ಪಿಎಚ್.ಡಿ ಕೋರ್ಸ್ ವರ್ಕ್ : ಈ ಬಾರಿ ಮಾತ್ರ ಆನ್ ಲೈನ್ ತರಗತಿಗೆ ಮೈಸೂರು ವಿವಿ ಶೈಕ್ಷಣಿಕ ಮಂಡಳಿ ಸಭೆ ಅನುಮೋದನೆ

 

ಮೈಸೂರು, ಜು.13, 2021 : (www.justkannada.in news) ಕೊರೊನಾ ಕಾರಣದಿಂದ 2020-21ನೇ ಸಾಲಿನಲ್ಲಿ ನಡೆಯಬೇಕಿದ್ದ ಪಿಎಚ್.ಡಿ ಕೋರ್ಸ್ ವರ್ಕ್ ತರಗತಿಗಳನ್ನು ನಡೆಸಲು ವಿಳಂಬವಾಗುತ್ತಿದ್ದ ಕಾರಣ ಕೆಲ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಡೆಸಲು ಕೋರಿದ್ದರು. ಆದ್ದರಿಂದ ಕೋವಿಡ್ ಸೋಂಕು ಕಡಿಮೆಯಾಗುವವರೆಗೆ ಇದೊಂದು ಬಾರಿ ಮಾತ್ರ ಆನ್ ಲೈನ್ ನಲ್ಲಿ ತರಗತಿಗಳನ್ನು ನಡೆಸಲು ಮೈಸೂರು ವಿವಿ ಶೈಕ್ಷಣಿಕ ಮಂಡಳಿ ಸಭೆ ಅನುಮೋದನೆ ನೀಡಿದೆ.

ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಮಂಗಳವಾರ ಶಿಕ್ಷಣ ಮಂಡಳಿಯ ಮೊದಲನೇ ಸಾಮಾನ್ಯ ಸಭೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

jk

ವಿದೇಶಿ ವಿದ್ಯಾರ್ಥಿಗಳು ಸಹ ಆಫ್ ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಆದ್ದರಿಂದ ಈ ವರ್ಷ ಮಾತ್ರ ಆನ್‌ಲೈನ್‌ನಲ್ಲಿ ಪಿಎಚ್.ಡಿ ಕೋರ್ಸ್ ವರ್ಕ್ ಕ್ಲಾಸ್ ನಡೆಸಲಾಗುತ್ತದೆ. ಜತೆಗೆ ಆಫ್ ಲೈನ್ ತರಗತಿಗಳಿಗೆ ಬರುವವರು ಹಾಜರಾಗಬಹುದು ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಹೇಳಿದರು.

‘ಬುದ್ಧ ಅಧ್ಯಯನ ಕೇಂದ್ರ’ ಸ್ಥಾಪಿಸುವ ಸಂಬಂಧ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಹಾಗೂ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಆರ್.ಧರ್ಮಸೇನಾ, ಬುದ್ಧ ಅಧ್ಯಯನಕ್ಕೆ ಪ್ರತ್ಯೇಕ ಕೇಂದ್ರ ತೆರೆಯುವಂತೆ, ಹಿಂದೂ ಇಸಂ ಬಗ್ಗೆ ಅಧ್ಯಯನ ನಡೆಸಲು ಚಿಂತಿಸಬೇಕು ಎಂದು ಹೇಳಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಸಿಂಡಿಕೇಟ್ ಸದಸ್ಯ ಪ್ರೊ.ರಮೇಶ್, ‘ಕೆಲವು ವಿವಿಗಳಲ್ಲಿ ಬೌದ್ಧ ಧರ್ಮ ಅಧ್ಯಯನ ಸ್ವತಂತ್ರ ಕೋರ್ಸ್‌ಆಗಿದೆ. ನಮ್ಮಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ‘ಬುದ್ಧ ಧಮ್ಮ ಎಂದು ನಾಮಕರಣ ಮಾಡಬೇಕು’ ಎಂದು ಸಲಹೆ ನೀಡಿದರು.
ಗುಂಡ್ಲುಪೇಟೆ ಶಾಸಕ ನಿರಂಜನ್‌ಕುಮಾರ್ ಮಾತನಾಡಿ, ಧರ್ಮದ ವಿಚಾರವೇ ಸೂಕ್ಷ್ಮವಾದದ್ದು, ಹಾಗಾಗಿ ಜೈನ್, ಸಿಖ್ ಹಾಗೂ ಕ್ರೈಸ್ತ ಧರ್ಮಕ್ಕೂ ಒಂದೊಂದು ಅಧ್ಯಯನ ಕೇಂದ್ರ ಸ್ಥಾಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಸದ್ಯ ಯಾವುದೇ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ ಆಕ್ಷೇಪವಿಲ್ಲ. ಈ ವಿಷಯವನ್ನು ಡೀನರ ಸಮಿತಿಯಲ್ಲಿ ಪ್ರಸ್ತಾಪಿಸಿ, ನಂತರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು.

