ಕೊಚ್ಚೆ, ಕೊಳಕಿನ ಬಗ್ಗೆ ಮಾತನಾಡುವುದು ಬೇಡ: ಸಚಿವ ಸೋಮಶೇಖರ್ ಮೈಸೂರಲ್ಲಿ ಹೇಳಿದ್ದು ಯಾರಿಗೆ ?

 

ಮೈಸೂರು, ಜೂ.05, 2020 : (www.justkannada.in news ) ಇಂದು ಪರಿಸರ ದಿನ ಸ್ವಚ್ಚತೆ ಬಗ್ಗೆ ಮಾತನಾಡಿ. ಯಾರೋ ಕೊಚ್ಚೆ, ಕೊಳಕಿನ ಬಗ್ಗೆ ಮಾತನಾಡುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ವ್ಯಂಗ್ಯವಾಗಿ ಉತ್ತರಿಸಿದರು.

ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಮೈಸೂರು ವಿವಿ ತೋಟಗಾರಿಕಾ ವಿಭಾಗದ ವತಿಯಿಂದ ಮಾನಸಗಂಗೋತ್ರಿ ಆವರಣದಲ್ಲಿ ಇಂದು ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Mysore-somashekar-minister-sa.ra.mahesh-transfer

ಬಳಿಕ ಸ್ಥಳದಲ್ಲಿದ್ದ ಮಾಧ್ಯಮದವರು, ಜಿಲ್ಲೆಗೆ ಇಬ್ಬರು ಉಸ್ತುವಾರಿ ಸಚಿವರು. ಒಬ್ಬರು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂಬ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪದ ಬಗ್ಗೆ ಪ್ರಶ್ನಿಸಿದರು.

ಆಗ ಸಚಿವ ಸೋಮಶೇಖರ್, ಇಂದು ಪರಿಸರ ದಿನ ಸ್ವಚ್ಚತೆ ಬಗ್ಗೆ ಮಾತನಾಡಿ. ಯಾರೋ ಕೊಚ್ಚೆ , ಕೊಳಕಿನ ಬಗ್ಗೆ ಮಾತನಾಡುವುದು ಬೇಡ. ಇಂದು ನೆಗೆಟಿವ್ ವಿಚಾರಕ್ಕೆ ತೆಲೆ ಕೆಡಿಸಿಕೊಳ್ಳವುದಿಲ್ಲ. ಈ ಬಗ್ಗೆ ಸಂಪೂರ್ಣವಾಗಿ ಅಮೇಲೆ ಮಾತನಾಡುತ್ತೇನೆ. ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಗೆ ಟಾಂಗ್ ನೀಡಿದರು.

Mysore-somashekar-minister-sa.ra.mahesh-transfer

oooo

key words : Mysore-somashekar-minister-sa.ra.mahesh-transfer