ಮೈಸೂರಿನಲ್ಲಿ ಶೂಟೌಟ್ ಕೇಸ್ : ಮೃತ ಸುಖ್ವಿಂದರ್ ಸಿಂಗ್ ಮರಣೋತ್ತರ ಪರೀಕ್ಷೆ ಮುಕ್ತಾಯ…

kannada t-shirts

ಮೈಸೂರು,ಮೇ,18,2019(www.justkannada.in):  ಮೈಸೂರಿನಲ್ಲಿ ಪೊಲೀಸರಿಂದ ಶೂಟೌಟ್  ಬಲಿಯಾದ ಮೃತ ಸುಖ್ವಿಂದರ್  ಸಿಂಗ್ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ.

ರದ್ಧಾದ ಹಳೆಯ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದವರ ಮೇಲೆ ಮೈಸೂರಿನ ವಿಜಯನಗರ ಠಾಣಾ ಪೊಲೀಸರು ಶೂಟೌಟ್ ನಡೆಸಿದ್ದರು. ಈ ವೇಳೆ ಆರೋಪಿ ಸುಖ್ವಿಂದರ್ ಸಿಂಗ್ ಸಾವನ್ನಪ್ಪಿದ್ದು ಇಂದು ಸುಖ್ವಿಂದರ್ ಸಿಂಗ್ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ.

ಮೈಸೂರಿನ ಹೆಚ್ಚುವರಿ ೫ನೇ ಶೀಘ್ರಗತಿ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶ ಭೀಮಪ್ಪ ಎಸ್.ಪೌಲ್ , ಹೆಚ್ಚುವರಿ ತಹಸೀಲ್ದಾರ್ ಚಂದ್ರಕಾಂತ್, ಮೂವರು ಸಂಬಂಧಿಕರು ಮತ್ತು ಮೈಸೂರು ಪೊಲೀಸರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮೈಸೂರು ವೈದ್ಯಕೀಯ ಕಾಲೇಜಿನ ವೈದ್ಯ ಡಾ.ಆನಂದ ರಾಯ್ ಮನಿ ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೃತದೇಹವನ್ನ ಪಂಜಾಬ್ ಗೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಇನ್ನು ಪ್ರಕರಣ ಕುರಿತು ಮೃತ ಸುಖ್ವಿಂದರ್ ಸಂಬಂಧಿಕರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

ನ್ಯಾಯಾಧೀಶರ ಮುಂದೆ ಸುಖ್ವಿಂದರ್ ರಕ್ತ ಸಂಬಂಧಿಯಾದ ಪಂಜಾಬ್ ರಾಜ್ಯದ ಬುರಾಗುಜ್ಜರ್ ಗ್ರಾಮದ ಗುರುಮೀತ್ ಸಿಂಗ್(53), ಸಾಕ್ಷಿ ಹೇಳಿಕೆದಾರರಾದ ಗುರಾಗುಜ್ಜರ್ ನಿವಾಸಿ ಅರ್ವಿಂದರ್ ಪಾಲ್ ಸಿಂಗ್(53), ಗೋಬಿಂದ್‌ಗರ್ ನಗರದ ಹರ್‌ಜಿಂದರ್ ಸಿಂಗ್(48) ಅವರ ಹೇಳಿಕೆಯನ್ನ  ದಾಖಲು ಮಾಡಲಾಗಿದೆ.

Key words: mysore Shootout case. Dead post mortem ends…

#mysore #crimenews #shootout #post mortem

website developers in mysore