ಡಾ.ಸಿದ್ದಲಿಂಗಯ್ಯ ಅವರನ್ನು ಕೇವಲ ಪ್ರತಿಮೆಗೆ ಸೀಮಿತಗೊಳಿಸಬೇಡಿ: ಸಂಸದ ವಿ.ಶ್ರೀನಿವಾಸ್ ಪ್ರಸಾದ್

ಮೈಸೂರು,ಸೆಪ್ಟಂಬರ್,2,2021(www.justkannada.in) ಸಿದ್ದಲಿಂಗಯ್ಯ ಅವರನ್ನು ಕೇವಲ ಪ್ರತಿಮೆಗೆ ಸೀಮಿತಗೊಳಿಸಬೇಡಿ. ಈ ರೀತಿಯ ‌ಕಾರ್ಯಕ್ರಮ ಮೂಲಕ ಅವರ ಆಶಯ, ಚಿಂತನೆಯನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ವಿಶ್ವಜ್ಞಾನಿ ಸಭಾಂಗಣದಲ್ಲಿ ನಡೆದ ‘ಹೋರಾಟದ ಸಾಗರಕ್ಕೆ ಸಾವಿಲ್ಲದ ನದಿ ಡಾ.ಸಿದ್ದಲಿಂಗಯ್ಯ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಿದ್ದಲಿಂಗಯ್ಯ ಅವರು ಇಂದು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಸದಾ ಜೊತೆ ಇರುತ್ತಾರೆ. ಅವರು ಚಿಂತನೆ, ಹೋರಾಟ ಬದುಕನ್ನು ಆದರ್ಶವಾಗಿ ಇಟ್ಟುಕೊಂಡರೆ ಅವರಿಗೆ ಸಲ್ಲಿಸುವ ನುಡಿನಮನಕ್ಕೆ ಅರ್ಥ ಬರುತ್ತದೆ. ಸಿದ್ಧಲಿಂಗಯ್ಯ ಅವರ ಪ್ರತಿಮೆ ಮಾಡುವುದರಿಂದ ಅವರ ಚಿಂತನೆ ಅಳವಡಿಸಿಕೊಂಡಂತೆ ಆಗುವುದಿಲ್ಲ. ಬೆಂಗಳೂರು ವಿವಿಯಲ್ಲಿ ಪ್ರತಿಮೆ ಮಾಡೋಣ. ಜೊತೆಗೆ ಅವರ ಹೆಸರಲ್ಲಿ ಪ್ರತಿಷ್ಠಾನ ಮಾಡಬೇಕಿದೆ. ಆ ಪ್ರತಿಷ್ಠಾನದ ಮೂಲಕ ಸಾಮಾಜಿಕ ಕೆಲಸಗಳು ಆಗಬೇಕಿದೆ ಎಂದು ಕಿವಿಮಾತು ಹೇಳಿದರು.

ಸಿದ್ದಲಿಂಗಯ್ಯ ಅವರು 1973ರಲ್ಲಿ ಮೊದಲ ಬಾರಿಗೆ ನನಗೆ ಪರಿಚಯವಾದರು. ದಲಿತ ಸಂಘರ್ಷ ಸಮಿತಿ ಪ್ರಾರಂಭವಾದ ದಿನದಿಂದಲೂ ಸಹಕಾರ ನೀಡಿದ್ದೇನೆ. ಸಿದ್ದಲಿಂಗಯ್ಯ ಅವರು ಕಷ್ಟಪಟ್ಟು ಓದಿದರು. ಅಂಬೇಡ್ಕರ್ ಬಗ್ಗೆ ಅವರು ಬರೆದ ಹಾಡು ನನಗೆ ಸದಾ ಹೊಸ ಹುರುಪನ್ನು ತುಂಬುತ್ತದೆ. ಇಂದಿನ ವಿದ್ಯಾರ್ಥಿಗಳಿಗೆ ಶಿಸ್ತು ಮಾಯವಾಗಿದೆ. ಹಲವರು ಹಾದಿ ತಪ್ಪುತ್ತಿದ್ದಾರೆ. ಮೊದಲು ಶಿಕ್ಷಣ ಪಡೆದು ನಂತರ ಹೋರಾಟ ಮಾಡಬೇಕೆಂದರು.

ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಅಧ್ಯಕ್ಷ ಪ್ರೊ.ಜೆ.ಸೋಮಶೇಖರ್ ಮಾತನಾಡಿ, ಈ ನಾಡು ಕಂಡ ಅಪರೂಪದ ಕವಿ, ನಾಡೋಜ ಡಾ.ಸಿದ್ದಲಿಂಗಯ್ಯ ಅವರರಿಗೂ  ಹಾಗೂ ಅಂಬೇಡ್ಕರ್ ಕೇಂದ್ರಕ್ಕೆ ಅವಿನಾಭಾವ ಸಂಬಂಧವಿದೆ. ಕೇಂದ್ರದ ಬೆಳವಣಿಗೆ ಹಾಗೂ ಎಲ್ಲಾ ಕಾರ್ಯಕ್ರಮದಲ್ಲಿ ನಮ್ಮ ಜೊತೆ ಸಿದ್ದಲಿಂಗಯ್ಯ ಅವರು ಇರುತ್ತಿದ್ದರು. ಮೈಸೂರಿನ ಕೊನೆಯ ಭೇಟಿ ಸಮಯದಲ್ಲೂ ಈ ಕೇಂದ್ರಕ್ಕೆ ಆಗಮಿಸಿ ನಮ್ಮನ್ನು ಹುರಿದುಂಬಿಸಿದ್ದರು,’’ ಎಂದು ಸ್ಮರಿಸಿಕೊಂಡರು.

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ , ಡಾ.ಮಾನಸ ಸಿದ್ದಲಿಂಗಯ್ಯ, ರಂಗಾಯಣದ ಮಾಜಿ ನಿರ್ದೇಶಕ ಜರ್ನಾದನ್ (ಜನ್ನಿ) ಸೇರಿದಂತೆ ಇತರರು ಇದ್ದರು.

ENGLISH SUMMARY…

‘Dr. Siddalingaiah should not be restricted only for statue: MP V. Srinivas Prasad
Mysuru, September 2, 2021 (www.justkannada.in): Chamarajanagara MP V. Srinivasa Prasad requested not to limit Dalit poet and litterateur Dr. Siddalingaiah only for a statue. He said his works and thoughts should be spread by organizing programs.
He participated in a program organized by the Dr. B.R. Ambedkar Research and Extension Center, University of Mysore, held at the Vishwagnani Auditorium.
In his address he said, though Dr. Siddalingaiah is not physically with us today, he will always remain in our minds and souls. “If we adopt his thoughts and follow the principles of his life that were full of struggles our tributes to him will be meaningful. His thoughts cannot be adopted just by installing his statue. Let us all install his statue at Bangalore University. A foundation should also be established in his name, through which social activities should be spread,” he said.
Litterateur Prof. Kalegowda Nagawara, Prof. G. Hemanth Kumar, Vice-Chancellor, University of Mysore, Dr. Manasa Siddalingaiah, Rangayana former Director Janardhan (Janni), and others were present.
Keywords: MP Srinivas Prasad/ Dr. Siddalingaiah/ statue/ restrict

Key words: mysore-university- Do not- limit- Dr. Siddalingaiah – statue- MP -V Srinivas Prasad