ಮೈಸೂರಿನಲ್ಲಿ ಬೀದಿನಾಯಿಗಳ ದಾಳಿಯಿಂದಾಗಿ  ಏಳು ವರ್ಷದ ಬಾಲಕನಿಗೆ ಗಾಯ.

ಮೈಸೂರು,ಮಾರ್ಚ್,29,2022(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಮಧ್ಯೆ 7 ವರ್ಷ ಬಾಲಕನ ಮೇಲೆ  5ಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ ನಡೆಸಿರುವ ಘಟನೆ  ನಿನ್ನೆ ನಡೆದಿದೆ.

ಮೈಸೂರಿನ ಬನ್ನಿಮಂಟಪದ ಬಳಿಯ  ಆಬಿಟ್ ಕನ್ವೆನ್ಷನ್ ಹಾಲ್ ಬಳಿ ಈ ಘಟನೆ ನಡೆದಿದೆ. ಮಹಮದ್ ಇಜಾನ್ ಅಲಿ(7), ಬೀದಿ ನಾಯಿಗಳ ದಾಳಿಗೊಳಗಾಗಿ ಗಾಯಗೊಂಡ ಬಾಲಕ. ನಿನ್ನೆ ಬಾಲಕನ ಮೇಲೆ ಅಟ್ಯಾಕ್ ಮಾಡಿದ್ದು ಈ ವೇಳೆ ಸ್ಥಳೀಯರು  ಬಾಲಕನನ್ನ ರಕ್ಷಣೆ ಮಾಡಿದ್ದಾರೆ.

ಈ ಕುರಿತು ಜಸ್ಟ್ ಕನ್ನಡ ಡಾಟ್ ಇನ್  ಜತೆ  ಬಾಲಕನ ಕುಟುಂಬಸ್ಥರೊಬ್ಬರು ಮಾತನಾಡಿ ಮಾಹಿತಿ ನೀಡಿದ್ದಾರೆ. ನಿನ್ನೆ ಬೆಳಿಗ್ಗೆ 10.30ರ ವೇಳೆಗೆ  ಮಹಮದ್ ಇಜಾನ್ ಅಲಿ ಮೇಲೆ 15 ರಿಂದ 20 ಬೀದಿನಾಯಿಗಳು ಅಟ್ಯಾಕ್ ಮಾಡಿದ್ದು ತಕ್ಷಣ  ಆತನನ್ನ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜೆಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಸಂಜೆ ವೇಳೆಗೆ ಮನೆಗೆ ಆತನನ್ನ ಕರೆತಂದಿದ್ದೇವೆ  ಸದ್ಯ ಮನೆಯಲ್ಲೇ ಚಿಕಿತ್ಸೆ ಮುಂದುವರೆದಿದ್ದು ಮಹಮದ್ ಇಜಾನ್ ಅಲಿಗೆ  ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಹೀಗಾಗಿ ಅಪಾಯದಿಂದ ಪಾರಾಗಿದ್ದಾನೆ ಎಂದಿದ್ದಾರೆ.

ಅಲ್ಲದೇ ಈ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಪಾಲಿಕೆ ವತಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಮಕ್ಕಳಿಗೆ ಬೇಸಿಗೆ ರಜೆ ಶುರವಾಗಿದ್ದು ಹೀಗಾಗಿ ಮಕ್ಕಳ ಹಿತದೃಷ್ಠಿಯಿಂದ  ಬೀದಿನಾಯಿಗಳ ಹಾವಳಿ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Key words: mysore-street dog- attacks-boy