ಮೈಸೂರು ವಿವಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ‘ ಇಸ್ಕಾನ್ ಮಾದರಿ ‘ ಬಿಸಿಯೂಟ ವಿತರಣೆ..

 

ಮೈಸೂರು, ಮೇ 30, 2019 : (www.justkannada.in news) : ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಎಡ್ (BSc Ed) ಆರಂಭ, ಕೆ.ಆರ್.ನಗರದಲ್ಲಿ ಸ್ನಾತಕೋತ್ತರ ಉಪಕೇಂದ್ರ ಸ್ಥಾಪನೆ ಹಾಗೂ ಕಾಮನ್ ಕಿಚನ್ ಮೂಲಕವೇ ನಗರದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಹಾರ ಪೂರೈಕೆ ಮಾಡುವ ಸಂಬಂಧ ಮೈಸೂರು ವಿಶ್ವವಿದ್ಯಾನಿಲಯ ಮಹತ್ವದ ತೀರ್ಮಾನ ಕೈಗೊಂಡಿದೆ.

ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.

ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಹಾಗೂ ಉದ್ಯೋಗವಕಾಶ ವಿಫುಲವಾಗಿರುವ ಕಾರಣ 4 ವರ್ಷದ ಬಿಎಸ್ಸಿ.ಎಡ್ ಕೋರ್ಸ್ ಆರಂಭಿಸಲು ವಿವಿ ಮುಂದಾಗಿದೆ. ಈ ಸಲುವಾಗಿಯೇ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ (NCTE)ಗೆ ಅನುಮತಿಗಾಗಿ ಪತ್ರ ಬರೆಯಲು ಸಿಂಡಿಕೇಟ್ ಸಭೆ ಸಮ್ಮತಿಸಿತು.

ಮೈಸೂರು ವಿವಿಯ ಸ್ನಾತಕೋತ್ತರ ವಿಭಾಗದ ಉಪಕೇಂದ್ರಗಳನ್ನು ನಗರ ವ್ಯಾಪ್ತಿಯಿಂದ ವಿಸ್ತರಿಸುವ ಸಲುವಾಗಿ ಜಿಲ್ಲೆಯ ಕೆ.ಆರ್. ನಗರದಲ್ಲಿ ಆರಂಭಿಸಲು ಸಿಂಡಿಕೇಟ್ ಒಪ್ಪಿಗೆ ನೀಡಿತು. ಉಪಕೇಂದ್ರ ಆರಂಭ ಸಂಬಂಧದ ಸ್ಟ್ಯಾಚೂಟ್ ಗೆ ಸಿಂಡಿಕೇಟ್ ಅಂಗೀಕಾರ ನೀಡಿತು. ಈ ಹಿನ್ನೆಲೆಯಲ್ಲಿ ಅತೀ ಶೀಘ್ರದಲ್ಲೇ ಕೆ.ಆರ್.ನಗರದಲ್ಲಿ ಮೈಸೂರು ವಿವಿಯ ಹೊಸ ಕ್ಯಾಂಪಸ್ ತಲೆ ಎತ್ತಲಿದೆ. ಇಲ್ಲಿ ಕನ್ನಡ, ಇಂಗ್ಲಿಷ್. ವಾಣಿಜ್ಯ ಹಾಗೂ ಸಮಾಜಶಾಸ್ತ್ರ ಅಧ್ಯಯನ ವಿಭಾಗಗಳು ಕಾರ್ಯರಂಭ ಮಾಡಲಿವೆ.

ಇಸ್ಕಾನ್ ಮಾದರಿ ಊಟ :

ಮೈಸೂರು ವಿವಿ ಹಾಸ್ಟೆಲ್ ನಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವ ಸಲುವಾಗಿ ಇಸ್ಕಾನ್ ಮಾದರಿಯಲ್ಲಿ ಕಾಮನ್ ಕಿಚನ್ ನಿರ್ಮಿಸಿ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಆಹಾರ ಪದಾರ್ಥ ಸಿದ್ಧಪಡಿಸಿ ಅದನ್ನು ಅಲ್ಲಿಂದಲೇ ಹಾಸ್ಟಲ್ ಗಳಿಗೆ ಪೂರೈಕೆ ಮಾಡುವ ಹೊಸ ಯೋಜನೆ ಜಾರಿಗೆ ಮೈಸೂರು ವಿವಿ ಮುಂದಾಗಿದೆ.
ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡಸಲಾಯಿತು. ಮುಂದಿನ ಆರು ತಿಂಗಳೊಳಗಾಗಿ ಈ ಪದ್ಧತೆ ಜಾರಿಗೆ ಬರಲಿದೆ. ಪರಿಣಾಮ ಮೈಸೂರು ವಿವಿ ವ್ಯಾಪ್ತಿಯಲ್ಲಿನ 15 ಹಾಸ್ಟೆಲ್ ಗಳಿಗೆ ಕಾಮನ್ ಕಿಚನ್ ಮೂಲಕವೇ ಉಪಹಾರ ಪೂರೈಕೆಯಾಗಲಿದೆ.
—–

Mysore University Hostel students get the ‘ISKCON model’ meal shortly
Mysore University planning to launch a new project. like ISCON, through common kitchen provide quality food to hostet students of UOM