ಚಾನೆಲ್ಲುಗಳಿಗೆ ಗ್ರಹಣ ಹಿಡಿದಿರುವುದಂತೂ ಗ್ಯಾರಂಟಿ. ಇದಕ್ಕೆ ಯಾವ ಪರಿಹಾರ, ಪೂಜೆಗಳು ಬೇಕೋ ಗೊತ್ತಾಗುತ್ತಿಲ್ಲ.

kannada t-shirts

 

ಮೈಸೂರು, ಜೂ.16, 2020 : (www.justkannada.in news ) : ಕನ್ನಡ ನ್ಯೂಸ್ ಚಾನಲ್ ಗಳ ನ್ಯೂಸೆನ್ಸ್ ಬಗ್ಗೆ ಕನ್ನಡಿಗರು ಚಾಟಿ ಬೀಸುತ್ತಲೇ ಇರುತ್ತಾರೆ. ಆದರೂ ಈ ಸುದ್ದಿ ವಾಹಿನಿಗಳು ಮಾತ್ರ ಬುದ್ದಿ ಕಲಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ, ಕರೋನಾ ಗೂ ಗ್ರಹಣಕ್ಕೂ ಸಂಬಂಧ ಕಲ್ಪಿಸಿ ಕಪೋಲಾಕಲ್ಪಿತ ವರದಿ ಪ್ರಸಾರ ಮಾಡಿದ ವಾಹಿನಿಗೆ ಕನ್ನಡಿಗ ವಿಜ್ಞಾನಿಯೊಬ್ಬರು ಸರಿಯಾಗಿಯೇ ಲೆಫ್ ರೈಟ್ ತೆಗೆದುಕೊಂಡಿದ್ದಾರೆ.

ಮೈಸೂರಿನ ಸಿಎಫ್ ಟಿಆರ್ ಐನ ವಿಜ್ಞಾನಿ ಕೊಳ್ಳೇಗಾಲ ಶರ್ಮ ತಮ್ಮ ಫೇಸ್ ಬುಕ್ ಪುಟದಲ್ಲಿ ಸುದ್ದಿವಾಹಿನಿಯ ಅದ್ವಾನದ ಬಗ್ಗೆ ಟಾಂಗ್ ನೀಡಿದ್ದಾರೆ. ಅವರ ಮುಖಪುಟದಿಂದ ನೇರವಾಗಿ ಜಸ್ಟ್ ಕನ್ನಡ. ಡಾಟ್ ಇನ್ ಓದುಗರಿಗೆ ಇಲ್ಲಿ ನೀಡಲಾಗಿದೆ….

ಕೊಳ್ಳೇಗಾಲ ಶರ್ಮ, ವಿಜ್ಞಾನಿ.

 

ಪ್ರತಿ ಬಾರಿ ಗ್ರಹಣ ಬಂದಾಗಲೂ ಜ್ಯೋತಿಷಿಗಳು ಎಚ್ಚರಿಸುತ್ತಲೇ ಇರುತ್ತಾರೆ. ಆದರೆ ಕೆಲವರು ಇದನ್ನು ಗಮನಿಸುವುದೇ ಇಲ್ಲ. ಗ್ರಹಣ ಬಂದ ಕೂಡಲೇ ಏನೂ ವಿಪತ್ತು ಆಗಲೇ ಇಲ್ಲ ಎಂದು ಹೇಳುತ್ತಲೇ ಇರುತ್ತಾರೆ. ಗ್ರಹಣದ ಅಪಾಯದ ಬಗ್ಗೆ ನಂಬುವುದೇ ಇಲ್ಲ. ಆದರೆ ಗ್ರಹಣ ಬಂದ ತಕ್ಷಣ ಅಪಾಯ ಬರುವುದಿಲ್ಲ. ಅದು ನಿಧಾನವಾಗಿಯೂ ಆಗಬಹುದು. ಕಳೆದ ವರ್ಷ ಗ್ರಹಣ ಬಂದದ್ದರ ಕಾರಣ ಆಗಬಾರದ್ದೆಲ್ಲ ಆಗಿ ಹೋಯಿತು. ಎಷ್ಟೋ ಮಹಾನ್‌ ವ್ಯಕ್ತಿಗಳ ಸಾವಾಯಿತು.”

