ಇಂದಿಗೆ ಸರಿಯಾಗಿ 45 ವರ್ಷಗಳ ಹಿಂದೆ ಅಣ್ಣಾವ್ರಿಗೆ ‘ ಗೌಡಾ’ ನೀಡಿ ಸನ್ಮಾನಿಸಿದ EXCLUSIVE ಫೋಟೋ..

 

ಮೈಸೂರು, ಫೆ.08, 2021 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ, ವರನಟ ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಇಂದಿಗೆ ಸರಿಯಾಗಿ 45 ವರ್ಷಗಳು. 1976, ಫೆ. 08 ರಂದು ಅಣ್ಣಾವ್ರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.

1976 ರ ಫೆ.08 ಭಾನುವಾರ. ಅಂದು ಮೈಸೂರಿನ ಮಾನಸಗಂಗೋತ್ರಿಯ ಒಪನ್ ಏರ್ ಥಿಯೇಟರ್ ನಲ್ಲಿ ಘಟಿಕೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ವಿಶ್ವವಿದ್ಯಾನಿಲಯದ ಅಂದಿನ ಕುಲಾಧಿಪತಿಗಳು ಆದ ರಾಜ್ಯಪಾಲ ಡಾ. ಉಮಾಶಂಕರ್ ದೀಕ್ಷಿತ್ ಹಾಗೂ ಅಂದಿನ ಕುಲಪತಿ ಡಾ.ಡಿ.ವಿ.ಅರಸ್ ಸಮಾರಂಭದ ಮುಖ್ಯ ಅತಿಥಿಗಳು.

jk

ವರನಟ ರಾಜ್ಕುಮಾರ್ ಅವರ ಸಿನಿಮಾ ಜಗತ್ತಿನ ಅಪಾರ ಸಾಧನೆಯನ್ನು ಪರಿಗಣಿಸಿ ಅವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಿತ್ತು. ಇದೇ ವೇಳೆ ಅಣ್ಣಾವ್ರ ಜತೆ ಇತರೆ ಮೂವರು ಗೌರವ ಡಾಕ್ಟರೇಟ್ ಸ್ವೀಕರಿಸಿದರು.
ಅವರೆಂದರೆ, ಮುಂಬೈನ ಬಾಬಾ ಅಟಾಮಿಕ್ ಎನರ್ಜಿ ಸೆಂಟರ್ ನ ನಿರ್ದೇಶಕರಾದ ಡಾ. ಎಚ್.ಎನ್.ಸೇತ್ನಾ, ವಿ.ಸೀತಾರಾಮಯ್ಯ ಹಾಗೂ ಡಾ. ಎಮ್.ಎಚ್.ಗೋಪಾಲ್ ಅಣ್ಣಾವ್ರ ಜತೆಗೆ ಗೌರವ ಡಾಕ್ಟರೇಟ್ ಸ್ವೀಕರಿಸಿದ ಗಣ್ಯರು.

mysore-university-doctorate-rajkumar-kannada-actor-UOM

ಮಾನಸ ಗಂಗೋತ್ರಿಯ ಓಪನ್ ಏರ್ ಥಿಯೇಟರ್ ನಲ್ಲಿ, 1976 ಫೆ. 08 ರಂದು ಆಯೋಜಿಸಿದ್ದ ಈ ಕಾರ್ಯಕ್ರಮವೇ ಕಡೆಯ ಘಟಿಕೋತ್ಸವ ಸಮಾಂಭ ಎನ್ನಲಾಗಿದೆ. ಇದಾದ ಬಳಿಕ ಸಮಾರಂಭವನ್ನು ಕ್ರಾಫರ್ಡ್ ಭವನದಲ್ಲಿ ಆಯೋಜಿಸಲು ಆರಂಭಿಸಲಾಯಿತು.

———–00000

key words : mysore-university-doctorate-rajkumar-kannada-actor-UOM