ಮೈಸೂರು ವಿವಿ: ಪದವಿ 3, 5 ನೇ ಸೆಮಿಸ್ಟರ್ ಪರೀಕ್ಷೆ ಶುಲ್ಕ‌ ಕಟ್ಟಲು ಸೂಚನೆ.

ಮೈಸೂರು,ಜನವರಿ,29,2022(www.justkannada.in):  ಫೆಬ್ರವರಿ/ಮಾರ್ಚ್ ತಿಂಗಳಲ್ಲಿ ನಡೆಯಲಿರುವ 3 ಮತ್ತು 5ನೇ ಸೆಮಿಸ್ಟರ್‌ ನ (CBCS-Freshers) ಹಾಗೂ 1, 3 ಮತ್ತು 5ನೇ ಸೆಮಿಸ್ಟರ್‌ ನ (CBCS-Repeaters & Non CBCS-Repeaters) ಎಲ್ಲಾ ಸ್ನಾತಕ ಪದವಿಯ ಪರೀಕ್ಷೆಗಳ ಸಂಬಂಧ ಕೆಳಕಂಡಂತೆ ದಿನಾಂಕಗಳನ್ನು ಪರಿಷ್ಕರಿಸಿ ಕುಲಸಚಿವರು (ಪರೀಕ್ಷಾಂಗ) ಆದೇಶ ಹೊರಡಿಸಿದ್ದಾರೆ.

2004 ರಿಂದ (Semester Scheme) ಪದವಿಯ ಎರಡುಪಟ್ಟು ಅವಧಿ ಮುಗಿದ ನಂತರವು ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಒಂದು ಅವಕಾಶ ನೀಡಿರುವುದರಿಂದ ಈ ವಿದ್ಯಾರ್ಥಿಗಳಿಂದ ಸಹ ಪರೀಕ್ಷಾ ಶುಲ್ಕವನ್ನು ಪಾವತಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಷ್ಕೃತ ಅಂತಿಮ ದಿನಾಂಕಗಳೆಂದರೆ:

ಪರೀಕ್ಷಾ ಶುಲ್ಕ ಪಾವತಿಸಲು ಹಾಗೂ ಭರ್ತಿಮಾಡಿದ ಅರ್ಜಿಗಳನ್ನು ಕಾಲೇಜಿಗೆ ಸಲ್ಲಿಸಲು ಫೆ.5ರಂದು ಕೊನೇ ದಿನ. ಆನ್‌ ಲೈನ್‌ ಮೂಲಕ ಪರೀಕ್ಷಾ ಅರ್ಜಿಗಳನ್ನು ಕಾಲೇಜಿನವರು ಭರ್ತಿ ಮಾಡಲು ಫೆ.10ರಂದು ಅಂತಿಮ ದಿನ. ಪರೀಕ್ಷಾ ಶುಲ್ಕವನ್ನು ಡಿ.ಡಿ ಮೂಲಕ ಪರೀಕ್ಷಾ ಖಾತೆಗೆ ಪರೀಕ್ಷಾ ಖಾತೆ ಸಂಖ್ಯೆ: 54007591200 (Examination Account) SBI, University Campus Branch, Mysuru ಇವರಿಗೆ ಪಾವತಿಸಿ ಚಲನ್ ಪ್ರತಿಯನ್ನು ಈ ಕಛೇರಿಗೆ ಸಲ್ಲಿಸಲು ಫೆ.14ರಂದು ಅಂತಿಮ ದಿನ.

ಪ್ರವೇಶ ಪತ್ರಗಳ ಮುದ್ರಣದ ನಂತರ ವಿಶ್ವವಿದ್ಯಾನಿಲಯದ ಅನುಮೋದನೆ ಪಡೆಯಲು [ಆನ್‌ಲೈನ್ ಮೂಲಕ ಅಭ್ಯರ್ಥನಾ ಪಟ್ಟಿಯನ್ನು ಮುದ್ರಿಸಿ ಪ್ರಾಂಶುಪಾಲರ ಸಹಿ ಪಡೆದು ಒಂದು ಪ್ರತಿಯನ್ನು ಪ್ರವೇಶ ಪತ್ರಗಳ ಜೊತೆಯಲ್ಲಿ ಕುಲಸಚಿವ (ಪರೀಕ್ಷಾಂಗ) ಇವರಿಗೆ ಸಲ್ಲಿಸಬೇಕು] ಫೆ.18ರೊಳಗೆ ಸಲ್ಲಿಸಬೇಕು

ಆನ್‌ಲೈನ್ ಮೂಲಕ C & C (continuous assessment) ಅಂಕಗಳನ್ನು ನಮೂದಿಸಲು ಫೆಬ್ರವರಿ 21 ಹಾಗೂ‌ ಪ್ರಾಯೋಗಿಕ ಪರೀಕ್ಷೆಗಳನ್ನು ಪೂರ್ಣಗೊಳಿಸುವ ದಿನಾಂಕ ಲಿಖಿತ ಪರೀಕ್ಷೆಗಳು ಫೆಬ್ರವರಿ21ರಿಂದ ಪ್ರಾರಂಭವಾಗುತ್ತದೆ.

Key words: Mysore university-degree- exam fee

ENGLISH SUMMARY….

UoM asks 3, 5th semester degree students to pay exam fee
Mysuru, January 29, 2022 (www.justkannada.in): The Registrar (Exams) of the University of Mysore has issued orders revising the dates of graduate and post-graduate exams including the 3rd and 5th semester (CBCS-Freshers) exams and 1, 3, and 5th semester (CBCS-Repeaters & Non CBCS-Repeaters) to be held in February/March.
In a press statement, he has informed that several students have failed to pass the degree exams even after completion of twice the duration of graduation (semester scheme) from 2004. Such students have been allowed to appear for the exams who are allowed to pay the exam fee.
The details of the revised final dates are as follows:
The last date to pay the examination fee and submit the filled-up application forms to the College is February 5. The last date to submit exam applications online is February 10. The exam fee can be paid through DD in the name of the examination account No.: 54007591200 (Examination Account), SBI, University Campus Branch, Mysuru. The last date to pay the fee and submit the fee paid challan to the College is February 14.
Keywords: University of Mysore/ Exam fee/ revised date