ವಾವ್.‌ ಇದು ದಿಗ್ವಿಜಯ ಟೀವಿ ಚಾನೆಲ್ಲಿನಲ್ಲಿ ಇಂದು ಪ್ರಸಾರವಾದ ಸುದ್ದಿ. ಈಗ ಸಾಂಕ್ರಾಮಿಕವಾಗಿರುವ ಕೊರೊನಾಗೂ, ಸೂರ್ಯನ ಹೊರವಲಯದಲ್ಲಿ ಬೆಳಗುವ ಕೊರೊನಾಗೂ ಸಂಬಂಧ ಕಲ್ಪಿಸಿಬಿಟ್ಟಿದ್ದರ ಜೊತೆಗೆ, ಗ್ರಹಣ ಆಗದಿದ್ದರೆ ಯಾವ ಮಹಾನ್‌ ವ್ಯಕ್ತಿಗಳೂ ಸಾಯುವುದಿಲ್ಲ ಎನ್ನುವ ಸೂಚ್ಯಾರ್ಥ ಬೇರೆ. ಆ ಮಟ್ಟಿಗೆ ಪ್ರತಿದಿನವೂ ಸಾಯುವ ೨೦೦೦೦ ಭಾರತೀಯರು ಮಹಾನ್‌ ವ್ಯಕ್ತಿಗಳಲ್ಲ ಬಿಡಿ.
ಅಂದ ಹಾಗೆ. ಈ ತಿಂಗಳು ಚಂದ್ರಗ್ರಹಣ ಹಾಗೂ ಸೂರ್ಯಗ್ರಹಣ ಎರಡೂ ಒಟ್ಟಿಗೆ ಬಂದಿದ್ದರಿಂದ ಭೂಕಂಪವಾಯಿತಂತೆ. ನನ್ನದು ಒಂದೇ ಪ್ರಶ್ನೆ. ಹಲವು ವರ್ಷಗಳ ಹಿಂದೆಯೇ ವಿಜ್ಞಾನಿಗಳು ಕೊರೊನಾದಂತಹ ಒಂದು ವೈರಸ್ಸು ಕಾಡಬಹುದು ಎಂದು ಊಹಿಸಿದ್ದರು. ಆಗ ಯಾವ ಗ್ರಹಣವೂ ಇರಲಿಲ್ಲ. ಇದೇ ರೀತಿಯಲ್ಲಿ ಗ್ರಹಣಕ್ಕೂ ಮುಂಚೆಯೇ ಇಂತಹುದೇ ಒಂದು ದುರಂತ ಆಗುತ್ತದೆ ಎಂದು ಖಡಾಖಂಡಿತವಾಗಿ ಜ್ಯೋತಿಷಿಗಳಿಗೆ ಹೇಳಲು ಆಗುವುದಿಲ್ಲವೇಕೆಎ? ಅದು ಪ್ರವಾಹವೋ, ಭೂಕಂಪನವೋ, ಹೊಸ ಖಾಯಿಲೆಯೋ… ನಿರ್ದಿಷ್ಟವಾಗಿ ಹೇಳಬಹುದಲ್ಲ. ವಿಜ್ಞಾನ ಅದನ್ನು ಹೇಳದಿದ್ದರೂ, ಏನೂ ಆಗುವುದಿಲ್ಲ. ಆದರೆ ಅದು ಖಂಡಿತ ಆಕಸ್ಮಿಕ ಎಂದಂತು ಖಡಾಖಂಡಿತವಾಗಿ ಹೇಳುತ್ತದೆ. ಅಲ್ಲವೇ?

