ಕೆರೆ ಪುನಶ್ಚೇತನ ನೆಪದಲ್ಲಿ ಮಣ್ಣು ಲೂಟಿ ಆರೋಪ: ಗ್ರಾಮಸ್ಥರು ಮತ್ತು ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ..

ಮೈಸೂರು,ಜೂ,8,2019(www.justkannada.in): ಪುನಶ್ಚೇತನ ನೆಪದಲ್ಲಿ  ತಾವರಕಟ್ಟೆ ಕೆರೆ ಹೂಳೆತ್ತಿದ್ದ ಮಣ್ಣನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಗ್ರಾಮಸ್ಥರು ಮತ್ತು ಕನ್ನಡ ಪರ ಸಂಘಟನೆಗಳ ಸದಸ್ಯರು  ತಾವರೆ ಕಟ್ಟೆ ಕೆರೆಗೆ ಇಳಿದು ಪ್ರತಿಭಟನೆ ಧರಣಿ ನಡೆಸಿದ್ದಾರೆ. ಜೆ.ಕೆ ಟೈರ್ಸ್ ಮತ್ತು ಇಂಡಸ್ಟ್ರಿ ತಾವರೆ ಕೆರೆ ಪುನಶ್ಚೇತನ ಕಾಮಗಾರಿ ಕೈಗೊಂಡಿತ್ತು. ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆಗಾರ ನಿಯಮ ಮೀರಿ ಕೆರೆಯಿಂದ ಮಣ್ಣು ತೆಗೆದಿದ್ದಾರೆ. ಈ ಮಣ್ಣನ್ನ ಕೆರೆ ಸುತ್ತಾ ಏರಿ ನಿರ್ಮಾಣಕ್ಕೆ ಬಳಸುವ ಬದಲು ಖಾಸಗಿ ಇಟ್ಟಿಗೆ ನಿರ್ಮಾಣ ಕಾರ್ಖಾನೆಗೆ ಮಾರಾಟ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ,

ತಾವರೆ ಕೆರೆಯಲ್ಲಿ ಏಳೇಂಟು ಅಡಿಗಳಷ್ಟು ಮಣ್ಣು ಎತ್ತಿರೋದ್ರಿಂದ ತಾವರೆ ಹೂ ಸಂತತಿ ನಾಶವಾಗಿದೆ. ಇದರಿಂದ ತಾವರೆ ಕಟ್ಟೆ ಹೆಸರೂ ಕೂಡ ನಾಶವಾಗಲಿದೆ. ನಿಯಮ ಮೀರಿ ಊಳೆತ್ತಿ, ಮಣ್ಣು ಮಾರಾಟ ಮಾಡಿರೋ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಧರಣಿನಿರತರು ಆಗ್ರಹಿಸಿದ್ದಾರೆ.

Key words: #mysore #tavarekattelake #looting  #Protest #villagers