ಮಕ್ಕಳೇ ಹೇಗಿದ್ದೀರಿ?, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪತ್ರ ಬರೆದ ಮೈಸೂರು ಸೌತ್ ಬಿಇಒ

kannada t-shirts

ಯೋಗಕ್ಷೇಮ, ಆತ್ಮಸ್ಥೈರ್ಯ ತುಂಬುವಂತಹ ಕೆಲಸ ಮಾಡಿದ ಶಿಕ್ಷಣಾಧಿಕಾರಿ
ಮೈಸೂರು:  ಮಕ್ಕಳೇ ಹೇಗಿದ್ದೀರಿ? ಮನೆಯಲ್ಲೇ ಇದ್ದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದೀರಿ ಎಂಬ ನಂಬಿಕೆ ಇದೆ. ಅದೇ ರೀತಿ ಮುಂದಿನ ತಿಂಗಳು ಜೂನ್ನಲ್ಲಿ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಜ್ಜಾಗಿದ್ದೀರಾ? ಮಾದರಿ ಪ್ರಶ್ನೆ ಪತ್ರಿಕೆ ಅಭ್ಯಾಸ ಮಾಡಿದ್ದೀರಾ?
ಲಾಕ್ಡೌನ್ ಹಾಗೂ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಕಳೆದ ಕೆಲ ತಿಂಗಳಿನಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಪರ್ಕ ಸ್ವಲ್ಪ ಮಟ್ಟಿಗೆ ಕಡಿತಗೊಂಡಿತ್ತು. ಹಾಗಾಗಿ ಮಕ್ಕಳ ಮನಸ್ಸನ್ನು ಮತ್ತೆ ಪರೀಕ್ಷೆ ಕಡೆಗೆ ಕೊಂಡೊಯ್ಯುವ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಕೆಲಸಕ್ಕೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಾಮಾರಾಧ್ಯ ಮುಂದಾಗಿದ್ದಾರೆ. ತಮ್ಮ ಕ್ಷೇತ್ರದ ಪ್ರತಿಯೊಬ್ಬ ವಿದ್ಯಾಥರ್ಿಗೂ ಪತ್ರ ಬರೆದು ಯೋಗಕ್ಷೇಮ ವಿಚಾರಿಸುತ್ತಿದ್ದು, ಪರೀಕ್ಷೆಗೆ ಹೇಗೆಲ್ಲ ತಯಾರಿ ನಡೆಸಬೇಕೆಂದು “ಪ್ರೇರಣಾ ನುಡಿ”ಗಳನ್ನಾಡಿದ್ದಾರೆ. ಆ ಮೂಲಕ ವಿನೂತನ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದಾರೆ.

“ತಾವೆಲ್ಲರೂ ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಯ ನಿರೀಕ್ಷೆಯಲ್ಲಿರುವಿರಿ. ಬೇರೆಲ್ಲಾ ವರ್ಷಗಳಿಗಿಂತ ಈ ವರ್ಷ ನಿಮಗೆ ಹಾಗೂ ಶಿಕ್ಷಣ ಇಲಾಖೆಗೆ ಅನೇಕ ಸವಾಲುಗಳನ್ನು ತಂದೊಡ್ಡಿದೆ. ಅದನ್ನು ಹೇಗೆ ಮೀರುತ್ತೇವೆ ಎಂಬುದರ ಮೇಲೆ ನಮ್ಮ ಯಶಸ್ಸು ಅಡಗಿದೆ.

