ದಿನನಿತ್ಯ ಕಾಡುಪ್ರಾಣಿಗಳ ಉಪಟಳ: ಭಯದಲ್ಲಿ ಗ್ರಾಮಸ್ಥರು…

kannada t-shirts

ಮೈಸೂರು,ಸೆಪ್ಟಂಬರ್,19,2020(www.justkannada.in): ಮೈಸೂರು ಜಿಲ್ಲೆಯ‌ ಸರಗೂರು ಸಮೀಪದ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ಜನರು ಪ್ರತಿದಿನ ಭಯದ ವಾತಾವರಣದಲ್ಲಿ  ದಿನ ಕಳೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ.jk-logo-justkannada-logo

ಸರಗೂರು ತಾಲ್ಲೂಕಿನ ಹಳೇಹೆಗ್ಗಡಿಲು ಹಾಗೂ ಸುತ್ತ ಮುತ್ತ ಚಿರತೆ ಹಾವಳಿ ಇದ್ದು, ರಾತ್ರಿ ‌ವೇಳೆ‌ ಗ್ರಾಮಕ್ಕೆ ನುಗ್ಗಿ  ಕುರಿ ,ಮೇಕೆ ರಕ್ತ ಹೀರಿ ಪರಾರಿಯಾಗುತ್ತಿದೆ.mysore-saragur-Daily - wild animals- villagers - fear.

ನಿನ್ನೆ ‌ರಾತ್ರಿ ಕೂಡ ಹಳೇಹೆಗ್ಗುಡಿಲು ಗ್ರಾಮದ ನಂಜಯ್ಯ ಎಂಬವರಿಗೆ ಸೇರಿದ ಮೇಕೆ‌ ಕೊಂದಿದೆ. ಪ್ರತಿದಿನ‌ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಿ ಜನರಲ್ಲಿನ ಭಯ ನಿರ್ಮೂಲನೆ ಮಾಡಬೇಕು ಎಂದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Key words: mysore-saragur-Daily – wild animals- villagers – fear.

website developers in mysore