ತಿ.ನರಸೀಪುರ ತಾಲ್ಲೂಕಿನಲ್ಲಿ ಅರ್ಧ ಶತಕ ದಾಟಿದ ಕೊರೊನಾ: ಇಂದು 5 ಪಾಸಿಟಿವ್ ಕೇಸ್ ಪತ್ತೆ…

ಮೈಸೂರು,ಜು,18,2020(www.justkannada.in):  ಮೈಸೂರು ಜಿಲ್ಲೆಯ ನಗರ ಪ್ರದೇಶದ ಜತೆಗೆ ಗ್ರಾಮೀಣ ಭಾಗದಲ್ಲೂ ಕೊರೋನಾ ಸೋಂಕು ಹೆಚ್ಚುತ್ತಲೇ ಇದ್ದು ತಿ.ನರಸೀಪುರ ತಾಲ್ಲೂಕಿನಲ್ಲಿ ಇಂದು ಮತ್ತೆ 5 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.jk-logo-justkannada-logo

ತಿ.ನರಸೀಪುರ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅರ್ಧ ಶತಕ ದಾಟಿದೆ. ತಾಲ್ಲೂಕಿನ ಎಸ್.ಕೆಬ್ಬೇಹುಂಡಿ ಗ್ರಾಮದ 30 ವರ್ಷದ ಯುವಕನಿಗೆ ಪಾಸಿಟಿವ್ ಬಂದಿದೆ. ಈತ ಬೆಂಗಳೂರು ಟ್ರಾವೆಲ್ ಹಿಸ್ಟರಿ ಹೊಂದಿದ್ದಾನೆ ಎನ್ನಲಾಗಿದೆ.mysore-t-narasipur-5-positive-cases-again-today

ಇನ್ನು ತಾಲೂಕಿನ ಹೊರಳಹಳ್ಳಿ ಗ್ರಾಮದ 70ವರ್ಷದ ಮಹಿಳೆಗೆ, ಬನ್ನೂರು ಪಟ್ಟಣದ 34 ವರ್ಷದ ಯುವಕ ಹಾಗೂ  ಮೂಗೂರು ಗ್ರಾಮದ ಇಬ್ಬರಿಗೆ ಸೋಂಕು ತಗುಲಿದೆ. ತಾಲ್ಲೂಕು ಅರೋಗ್ಯ ಇಲಾಖೆ ಸೋಂಕಿತರೆಲ್ಲರನ್ನೂ  ಕೋವಿಡ್ 19 ಆಸ್ಪತ್ರೆಗೆ ರವಾನಿಸಿದೆ.

Key words: mysore- T.Narasipur- 5 positive -cases –again- today.