ದೇಶ ಒಂದುಗೂಡಲು ಮೊದಲು ಸಹಿ ಮಾಡಿದ್ದೆ  ನಮ್ಮ ಮೈಸೂರಿನ ರಾಜರು- ಸ್ಮರಿಸಿದ ಶಾಸಕ ಎಸ್.ಎ ರಾಮದಾಸ್

Promotion

ಮೈಸೂರು,ಜನವರಿ,26,2021(www.justkannada.in): ದೇಶದಲ್ಲಿ 72 ನೇ ಗಣರಾಜ್ಯೋತ್ಸವ ಸಂಭ್ರಮ. ಈ ದಿನ ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೊತೆಗೆ ಸರ್ದಾರ್ ಪಟೇಲರನ್ನು ನೆನೆಯಬೇಕು. ದೇಶವನ್ನು ಒಟ್ಟು ಮಾಡುವಲ್ಲಿ ಸರ್ದಾರ್ ಪಟೇಲರ ಪಾತ್ರ ಬಹಳ ಮಹತ್ವಪೂರ್ಣವಾದದ್ದು. ದೇಶ ಒಂದುಗೂಡಲು ಮೊದಲು ಸಹಿ ಮಾಡಿದ್ದೆ  ನಮ್ಮ ಮೈಸೂರಿನ ರಾಜರು ಎಂದು ಶಾಸಕ ಎಸ್.ಎ ರಾಮದಾಸ್ ಸ್ಮರಿಸಿದರು.jk

ಇಂದು ವಿದ್ಯಾರಣ್ಯಪುರಂ ನ ಗೃಹ ಕಚೇರಿಯಲ್ಲಿ  72 ನೇ ಗಣರಾಜ್ಯೋತ್ಸವದ ಪ್ರಯುಕ್ತ ಶಾಸಕರಾದ ಎಸ್.ಎ. ರಾಮದಾಸ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಗಣರಾಜ್ಯ ದಿನವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಎಸ್.ಎ. ರಾಮದಾಸ್, ಪ್ರಧಾನಿಯಿಂದ ಹಿಡಿದು ಗ್ರಾಮಪಂಚಾಯತ್ ವರೆಗೂ ನಾವು ಗಣರಾಜ್ಯದಿನವನ್ನು ಆಚರಿಸುತ್ತೇವೆ. ಈ ದಿನ ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೊತೆಗೆ ಸರ್ದಾರ್ ಪಟೇಲರನ್ನು ನೆನೆಯಬೇಕು. ದೇಶವನ್ನು ಒಟ್ಟು ಮಾಡುವಲ್ಲಿ ಸರ್ದಾರ್ ಪಟೇಲರ ಪಾತ್ರ ಬಹಳ ಮಹತ್ವಪೂರ್ಣವಾದದ್ದು. ಮೈಸೂರಿನವರಾಗಿ ನಮಗೆ ಹೆಮ್ಮೆಯ ವಿಷಯ, ಏಕೆಂದರೆ ರಾಜ್ಯ ದೇಶದಲ್ಲಿ ಒಂದುಗೂಡುವಿಕೆ ಆಗುವುದರಲ್ಲಿ ಮೊದಲು ಸಹಿ ಮಾಡಿದ್ದೇ ಮೈಸೂರಿನ ರಾಜರು. ಅಂಬೇಡ್ಕರ್ ಜೊತೆಗೆ ಸಂವಿಧಾನ ರಚನೆಯಲ್ಲಿ ಮೈಸೂರಿನ ಮಾಧವರಾವ್ ಅವರ ಪಾತ್ರವೋ ದೊಡ್ಡದಿದೆ ಎಂದು ಶ್ಲಾಘಿಸಿದರು.

