಟ್ಟದಲ್ಲಿ ಅಗತ್ಯವಾಗಿ ಆಗಬೇಕಾದ ಸಂಗತಿ.

ಶರಣರಿಗೆ ಸಂಬಂಧಿಸಿದ ಕೃತಿಗಳಾಗಲಿ, ಶರಣರ ವಚನಗಳಾಗಲಿ ಲೋಕೋತ್ತರ ಮೌಲ್ಯಗಳನ್ನು ಬಿತ್ತರಿಸುತ್ತವೆ. ಅವುಗಳನ್ನು ಮತ್ತೆಮತ್ತೆ ಚರ್ಚೆಗೆ ಒಳಪಡಿಸುವುದರೊಂದಿಗೆ ಅವರ ಮೌಲ್ಯಗಳನ್ನು ಪುನಃ ಪ್ರತಿಷ್ಠಾಪನೆ ಮಾಡಿದಂತೆಯೇ ಆಗುತ್ತದೆ. ಸಾಮಾಜಿಕ ನ್ಯಾಯಕ್ಕೆ, ಸಮಾನತೆಗೆ ಮತ್ತು ಜಾತಿ ಮುಕ್ತ ಸಮಾಜಕ್ಕೆ ಸಂಬಂಧಿಸಿದ ಅರಿವು ನಮ್ಮನ್ನು ಎಚ್ಚರಿಸುವುದೆಂಬುದರಲ್ಲಿ ಎರಡು ಮಾತಿಲ್ಲ.

ಸಮಾರಂಭದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ್, ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ಚಂದ್ರಶೇಖರಯ್ಯ, ಡಾ.ವೈ.ಸಿ.ಭಾನುಮತಿ, ಡಾ.ಎಸ್.ಗೌರಮ್ಮ, ಪ್ರೊ.ಗುರುಸ್ವಾಮಿ,  ಡಾ. ಅನ್ನಪೂರ್ಣ ಸೇರಿದಂತೆ ಇತರರು ಇದ್ದರು.

key words : Mysore-university-Kannada-department-book-released-sharana-sahithya

ENGLISH SUMMARY…

Manuscripts given book form: UoM VC
Mysuru, December 21, 2021 (www.justkannada.in): “It is the objective of the Basaveshwara Social Revival, Research and Extension Center to collect the Vachana and Sharana literature that have remained in the form of manuscripts from 12th to 19th centuries and publish them in the form of books,” opined Prof. G. Hemanthkumar, Vice-Chancellor, University of Mysore.
He released the books published by the Sri Basaveshwara Social Revival, Research and Extension Center, Kuvempu Research Centre at a program held at the BM Shri Auditorium in Manasagangotri today.
In his address, he observed that the objective of the center is very rare, and expressed his happiness for realizing it. “The process of giving a book form to the ancient manuscripts was commenced in 2018 with the permission of the University of Mysore. As a result of this, today, a total number of 9 books have been published,” he added.
Prof. M.G. Manjunath, Director, Kuvempu Kannada Research Center, Guest Lecturer Prof. Chandrashekaraiah, Dr. Y.C. Banumati, Dr. S.Gowramma, Prof. Guruswamy, Dr. Annapoorna, and others were present.
Keywords: Manuscripts/ books/ release/ University of Mysore/ Kuvempu Research Center/ Manasagangotri