ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ: ಬಿಜೆಪಿ ಅಪರೇಷನ್ ಕಮಲ ವಿಚಾರ ಕುರಿತ ಜಿಟಿಡಿ ಹೇಳಿಕೆಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ…

Promotion

ಬೆಂಗಳೂರು, ಜು,3,2019(www.justkannada.in): ಜಿಂದಾಲ್ ವಿಚಾರವಾಗಿ ಶಾಸಕ ಸ್ಥಾನಕ್ಕೆ  ಆನಂದ್ ಸಿಂಗ್ ಮಾತ್ರವೇ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ  ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ,  ಆನಂದ್ ಸಿಂಗ್ ಸಚಿವ ಸ್ಥಾನದ ವಿಚಾರವಾಗಿ ರಾಜೀನಾಮೆ ನೀಡಿಲ್ಲ. ರಾಜೀನಾಮೆ ಹಿಂದೆ ಬೇರೆ ಕಾರಣವಿದೆ. ಜಿಂದಾಲ್ ವಿಚಾರವಾಗಿ ಅವರು ರಾಜೀನಾಮೆ ನೀಡಿದ್ದಾರೆ. ಆನಂದ್ ಸಿಂಗ್ ಒಬ್ಬರೇ ರಾಜೀನಾಮೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ. ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಆನಂದ್ ಸಿಂಗ್ ಸಂಪರ್ಕಕ್ಕೆಸಿಕ್ಕರೆ ಮಾತನಾಡುತ್ತೇನೆ ಎಂದರು.

ಬಿಜೆಪಿ ಅಪರೇಷನ್ ಕಮಲ ಬಗ್ಗೆ ಹೇಳಿಕೆ ವಿಚಾರ: ಸಚಿವ ಜಿಟಿ ದೇವೇಗೌಡರಿಗೆ ಟಾಂಗ್..

ಬಿಜೆಪಿ ನಾಯಕರು ಅಪರೇಷನ್ ಕಮಲ  ಮಾಡುತ್ತಿಲ್ಲ ಎಂದು ಹೇಳಿದ್ದ ಸಚಿವ ಜಿ.ಟಿ ದೇವೇಗೌಡರಿಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಅವರಿಗೆ ಆ ರೀತಿ ಮಾಹಿತಿ ಇರಬಹುದು. ಆದರೆ ಬಿಜೆಪಿ ಅಪರೇಷನ್ ಕಮಲ ಮಾಡುತ್ತಿದೆ. ಅಮಿತ್ ಶಾ ಅವರೇ ಅಪರೇಷನ್ ಕಮಲ ಮಾಡುತ್ತಿದ್ದು, ಇದರಲ್ಲಿ ಪ್ರಧಾನಿ ಮೋದಿ ಸಹ ಭಾಗಿಯಾಗಿದ್ದಾರೆ ಎಂದು ಟಾಂಗ್ ಕೊಟ್ಟರು.

ನಾವು ಯಾವುದೇ ರಿವರ್ಸ್ ಅಪರೇಷನ್ ಗೆ ಕೈ ಹಾಕುವುದಿಲ್ಲ. ಅದರ ಬಗ್ಗೆ ನಮಗೆ ಆಸಕ್ತಿ ಇಲ್ಲ. ಪ್ರಜಾಪ್ರಭುತ್ವದಲ್ಲಿ ಅಪರೇಷನ್ ಕಮಲ ಅಪರೇಷನ್ ಹಸ್ತ ತಪ್ಪು ಎಂದರು.

Key words: mysore-Siddaramaiah –gt devegowda- statement – Operation kamala