ರಷ್ಯನ್ ಒಕ್ಕೂಟ, USSR ಎಲ್ಲ ಯಾವ ರೀತಿ ಛಿದ್ರವಾಗಿದೆ ಎಂದು ನಾವು ಕಾಣುತ್ತಿದ್ದೇವೆ. ವಿಶ್ವದ ದೊಡ್ಡಣ್ಣ ಎಂದು ಹೇಳಿಕೊಳ್ಳುವ ಅಮೆರಿಕಾದ ಸ್ಥಿತಿ ನಾವು ಗಮನಿಸಿದ್ದೇವೆ, ಹೇಗೆ ಚುನಾವಣಾ ಸಂದರ್ಭದಲ್ಲಿ ಕಿತ್ತಾಟ ನಡೆಸಿದರೆಂದು ಕಾಣುತ್ತಿದ್ದೇವೆ. ಇಷ್ಟು ಚೆನ್ನಾಗಿ ಭಾರತದಲ್ಲಿ ಚುನಾವಣೆಗಳು ನಡೆಯುತ್ತವೆ ಎಂದರೆ ಅದಕ್ಕೆ ನಮ್ಮ ಅದ್ಬುತವಾದ ಸಂವಿಧಾನವೇ ಕಾರಣ ಎಂದು ಗುಣಗಾನ ಮಾಡಿದರು.

ನೆಹರೂ ಪ್ರಧಾನಿಯಾಗಿದ್ದು ಈ ದೇಶದ ದುರ್ದೈವ ಎಂದರೆ ತಪ್ಪಾಗಲಾರದೇನೋ, ಪ್ರಧಾನಿಯಾಗಿದ್ದರೂ ಸಹ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲಿಲ್ಲ ಎಂಬುದು ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಶಾಸಕ ಎಸ್.ಎ ರಾಮದಾಸ್, ಗಣರಾಜ್ಯದಿನದ ದಿನ ನಾವೆಲ್ಲರೂ ಸೇರಿ ಒಂದು ಕೆಲಸವನ್ನು ಮಾಡುವ ಸಂಕಲ್ಪ ಮಾಡಬೇಕು , ದಿನ ರಾತ್ರಿ ಮಲಗುವ ಮೊದಲು ನಾವು ಎಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ ಅದರಿಂದ ದೇಶಕ್ಕೆ ಒಳ್ಳೆಯದಾಗುತ್ತದೆಯೇ ಎಂದು ನಮ್ಮ ಆತ್ಮಸಾಕ್ಷಿಯನ್ನು ಕೇಳಿ ನಡೆಯಬೇಕು. ನಮಗೆ ಈ ಭೂಮಿ ಋಣ, ದೇಶದ ಋಣ ನಮ್ಮ ಮೇಲಿದೆ ಎಂದು ತಿಳಿಸಿದರು.mysore-signed-country-72nd-republic-day-mla-sa-ramadas

ಅಧ್ಯಕ್ಷರಾದ ಎಂ.ವಡಿವೇಲು ಪ್ರಧಾನ ಕಾರ್ಯದರ್ಶಿ ಓಂಶ್ರೀನಿವಾಸ್, ಉಪಾಧ್ಯಕ್ಷರಾದ ಎಂ.ಆರ್.ಬಾಲಕೃಷ್ಣ,  ಸಂತೋಷ್ ಶಂಭು,ರವಿ.ಜೆ, ಕಾರ್ಯದರ್ಶಿ ಪ್ರಸಾದ್ ಬಾಬು,  ಆಶ್ರಯ ಸಮಿತಿಯ ಹೇಮಂತ್ ಕುಮಾರ್ , ವಿಜಯ್ ನಾಯಕ, ಬೂತ್ ಅಧ್ಯಕ್ಷರಾದ ನವೀನ್, ಕಾರ್ಯಾಲಯ ಕಾರ್ಯದರ್ಶಿ ಆದರ್ಶ್  ಉಪಸ್ಥಿತರಿದ್ದರು.

Key words: Mysore – signed – country-72nd Republic Day-MLA SA Ramadas.