ದೂರ ಶಿಕ್ಷಣಕ್ಕೆ ಅವಕಾಶ ನೀಡದಿದ್ರೆ ಆನ್ಲೈನ್ ಕೋರ್ಸ್ ಆಗಿ ಪರಿವರ್ತಿಸಲು ಮೈಸೂರು ವಿವಿ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ…

ಮೈಸೂರು,ಜೂ,18,2020 (www.justkannada.in): ಸರ್ಕಾರ ದೂರ ಶಿಕ್ಷಣ ನಡೆಸದಂತೆ ಆದೇಶ ನೀಡಿದ್ರೆ ದೂರ ಶಿಕ್ಷಣವನ್ನು ಆನ್ಲೈನ್ ಕೋರ್ಸ್ ಆಗಿ ಪರಿವರ್ತಿಸಲು  ಮೈಸೂರು ವಿವಿ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಮಾನಸ ಗಂಗೋತ್ರಿಯ ವಿಜ್ಞಾನ ಭವನ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ನೇತೃತ್ವದಲ್ಲಿ ಸಭೆ ಶಿಕ್ಷಣ ಮಂಡಳಿ ಸಾಮಾನ್ಯ ಸಭೆ ನಡೆಯಿತು.  ಮಾರ್ಚ್ ಮಾಹೆಯಲ್ಲಿ ನಡೆಯಬೇಕಿದ್ದ ಸಭೆ ಕೊರೊನಾ ಹಿನ್ನೆಲೆ ಮುಂದೂಡಲ್ಪಟ್ಟಿತ್ತು. ಇಂದು ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕಾ ಕ್ರಮದ ಜೊತೆಗೆ ಸಭೆ ನಡೆಯಿತು. ಸಭೆ ಆರಂಭಕ್ಕೂ ಮುನ್ನ ಅಗಲಿದ ಗಣ್ಯರಿಗೆ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು.mysore-university-convert-online-course-meeting

ದೂರ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿಲ್ಲ. ಆದರೆ ದೂರ ಶಿಕ್ಷಣ ನಡೆಸಲು ಮೈಸೂರು ವಿವಿಗೆ ವಿಶೇಷ ಅವಕಾಶವಿದೆ. ಸದ್ಯಕ್ಕೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಆರಂಭವಾಗಬೇಕಿದ್ದ  ಪ್ರವೇಶಾತಿಗೆ ತಡೆ ನೀಡಲಾಗಿದೆ. ಒಂದು ವೇಳೆ ಸರ್ಕಾರ ದೂರ ಶಿಕ್ಷಣ ನಡೆಸದಂತೆ ಆದೇಶ ನೀಡಿದ್ರೆ ದೂರ ಶಿಕ್ಷಣವನ್ನು ಆನ್ಲೈನ್ ಕೋರ್ಸ್ ಆಗಿ ಪರಿವರ್ತಿಸುವುದು. ಈ ಬಗ್ಗೆ ಸರ್ಕಾರಕ್ಕೂ ಮನವರಿಕೆ ಮಾಡುವ ಕುರಿತು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಸಭೆಯಲ್ಲಿ ಕುಲಸಚಿವ ಆರ್.ಶಿವಪ್ಪ, ಸಿಂಡಿಕೇಟ್ ಸದಸ್ಯರು ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು ಭಾಗಿಯಾಗಿದ್ದರು.

Key words: Mysore university- convert -online course -meeting