ವಿಶೇಷ ಕೋರ್ಸ್‌ಗಳಿಗೆ ಅನುಮೋದನೆ

ಹೂಟಗಳ್ಳಿ ಕೈಗಾರಿಕಾ ವಲಯದಲ್ಲಿರುವ ಜಿಇಟಿಎಸ್ ಅಕಾಡೆಮಿಗೆ ವಿಶೇಷ ಯೋಜನೆಗಳ ಅಡಿಯಲ್ಲಿ ಕೆಲವು ಕೋರ್ಸ್‌ಗಳನ್ನು ಆರಂಭಿಸಲು ಮೈಸೂರು ವಿವಿಯಿಂದ ಮಾನ್ಯತೆ ನೀಡಲು ಅಧಿಸೂಚನೆ ಹೊರಡಿಸಲಾಗಿದೆ.
ಬಿ.ಕಾಂ ನಿಂದ ಇ-ಕಾಮರ್ಸ್ ಅಂಡ್ ಡಿಜಿಟಲ್ ಮಾರ್ಕೆಟಿಂಗ್, ಫಿನಾನ್ಸ್ ಅಂಡ್ ಇನ್‌ವೆಸ್ಟ್ಮೆಂಟ್, ಇಂಟರ್‌ನ್ಯಾಷನಲ್ ಅಕೌಂಟಿಂಗ್ ಅಂಡ್ ಫಿನಾನ್ಸ್, ಬಿಬಿಎ ನಿಂದ ಬಿಜಿನೆಸ್ ಅನಾಲಿಟಿಕ್ಸ್, ಸಸ್ಟೈನಬಲ್ ಡೆವಲಪ್‌ಮೆಂಟ್ ಅಂಡ್ ಎನ್‌ವಿರಾನ್‌ಮೆಂಟ್ ಮ್ಯಾನೇಜ್‌ಮೆಂಟ್ ಹಾಗೂ ಇಂಟರ್‌ನ್ಯಾಷನಲ್ ಬಿಜಿನೆಸ್ ಕೋರ್ಸ್‌ಗಳ ರೆಗ್ಯುಲೇಶನ್ ಪಠ್ಯಕ್ರಮಗಳನ್ನು ಸಿಂಡಿಕೇಟ್ ಸದಸ್ಯರ ಅನುಮತಿಯೊಂದಿಗೆ ಅನುಮೋದಿಸಲಾಯಿತು.

ಉಳಿತಾಯ ಬಜೆಟ್ :

jk

ಮೈಸೂರು ವಿವಿಯಲ್ಲಿ ಒಟ್ಟು 25 ಖಾತೆಗಳಿವೆ. ಸಾಮಾನ್ಯ ಕಂದಾಯ ಖಾತೆ, ವಿನಾಯಿತಿ ಖಾತೆ, ಗೌಪ್ಯ ಖಾತೆ, ಪೆನ್ಷನ್ ಗ್ರಾಂಟ್ ಸೇರಿದಂತೆ ವಿವಿಧ ಖಾತೆಗಳು ಇದರಲ್ಲಿ ಸೇರಿವೆ. 2020-21ನೇ ಸಾಲಿನ ಆರಂಭಿಕ ಉಳಿತಾಯ 507,69,42,105 (507 ಕೋಟಿ ರೂ.) ರೂ.ಗಳ ಆದಾಯದಲ್ಲಿ 374,09,68,74 (374 ಕೋಟಿ ರೂ.) ಕೋಟಿ ರೂ.ಗಳನ್ನು ಉಳಿತಾಯ ಮಾಡಿದೆ ಎಂದು ಮೈವಿವಿ ಪರೀಕ್ಷಾಂಗ ಕುಲಸಚಿವ ಎ.ಪಿ.ಜ್ಞಾನಪ್ರಕಾಶ್ ಮಾಹಿತಿ ನೀಡಿದರು.
ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ಮೈಸೂರು ವಿವಿ ಮೊದಲ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಶಿಕ್ಷಣ ಮಂಡಳಿಯ ಮೊದಲನೇ ಸಾಮಾನ್ಯ ಸಭೆಯಲ್ಲಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರೊ.ಮುಜಾರ್ ಅಸಾದಿ ಸೇರಿದಂತೆ ಇತರರು ಇದ್ದರು.

ENGLISH SUMMARY…..

Ph.D. Coursework: UoM Education Committee meeting consents for online classes only this time
Mysuru, July 13, 2021 (www.justkannada.in): Due to the delay in conducting Ph.D. coursework classes for the year 2020-21 due to COVID-19 Pandemic, students had requested to conduct the class online. In a meeting, the University of Mysore Education Committee has given its consent to conduct the classes online only this time.
The first general body meeting of the committee was conducted on Tuesday at the Vignana Bhavana in Manasagangotri campus, under the chairmanship of Prof. G. Hemanth Kumar, Vice-Chancellor, the University of Mysore, where this decision was taken. “As the foreign students also cannot attend offline classes, the Ph.D. coursework classes will be held online only this year. Those who are willing to attend offline classes can do so,” Prof. G. Hemanth Kumar informed in the meeting.
Responding to the question on establishing the ‘Buddha Research Centre,’ MLC and Mysore University syndicate member R. Dharmasena urged to open the center and undertake research on Hinduism. Conceding to this, syndicate member Prof. Ramesh said, “research on Buddhism is an independent course in several Universities. We have to name it ‘Buddha Dhamma’ here, he suggested.
Registrar Prof. R. Shivappa, Prof. Muzaffar Asadi, and others attended the first Educational Committee general body meeting.
Keywords: University of Mysore/ Prof. G. Hemanth Kumar/ UoM/ Syndicate members/ PhD Course work/ online classes/ only this year

key words : mysore-university-academic-council-meeting-UOM-mysore-phd-course-work