ಘಟಿಕೋತ್ಸವದ GOWN : ಬದಲಾವಣೆಗೆ ಮುಂದಾದ ಮೈಸೂರು ವಿವಿ : ಸಿಂಡಿಕೇಟ್ ಉಪಸಮಿತಿ ರಚನೆಗೆ ಅಸ್ತು.

ಮೈಸೂರು, ಡಿಸೆಂಬರ್,30,2020 (www.justkannada.in news) : ಹಲವು ದಶಕಗಳಿಂದ ಚಾಲ್ತಿಯಲ್ಲಿರುವ ‘ಗೌನ್ ‘ ಧಾರಣೆ ಪದ್ಧತಿಯಲ್ಲಿ ಬದಲಾವಣೆ ತರಲು ಪ್ರತಿಷ್ಠಿತ ಮೈಸೂರು ವಿವಿ ಮುಂದಾಗಿದೆ.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, ಪರೀಕ್ಷಾಂಗ ಕುಲಸಚಿವರ ನೇತೃತ್ವದಲ್ಲಿ ಸಿಂಡಿಕೇಟ್ ಉಪ ಸಮಿತಿ ರಚಿಸಿದ್ದು ‘ ಗೌನ್ ‘ ಬದಲಾವಣೆ ಸಂಬಂಧ ಸ್ಟ್ಯಾಚೂಟ್ ಮಾರ್ಪಾಡಿಗೆ ಪೂರಕವಾಗುವಂತೆ ಅಧ್ಯಯನ ವರದಿ ನೀಡಲು ಕೋರಲಾಗಿದೆ.

ಸಿಂಡಿಕೇಟ್ ನ 8ನೇ ಸಾಮಾನ್ಯ ಸಭೆಯ ಕಾರ್ಯಸೂಚಿಯಲ್ಲಿ ಮೈಸೂರು ವಿವಿ ಘಟಿಕೋತ್ಸವದ ಪ್ರಚಲಿತ ಉಡುಪನ್ನು (GOWN) ಬದಲಾಯಿಸಬೇಕೆಂದು ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಅವರು ಮನವಿ ಮಾಡಿದ್ದರು.

jk-logo-justkannada-mysore

ಮೈಸೂರು ವಿವಿ 100ನೇ ಘಟಿಕೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ್ದು ಮತ್ತು ದೇಶಕ್ಕೆ ಸ್ವತಂತ್ರ ಬಂದು 73 ವರ್ಷಗಳ ನಂತರವೂ ಘಟಿಕೋತ್ಸವದ ಸಂದರ್ಭದಲ್ಲಿ ಕುಲಾಧಿಪತಿಗಳು, ಕುಲಪತಿಗಳು,ಕುಲಸಚಿವರು, ಆಡಳಿತ ಮಂಡಳಿಯ ಸದಸ್ಯರು ಮತ್ತು ಇನ್ನಿತ್ತರ ಗಣ್ಯರು ಸಾಂಪ್ರದಾಯಿಕ ಯುರೋಪಿಯನ್ (ಬ್ರಿಟೀಷ್) ಕಪ್ಪು ನಿಲುವಂಗಿ(GOWN) ಅನ್ನು ಈಗಲೂ ಧರಿಸುತ್ತಿರುವುದು ಪಾಶ್ಚಾತ್ಯರ ಅಂಧಾನುಕರಣೆ, ವಸಹಾತುಶಾಯಿ ಹಾಗೂ ದಾಸ್ಯದ ಮನೋಭಾವನೆಯ ಅವಶೇಷಗಳ ಪ್ರತೀಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

Mysore-convocation-governor-absent-due-to-increase-in-covid-cases
ಕೈಮಗ್ಗ ಬಟ್ಟೆಗಳಿಂದ ಮಾಡಿದ ಸ್ಥಳೀಯ ಪರಿಸರಕ್ಕೆ, ವಾತಾವರಣಕ್ಕೆ (ಹವಾಗುಣ) ಹೊಂದುವಂತಹ, ಸ್ವದೇಶಿ ಆಧಾರಿತ, ಭಾರತೀಯನೆಂಬ ಹೆಮ್ಮೆಯ ಭಾವನೆಯನ್ನು ಉಂಟು ಮಾಡುವಂತಹ ಮೈಸೂರು- ಕರ್ನಾಟಕ ಮಾದರಿಯ, ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವಂತಹ ಸಾಂಪ್ರದಾಯಿಕ ಉಡುಪನ್ನು ಘಟಿಕೋತ್ಸವದಲ್ಲಿ ಧರಿಸಬೇಕೆಂದು ಹಾಗೂ ಈಗ ಇರುವ ಕಪ್ಪು ನಿಲುವಂಗಿಯನ್ನು ಕೂಡಲೇ ಬದಲಾಯಿಸಬೇಕೆಂದು ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಪರೀಕ್ಷಾಂಗ ಕುಲಸಚಿವ ನೇತೃತ್ವದಲ್ಲಿ ಸಿಂಡಿಕೇಟ್ ಉಪ ಸಮಿತಿ ರಚಿಸಲು ತೀರ್ಮಾನಿಸಲಾಯಿತು.

oooooo

key words : Mysore-university-gown-change-convocation-UOM-VC