ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿ: ತಮ್ಮ ಹಾಗೂ ಸುತ್ತೂರು ಮಠದ ಒಡನಾಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ….

ಮೈಸೂರು,ಜ,22,2020(www.justkannada.in): ತನ್ನ ಜನಪರ ಕಾರ್ಯಗಳ ಮೂಲಕವೇ ಸುತ್ತೂರು ಮಠ ವಿಶ್ವದ ಗಮನ ಸೆಳೆದಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ವಿಶ್ಲೇಷಿಸಿದರು.

ಸುತ್ತೂರು ಮಠದಿಂದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುತ್ತೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಹೆಚ್.ಡಿ ದೇವೇಗೌಡರು ಸುತ್ತೂರು ಶ್ರೀಗಳು ಇತರ ಶ್ರೀಗಳ ಪಾದಕ್ಕೆ ನಮಸ್ಕರಿಸಿದರು.

ಸಾಮೂಹಿಕ ವಿವಾಹ ಮಹೋತ್ಸವ  ಪಾಲ್ಗೊಂಡು ಮಾತನಾಢಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ತಮ್ಮ ಹಾಗೂ ಸುತ್ತೂರು ಮಠದ ಒಡನಾಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.  ನನಗೂ ಸುತ್ತೂರು ಮಠಕ್ಕೂ 50 ವರ್ಷಗಳ ಸಂಬಂಧವಿದೆ. ನಾನು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದಾಗ ಸುತ್ತೂರು ಮಠದ ಅಂದಿನ ಆದಿಜಗದ್ಗುರುಗಳು ನನ್ನ ಕ್ಷೇತ್ರಕ್ಕೆ ಬಂದಿದ್ದರು. ಆಗ ನನ್ನ ಕ್ಷೇತ್ರದಲ್ಲಿ ಆದಿಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತ್ತು. ಅವರು ಸ್ಥಾಪಿಸಿದ ಜನಪರ ಕಾರ್ಯಗಳು ಇಂದಿಗೂ ನಡೆದುಕೊಂಡು ಬರುತ್ತಿವೆ. ತನ್ನ ಜನಪರ ಕಾರ್ಯಗಳ ಮೂಲಕವೇ ಸುತ್ತೂರು ಮಠ ವಿಶ್ವದ ಗಮನ ಸೆಳೆದಿದೆ ಎಂದು ಕೊಂಡಾಡಿದರು.

Key words: mysore- suttur math- Wedding Program -Former Prime Minister -HD Deve Gowda