ಸಂಚಾರ ನಿಯಮ ಪಾಲಿಸಲು ವಿನೂತನ ಜಾಗೃತಿ ಜಾಥಾ: ಪೊಲೀಸ್ ಸಿಬ್ಬಂದಿಗಳಿಂದಲೇ ಬ್ಯಾಂಡೇಜ್ ಧರಿಸಿ ಅಣುಕು ಪ್ರದರ್ಶನ….

kannada t-shirts

ಮೈಸೂರು,ಜ,14,2020(www.justkannada.in): ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮೈಸೂರಿನ ಎನ್.ಆರ್ ಸಂಚಾರ ವಿಞಭಾಗದ ಪೊಲೀಸರು ಇಂದು ವಿನೂತನ ಕಾರ್ಯಕ್ರಮ ಆಯೋಜಿಸಿದ್ದರು.

ಸಂಚಾರ ನಿಯಮ ಪಾಲಿಸುವ ಬಗ್ಗೆ ಅರಿವು ಮೂಡಿಸಲು  ಪೊಲೀಸ್ ಸಿಬ್ಬಂದಿಗಳಿಂದ ಅಣುಕು ಪ್ರದರ್ಶನ ಮಾಡಲಾಯಿತು. ಪೊಲೀಸ್ ಸಿಬ್ಬಂದಿಗಳು ಅಪಘಾತದಲ್ಲಿ ಗಾಯಗೊಂಡ ರೋಗಿಗಳಂತೆ ಅಣುಕು ಪ್ರದರ್ಶನ ಮಾಡಿದರು.  ಕೈ ಕಾಲುಗಳಿಗೆ ಬ್ಯಾಂಡೇಜ್ ಧರಿಸಿದ‌ ಸಿಬ್ಬಂದಿಗಳಿಂದ ರೋಗಿಗಳಂತೆ  ನಟಿಸಿ ಸಂಚಾರ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದರು.

ಲಷ್ಕರ್ ಸಂಚಾರ ಪೊಲೀಸ್ ಠಾಣೆಯಿಂದ ಆಯುರ್ವೇದಿಕ್ ವೃತ್ತದ ವರೆಗೆ  ಈ ಜಾಗೃತಿ ಜಾಥಾ ನಡೆಸಲಾಯಿತು. ಪೊಲೀಸರು ರಸ್ತೆಯುದ್ದಕ್ಕೂ ಸಂಚಾರ ನಿಯಮ ಪಾಲಿಸುವಂತೆ ಮೈಕ್ ನಲ್ಲಿ ಪ್ರಚಾರ ಮಾಡಿದ್ದು ಜಾಗೃತಿ ಜಾಥಾ ಸಾರ್ವಜನಿಕರ ಗಮನ ಸೆಳೆಯಿತು.

Key words: mysore-Traffic rule- Awareness –Wearing- bandages – police

website developers in mysore