ಸೆ.13ಕ್ಕೆ ನಿಗದಿಯಾಗಿದ್ದ ಮೈಸೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ…

ಮೈಸೂರು,ಸೆಪ್ಟಂಬರ್,13,2020(www.justkannada.in): ಸೆಪ್ಟೆಂಬರ್ 13ಕ್ಕೆ ನಿಗದಿಯಾಗಿದ್ದ ಮೈಸೂರು ವಿಶ್ವ ವಿದ್ಯಾನಿಲಯದ  ಪದವಿ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗಿದೆ.Mysore university- Degree Examination- postponed - September 13

ಇದೇ ತಿಂಗಳ 13, 27 ಮತ್ತು ಅಕ್ಟೋಬರ್ 4ರಂದು ಕೆ-ಸೆಟ್‌, ನೀಟ್‌, ಯುಪಿಎಸ್‌ಸಿ ಪರೀಕ್ಷೆಗಳು ನಡೆಯುವುದರಿಂದ ಪದವಿ ಪರೀಕ್ಷೆ ಮುಂದೂಡಿ ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ಪ್ರಕಟಣೆ ಹೊರಡಿಸಿದ್ದಾರೆ. ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿಬಿಎ, ಬಿಎಸ್‌ಡಬ್ಲ್ಯೂ, ಬಿಟಿಎಚ್‌ ಮತ್ತು ಬಿಪಿಎ/ಬಿಎ ಪದವಿಯ (2, 4, 6 ನೇ ಸೆಮಿಸ್ಟರ್‌)  ಪರೀಕ್ಷೆಗಳನ್ನು ಮುಂದೂಡಲಾಗಿದೆ.Mysore university- Degree Examination- postponed - September 13

ಇದೇ ತಿಂಗಳು 13ರಂದು ನಡೆಯಬೇಕಿದ್ದ ಪದವಿ ಪರೀಕ್ಷೆ ಅಕ್ಟೋಬರ್ 10ಕ್ಕೆ ಮುಂದೂಡಿಕೆಯಾಗಿದೆ. ಸೆಪ್ಟಂಬರ್ 27ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಅಕ್ಟೋಬರ್.11ಕ್ಕೆ ಮುಂದೂಡಲಾಗಿದೆ. ಜೊತೆಗೆ ಅ.4ಕ್ಕೆ ನಿಗದಿಯಾಗಿದ್ದ (ಬಿ.ಎ/ ಬಿ.ಎಸ್ಸಿ) ಪರೀಕ್ಷೆಯನ್ನು ಅ.12ಕ್ಕೆ ಮುಂದೂಡಲಾಗಿದೆ.

Key words: Mysore university- Degree Examination- postponed – September 13