 mysore-scientist-eclips-solar-eclips-news-channel-madness-kollegala.sharma-cftri

ಈ ಬಾರಿಯ ಗ್ರಹಣದ ಕವರೇಜಿನಲ್ಲಿ ಹೊಸತೊಂದು ಡಿಸ್ಕ್ಲೇಮರ್.‌ ಗ್ರಹಣದ ಪ್ರಭಾವ ತಕ್ಷಣಕ್ಕೆ ಆಗುವುದಿಲ್ಲ. ಎಷ್ಟೋ ಜನ ಗ್ರಹಣವನ್ನು, ಗ್ರಹಣದ ಪ್ರಭಾವವನ್ನು ನಂಬುವುದಿಲ್ಲ. ಅದಕ್ಕೆ ಕಾರಣ ಗ್ರಹಣದ ಪ್ರಭಾವ ಈಗ ಆಗಲೇಬೇಕಿಲ್ಲ. ನಿಧಾನವಾಗಿ, ಸಣ್ಣ, ಸಣ್ಣದಾಗಿ ಆಗಬಹುದು!

ಗ್ರೇಟ್.‌ ಈಗ ಬಂದಿರುವ ಕೊರೊನಾ ಬಹುಶಃ ಸಾವಿರ ವರುಷದ ಹಿಂದೆ ಎಂದೋ ನಡೆದಿದ್ದ ಗ್ರಹಣದ್ದೂ ಇರಬಹುದು ಎಂದರೂ ಎಂದರೇ! ಪ್ರತಿಯೊಂದಕ್ಕೂ ಕಾರಣ ಇರಲೇ ಬೇಕಂತೆ! ಅಂದರೆ ಗ್ರಹಣವೆಂಬ ಕಾರಣಕ್ಕೆ ಇಂತದ್ದೇ ಕಾರ್ಯ ಎಂಬುದಿಲ್ಲ. ಏನು ಘಟಿಸಿದರೂ, ಅದು ಗ್ರಹಣದ್ದೇ ಕಾರ್ಯ! ವಾವ್.‌

 mysore-scientist-eclips-solar-eclips-news-channel-madness-kollegala.sharma-cftri

ಚಿತ್ರ ನೋಡಿ! ಕೊರೊನಾ ವಿರುದ್ಧ ಹೋರಾಡುತ್ತಾನಾ ಸೂರ್ಯ! ??? ಗ್ರಹಣಕ್ಕೂ ಸೂರ್ಯ ಕಾರಣವಲ್ಲ! ಆದರೂ ಹೀಗೆ!
ಇಂಗ್ಲೀಷು ಚಾನೆಲ್ಲುಗಳಲ್ಲಿ ಯಾಕೆ ಹೀಗೆ ಇಲ್ಲ? ಕನ್ನಡ ಹಾಗೂ ಇತರೆ ಭಾಷಾ ಮಾಧ್ಯಮಗಳಲ್ಲಿ ಮಾತ್ರ ಈ ಗ್ರಹಣದ ಕಾಟ ಹೆಚ್ಚು ಯಾಕೆ? ಭಾಷೆಗಳಿಗೆ ಗ್ರಹಣ ಹಿಡಿದಿದೆಯೋ ಅಥವಾ ಭಾಷಾಪ್ರೇಕ್ಷಕರಿಗೆ ಹಿಡಿದಿದೆಯೋ? ಅದು ಸರಿಯೋ, ತಪ್ಪೋ ಎಂದೂ ಕೂಡ ವಿವೇಚಿಸದೆಒಂದು ಚಾನೆಲ್ಲು ಹಿಡಿದ ಹಾದಿಯನ್ನೇ ಇತರೆ ಚಾನೆಲ್ಲುಗಳೂ ಹಿಡಿದು ನಡೆಯುತ್ತವಲ್ಲ ಏಕೆ?
ಚಾನೆಲ್ಲುಗಳಿಗೆ ಗ್ರಹಣ ಹಿಡಿದಿರುವುದಂತೂ ಗ್ಯಾರಂಟಿ. ಇದಕ್ಕೆ ಯಾವ ಪರಿಹಾರ, ಪೂಜೆಗಳು ಬೇಕೋ ಗೊತ್ತಾಗುತ್ತಿಲ್ಲ.

oooo

key words : Mysore-scientist-eclipse-solar-eclipse-news-channel-madness-kollegala.sharma-cftri

website developers in mysore