ಖಾಯಂ ಮಾಡುವಂತೆ ಆಗ್ರಹಿಸಿ ಒಳಚರಂಡಿ ಕಾರ್ಮಿಕರ ಪ್ರತಿಭಟನೆ: ಸ್ಥಳಕ್ಕೆ ಶಾಸಕ ಎಲ್ ನಾಗೇಂದ್ರ ಭೇಟಿ…

Promotion

ಮೈಸೂರು,ಜೂ,25,2020(www.justkannada.in):  ಒಳಚರಂಡಿ ಕಾರ್ಮಿಕರನ್ನ ಖಾಯಂ ಮಾಡುವಂತೆ ಒತ್ತಾಯಿಸಿ ಒಳಚರಂಡಿ ಕಾರ್ಮಿಕರ ಪ್ರತಿಭಟನೆ  ನಡೆಸಿ ಆಕ್ರೋಶ ಹೊರ ಹಾಕಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿ‌ ಮುಂದೆ ಪ್ರತಿಭಟನೆ ನಡೆಸಿದ ಕಾರ್ಮಿಕರು, 200ಕ್ಕೂ ಹೆಚ್ಚು ಮಂದಿ ಮೈಸೂರು ಮಹಾನಗರ ಪಾಲಿಕೆಯಲ್ಲಿ‌ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಸಾಕಷ್ಟು ತೊಂದರೆ ಮತ್ತು ವಂಚನೆ ಆಗುತ್ತಿದೆ. ಹಲವಾರು ವರ್ಷಗಳಿಂದ ನಾವು ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಮಾತ್ರ ನಮಗೆ ಯಾವುದೇ ರೀತಿಯ ಸೌಲಭ್ಯ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.mysore-sewerage-workers-protest-permanent-mla-nagendra-visits

ಪ್ರತಿಭಟನೆ ಸ್ಥಳಕ್ಕೆ ಶಾಸಕ ಎಲ್ ನಾಗೇಂದ್ರ ಭೇಟಿ ನೀಡಿ ಕಾರ್ಮಿಕರ ಪ್ರತಿಭಟನೆಯನ್ನ ಕೈಬೀಡುವಂತೆ ಮನವಿ ಮಾಡಿದರು. ನಗರಾಭಿವೃದ್ಧಿ ಇಲಾಖೆಯ ಸಚಿವರ ಜೊತೆ ಮಾತುಕತೆ ನಡೆಸುತ್ತೇನೆ. ಎಲ್ಲರಿಗೂ ನ್ಯಾಯ ದೊರಕಿಸುವಂತೆ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿದರು.

Key words: mysore-Sewerage -workers- protest – permanent-MLA-Nagendra- visits