ಎಸ್ಎಸ್ಎಲ್ಸಿ ಪರೀಕ್ಷೆಯು ನಿಮ್ಮ ಜೀವನದಲ್ಲಿ ಒಂದು ಮಹತ್ವದ ಘಟ್ಟ. ಪರೀಕ್ಷೆಯನ್ನು ಹಬ್ಬವಾಗಿ ಆಚರಿಸೋಣ. ಯಶಸ್ಸು ಪಡೆಯೋಣ. ಇದಕ್ಕಾಗಿ ನಿಮಗೆ ಒಂದಿಷ್ಟು ಸಲಹೆಗಳನ್ನು ನೀಡಲು ಪತ್ರ ಬರೆದಿರುವೆ,” ಎಂದು ಹುರಿದುಂಬಿಸಿದ್ದಾರೆ.
*
ಮೊದಲು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ಯಾವುದೇ ಸಂದರ್ಭದಲ್ಲೂ ಉದಾಸೀನ ಮಾಡದೇ ಸೋಂಕಿನಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನು ತಪ್ಪದೇ ಅನುಸರಿಸಿ. ಖುಷಿಯಾಗಿ ತಂದೆ, ತಾಯಿ, ಕುಟುಂಬದವರೊಡನೆ ಬೆರೆಯಿರಿ.
*
ಮನೆಯಲ್ಲೇ ತಯಾರಿಸಿದ ಬಿಸಿಯಾದ ಆಹಾರ ಸೇವಿಸಿ, ಸಾಧ್ಯವಾದ್ಟು ಬಿಸಿ ನೀರು ಕುಡಿಯಿರಿ, ದಿನಕ್ಕೆ 7 ತಾಸುಗಳಷ್ಟು ನಿದ್ದೆ ಮಾಡಿ.
*
ಪರೀಕ್ಷೆ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ ಎಂದು ದೃಢವಾಗಿ ನಂಬಿ. ಖುಷಿಯಾಗಿ ಸ್ವೀಕರಿಸಿ, ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ.
*
ಅಧ್ಯಯನ ಮಾಡುವುದಕ್ಕೆ ಒಂದು ಕಲಿಕಾ ವೇಳಾಪಟ್ಟಿ ತಯಾರಿಸಿಕೊಳ್ಳಿ (ಈಗಾಗಲೇ ನಿಮ್ಮ ಶಾಲೆಯಲ್ಲಿ ನೀಡಿರಬಹುದು).
*
ಎಲ್ಲಾ ವಿಷಯಗಳಿಗೂ ಗಮನ ನೀಡಿ. ನಿಮಗೆ ಕಷ್ಟವೆನಿಸುವ ವಿಷಯಗಳಿಗೆ ಹೆಚ್ಚು ಒತ್ತು ನೀಡಿ.
*
ಬರೆದು ಕಲಿಯುವುದು ಹೆಚ್ಚು ಪ್ರಯೋಜನಕಾರಿ, ಓದಿದುದನ್ನು ಬರೆದು ದೃಢಪಡಿಸಿಕೊಳ್ಳಿ.
*
ವಿರಾಮದ ಸಮಯದಲ್ಲಿ ಓಳಾಂಗಣ ಆಟಗಳನ್ನು ಆಡಿ.
*
ಕಷ್ಟವೆನಿಸುವ ಅಂಶಗಳನ್ನು ನಿಮ್ಮ ಶಿಕ್ಷಕರೊಡನೆ ಚರ್ಚಿಸಿ
*
ಬೆಳಗಿನ ಸಮಯ ಅಧ್ಯಯನಕ್ಕೆ ಪ್ರಶಸ್ತವಾದುದು. ಹಾಗಾಗಿ ಮುಂಜಾನೆ 5ಕ್ಕೆ ಎದ್ದು ಅಧ್ಯಯನ ಪ್ರಾರಂಭಿಸಿ.
* ಎಸ್ಎಸ್ಎಲ್ಸಿ ಬೋಡರ್್ನ ಎರಡು ಪ್ರಶ್ನೆ ಪತ್ರಿಕೆಗಳು, ಜಿಲ್ಲಾ ಹಂತದ ಮೂರು ಪತ್ರಿಕೆಗಳು ಹಾಗೂ ತಾಲೂಕಿನ “ಪ್ರೇರಣಾ’ಪತ್ರಿಕೆಗಳಿವೆ. ಅಲ್ಲದೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಯಿರಿ.
* ನಿಮ್ಮ ಉತ್ತರ ಸ್ಪುಟವಾಗಿ ಸ್ಪಷ್ಟವಾಗಿರಬೇಕು, ಇದನ್ನು ಅಭ್ಯಾಸ ಮಾಡಿ.
ನಿಮ್ಮ ಮುಂಬರುವ ಪರೀಕ್ಷೆಯ ಯಶಸ್ಸಿಗಾಗಿ ಹಾಗೂ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳು.

ನನ್ನ ಕ್ಷೇತ್ರದಲ್ಲಿ ಸರಕಾರಿ ಶಾಲೆ 9, ಸರಕಾರದಿಂದ ಮಾನ್ಯತೆ ಪಡೆದ ಅನುದಾನಿತ ಶಿಕ್ಷಣ ಸಂಸ್ಥೆ 26, ಅನುದಾನರಹಿತ 48 ಸೇರಿದಂತೆ ಒಟ್ಟು 83 ಶಾಲೆಗಳಿದ್ದು, 4615 ವಿದ್ಯಾಥರ್ಿಗಳಿದ್ದಾರೆ. ಇಷ್ಟೂ ಮಕ್ಕಳಿಗೆ ಪತ್ರ ಬರೆದು ಆತ್ಮಸ್ಥೈರ್ಯ ತುಂಬುವಂತಹ ಕೆಲಸ ಮಾಡಲಾಗುತ್ತಿದೆ. ಶಿಕ್ಷಕರು, ಮುಖ್ಯ ಶಿಕ್ಷಕರು, ವಾಟ್ಸ್ಆ್ಯಪ್ ಮತ್ತು ವಚರ್ುಯಲ್ ಮೀಡಿಯಾಗಳ ಮೂಲಕ ಈ ಪತ್ರ ತಲುಪಿಸಲಾಗುತ್ತಿದೆ.
-ಆರ್.ರಾಮಾರಾಧ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ದಕ್ಷಿಣ ವಲಯ, ಮೈಸೂರು

  • ಕೃಪೆ: ಎಸ್.ಕೆ.ಚಂದ್ರಶೇಖರ್, ವಿಜಯ ಕರ್ನಾಟಕ
website developers in mysore