ಅರಮನೆ ಮಂಡಳಿ ವತಿಯಿಂದ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಜಯಂತಿ ಆಚರಣೆ…

Promotion

ಮೈಸೂರು,ಫೆ,20,2020(www.justkannada.in): ಇಂದು ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್  ಜಯಂತಿ ಹಿನ್ನಲೆ, ಅರಮನೆ ಆಡಳಿತ ಮಂಡಳಿ ವತಿಯಿಂದ ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಅವರ 67ನೇ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

ಅರಮನೆ ಆಡಳಿತ ಮಂಡಳಿ ಕಚೇರಿಯಲ್ಲಿ  ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್  ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ರವರದ್ದು ವರ್ಣರಂಜಿತ ಜೀವನ. ನಮ್ಮ ಜೊತೆ ಅವರ ಉತ್ತಮ ಒಡನಾಟ ಇತ್ತು. ಅವರ ಕಾಲವಾದ ದಿನ, ಹುಟ್ಟಿದ ದಿನವನ್ನು ನಮ್ಮ ಕಚೇರಿಯಲ್ಲಿ ಪ್ರತಿ ವರ್ಷ ಅಚರಣೆ ಮಾಡುತ್ತೇವೆ ಎಂದು ಹೇಳಿದರು.

Key words: mysore-SrikantaDatta Narasimharaja Wodeyar -Jayanti -Celebration – Palace Board