KEA  ಮೂಲಕ ಮೈಸೂರು ವಿವಿ ಕೆ.ಸೆಟ್ ಪರೀಕ್ಷೆ: ಸಚಿವ ಅಶ್ವಥ್ ನಾರಾಯಣ್ ಗೆ ಪ್ರತಾಪ್ ಸಿಂಹ ಅಭಿನಂದನೆ.

kannada t-shirts

ಮೈಸೂರು,ಡಿಸೆಂಬರ್, 23,2022(www.justkannada.in): ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಮೈಸೂರು ವಿವಿ ಕೆ.ಸೆಟ್ ಪರೀಕ್ಷೆಗೆ ಆದೇಶ ನೀಡಿರುವ ಹಿನ್ನಲೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಗೆ ಸಂಸದ ಪ್ರತಾಪ್ ಸಿಂಹ ಅಭಿನಂದನೆ ಸಲ್ಲಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೆ.ಸೆಟ್ ಪರೀಕ್ಷೆಯನ್ನು ಅಕ್ರಮವಾಗಿ ನಡೆಸುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಸ ಆಗಬಾರದು ಹಾಗೂ ಅವರಿಗೆ ಆಧ್ಯತೆ ಸಿಗಬೇಕು ಎಂಬ ಉದ್ದೇಶದಿಂದ ಕೆ.ಸೆಟ್ ಪರೀಕ್ಷೆಯಲ್ಲಿ ಪಾರದರ್ಶಕತೆ ತರಬೇಕೆಂದು ಯುಜಿಸಿ ಚೇರ್ಮನ್ ಜಗದೀಶ್ ಕುಮಾರ್ ಅವರನ್ನು ಸಂಸದ ಪ್ರತಾಪ್ ಸಿಂಹ ಅವರು ಪೆಬ್ರವರಿ ಮಾಹೆ 2022ರಂದು ಭೇಟಿ ಮಾಡಿ ಮನವಿ ಮಾಡಿದ್ದರು.

ಇದರ ಸಂಬಂಧವಾಗಿ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವಥ್ ನಾರಾಯಣ ಅವರಿಗೆ ಪತ್ರದ ಮುಖೇನ ಮನವಿ ಮಾಡಿದ್ದರು.  ಇದಕ್ಕೆ ಅನುಗುಣವಾಗಿ ಇಂದು ರಾಜ್ಯ ಸರ್ಕಾರವು ಕೆ.ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದ ಮೂಲಕ ನಡೆಸುವಂತೆ ಆದೇಶ ಮಾಡಿರುವುದು ಶ್ಲಾಘನೀಯವಾಗಿದ್ದು, ನನ್ನ ಮನವಿಗೆ ಸಕರಾತ್ಮಕವಾಗಿ  ಸ್ಪಂದಿಸಿರುವ  ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವಥ್ ನಾರಾಯಣ ಅವರಿಗೆ ಅಭಿನಂದನೆಯನ್ನು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

Key words:  Mysore university- K.set- exam KEA:0Pratap Simha-  Minister Aswath Narayan.

website developers in mysore