ಮೈಸೂರು ವಿವಿಯ ಮೊದಲ ಮಹಿಳಾ ಕುಲಪತಿ ಪ್ರೊ.ಸೆಲ್ವಿದಾಸ್ ಗೆ ಭಾವಪೂರ್ಣ ವಿದಾಯ…

kannada t-shirts

ಮೈಸೂರು, ಏ.26, 2021 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಕುಲಪತಿ ಎಂಬ ಹೆಮ್ಮೆಗೆ ಪಾತ್ರರಾಗಿದ್ದ ಪ್ರೊ.ಸೆಲ್ವಿದಾಸ್ ಅವರ ಶೈಕ್ಷಣಿಕ ಕ್ಷೇತ್ರದಲ್ಲಿನ ಕೊಡುಗೆಗಳನ್ನು ಸ್ಮರಿಸಿಕೊಳ್ಳುವ ಮೂಲಕ ಭಾವಪೂರ್ಣ ವಿದಾಯ ಸಲ್ಲಿಸಲಾಯಿತು.
ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಸೆಲ್ವಿದಾಸ್ (88) ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಪ್ರೊ.ಸೆಲ್ವಿದಾಸ್ ರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಾರದೆ ಮುಂಜಾನೆ ಇಹಲೋಕ ತ್ಯಜಿಸಿದರು.jk

ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಸಂತಾಪ ಸೂಚಕ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಮೊದಲ ಮಹಿಳಾ ಕುಲಪತಿ ಎಂಬ ಹೆಮ್ಮೆಗೆ ಪಾತ್ರರಾಗಿದ್ದ ಪ್ರೊ.ಸೆಲ್ವಿದಾಸ್, ಹಲವಾರು ಅಭಿವೃದ್ಧಿಪರ ಕಾರ್ಯಗಳನ್ನು ಜಾರಿಗೊಳಿಸುವ ಮೂಲಕ ಮೈಸೂರು ವಿವಿ ಗರಿಮೆ ಮೇಲೆತ್ತಿದರು.ಇವರ ಕುಲಪತಿ ಅವಧಿಯಲ್ಲೇ ಆಗ ತಾನೆ ಪ್ರಾರಂಭಗೊಂಡಿದ್ದ ಕಂಪ್ಯೂಟರ್ ಸೈನ್ಸ್ ನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಹುದ್ದೆ ನೀಡಿದರು. ಈ ಪೈಕಿ ನಾನು ಸಹ ಒಬ್ಬ ಎಂಬುದನ್ನು ಸ್ಮರಿಸಿಕೊಂಡರು.
ಮೈಸೂರು ವಿವಿ ಕುಲಪತಿಗಳಾಗಿದ್ದ ವೇಳೆಯಲ್ಲೇ ಯುಜಿಸಿ ಸದಸ್ಯರಾಗಿ, ಬಳಿಕ ಯುಪಿಎಸ್ಸಿ ಸದಸ್ಯರಾಗಿ ಆನಂತರ 6 ವರ್ಷಗಳ ಕಾಲ ರಾಜ್ಯ ಸಭಾ ಸದಸ್ಯರಾಗಿ ಪ್ರೊ.ಸೆಲ್ವಿದಾಸ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು ಎಂದು ಪ್ರೊ.ಹೇಮಂತ್ ಕುಮಾರ್ ನೆನಪಿಸಿಕೊಂಡರು.mysore-university-former-vice-chancelor-dr-p-selvie-das-bangalore
ಮೈಸೂರು ವಿವಿ ಕುಲಸಚಿವ ಪ್ರೊ.ಶಿವಪ್ಪ ಮಾತನಾಡಿ, ಮಹಿಳೆಯರು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಗೆಗೆ ಪ್ರೊ.ಸೆಲ್ವಿದಾಸ್ ಅವರಿಗೆ ವಿಶೇಷ ಆಸಕ್ತಿ. ಶೈಕ್ಷಣಿಕ ಕ್ಷೇತ್ರದಲ್ಲಿನ ಇವರ ಸಾಮರ್ಥ್ಯ ಕಂಡೇ ಇವರನ್ನು ಉನ್ನತ ಶಿಕ್ಷಣ ಇಲಾಖೆ ನಿರ್ದೇಶಕರನ್ನಾಗಿ ರಾಜ್ಯ ಸರಕಾರ ನೇಮಕ ಮಾಡಿತ್ತು. 10 ವರ್ಷಗಳ ಕಾಲ ಈ ಹುದ್ದೆಯನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದರು. 1988 ರಲ್ಲಿ ಮೈಸೂರು ವಿವಿ ಕುಲಪತಿಯಾಗಿ ನೇಮಕಗೊಂಡರು. 1989 ರಲ್ಲಿ ಮಹಿಳಾ ಅಧ್ಯಾಯನ ಕೇಂದ್ರವನ್ನು ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಿದರು ಎಂಬುದನ್ನು ಸ್ಮರಿಸಿಕೊಂಡರು.

key words : mysore-university-former-vice.chancelor-Dr. P. Selvie Das-bangalore

website developers in mysore