ಮೈಸೂರು ವಿಶ್ವವಿದ್ಯಾನಿಲಯ: ಬಿಇಡಿ ಫಲಿತಾಂಶ ಪ್ರಕಟ, ಮರುಮೌಲ್ಯಮಾಪನ ಇದ್ದರೆ ಅರ್ಜಿ ಆಹ್ವಾನ

 

ಮೈಸೂರು, ಫೆ.06, 2022 : (www.justkannada.in news ) ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಜನವರಿ-2022ರಲ್ಲಿ ನಡೆದ ಬಿ.ಇಡಿ ಪದವಿ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು, ಈ ಸಂಬಂಧ ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಮರುಮೌಲ್ಯಮಾಪನ ಬೇಕಾದರೆ ಅಥವಾ ಉತ್ತರ ಪತ್ರಿಕೆಯ ನಕಲು ಪ್ರತಿ ಅಗತ್ಯವಿದ್ತರೆ ಅಥವಾ ಉತ್ತರ ಪತ್ರಿಕೆ ವೀಕ್ಷಣೆ ಹಾಗೂ ಮರುಸಂಕಲನದ ಬಗ್ಗೆ ಈ ಕೆಳಕಂಡಂತೆ ದಿನಾಂಕಗಳನ್ನು ನಿಗದಿಪಡಿಸಿದೆ ಎಂದು ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರುಮೌಲ್ಯಮಾಪನ ಉತ್ತರ ಪತ್ರಿಕೆಯ ನಕಲು ಪ್ರತಿ/ಉತ್ತರ ಪತ್ರಿಕೆ ವೀಕ್ಷಣೆ ಮಾಡಲು, ಮರುಸಂಕಲನದ ಬಗ್ಗೆ ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಶುಲ್ಕ ಪಾವತಿಮಾಡಿ ಅರ್ಜಿಗಳನ್ನು ಅಪ್‌ಲೋಡ್ ಮಾಡಲು ಫೆ.16 ಕೊನೆಯ ದಿನ ಆಗಿದೆ.
ಅಂತೆಯೇ ಉತ್ತರ ಪತ್ರಿಕೆಗಳನ್ನು ವೀಕ್ಷಿಸಲು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ದಿನಾಂಕ ಫೆ.21 ಆಗಿದೆ.

ಮರುಮೌಲ್ಯಮಾಪನ ಶುಲ್ಕ ಶಿವರ (ಪ್ರತಿ ಪತ್ರಿಕೆಗೆ) 1200 ರೂ.ನಿಗದಿ ಪಡಿಸಲಾಗಿದೆ. ಉತ್ತರ ಪತ್ರಿಕೆ ನೋಡುವಿಕೆ ಮರು ಸಂಕಲನಕ್ಕೆ (ಪ್ರತಿ ಪತ್ರಿಕೆಗೆ) 550 ಮತ್ತು ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಗೆ 730 ರೂ.‌ನಿಗದಿಪಡಿಸಲಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ website www.uni-mysore.ac.in ನಲ್ಲಿ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ/ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿ/ ಉತ್ತರ ಪತ್ರಿಕೆಗಳ ಮರುಸಂಕಲನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ ಕಲ್ಪಿಸಿರುವ ವೆಬ್‌ಸೈಟ್ ಲಿಂಕ್ (Post Result Service) ನಲ್ಲಿ ವಿದ್ಯಾರ್ಥಿಗಳು , ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗ್‌ಇನ್ ಆದರೆ ವಿದ್ಯಾರ್ಥಿಯ ಪರೀಕ್ಷಾ ವಿವರಗಳು ದೊರೆಯುತ್ತವೆ. ನಂತರ ಯಾವ ಸೆಮಿಸ್ಟರಿನ ಯಾವ ವಿಷಯಕ್ಕೆ/ವಿಷಯಗಳಿಗೆ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ/ಮರುಮೌಲ್ಯಮಾಪನ/ಮರುಸಂಕಲನಕ್ಕೆ ಬೇಕಾಗಿದೆ ಎಂದು ಗುರುತಿಸಬೇಕು.

ನಿಗದಿತ ಶುಲ್ಕವನ್ನು Atom ಪೇಮಂಟ್ ಲಿಂಕ್ ಮುಖಾಂತರ ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮುಖಾಂತರ ಪಾವತಿಸಿದ ನಂತರ ಇದರ ಮುದ್ರಿತ ಒಂದು ಪ್ರತಿಯನ್ನು ವ್ಯಾಸಂಗ ಮಾಡಿದ ಕಾಲೇಜಿಗೆ ನೀಡಿ ಸ್ವೀಕೃತಿ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2419407/416 ಅನ್ನು ಸಂಪರ್ಕಿಸುವುದು ಎಂದು ಕುಲಸಚಿವರು ತಿಳಿಸಿದ್ದಾರೆ.

—-

key words : mysore-university-exams