ಬೆಂಗಳೂರಿನಲ್ಲಿ ಇಂದು ಸಿಎಂ ಬೊಮ್ಮಾಯಿ ಭೇಟಿ ಮಾಡಿ ‘ ಸೀಲ್ಡ್ ಕವರ್ ‘ ನೀಡಿದ ಬಗ್ಗೆ ಮೈಸೂರು ಶಾಸಕ ರಾಮದಾಸ್ ಹೇಳಿದಿಷ್ಟು..!

 

ಬೆಂಗಳೂರು, ಆ.14, 2021 : (www.justkannada.in news ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ, ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ.ರಾಮದಾಸ್‌ ಇಂದು ಭೇಟಿ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿನ್ನು ಸರಕಾರದ ಅಧಿಕೃತ ನಿವಾಸಕ್ಕೆ ಆಗಮಿಸಿರದ ಕಾರಣ, ಬೆಂಗಳೂರಿನ ಆರ್‌.ಟಿ. ನಗರದ ನಿವಾಸದಲ್ಲೇ ರಾಮದಾಸ್ ಭೇಟಿ ಮಾಡಿ ಚರರ್ಚಿಸಿದರು. ಬಳಿಕ ಸಿ ಎಂ ಬೊಮ್ಮಾಯಿ ಅವರಿಗೆ, ಶಾಸಕ ಎಸ್.ಎ.ರಾಮದಾಸ್ ಮುಚ್ಚಿದ ಲಕೋಟೆ ನೀಡಿದರು.

ಈ ಸಂಬಂಧ ‘ಜಸ್ಟ್ ಕನ್ನಡ ‘ ಜತೆಗೆ ಮಾತನಾಡಿದ ಎಸ್.ಎ.ರಾಮದಾಸ್ ಹೇಳಿದಿಷ್ಟು..

ಮುಖ್ಯಮಂತ್ರಿ ಬೊಮ್ಮಾಯಿ ಅವರು ಇತ್ತೀಚೆಗೆ ಮೈಸೂರಿಗೆ ಬಂದಿದ್ದಾಗ ನಾನು ಅವರನ್ನು ಭೇಟಿ ಮಾಡಿರಲಿಲ್ಲ. ಯಾಕೆ ಭೇಟಿ ಮಾಡಿಲ್ಲ ಎಂಬುದಕ್ಕೆ ಪತ್ರದ ಮೂಲಕ ಕಾರಣ ಕೊಡುತ್ತೇನೆ ಎಂದಿದ್ದೆ. ಅದರಂತೆ ಇವತ್ತು ಸಿಎಂ ಭೇಟಿ ಮಾಡಿ ಸೀಲ್ಡ್ ಕವರ್ ಕೊಟ್ಟಿದ್ದೇನೆ. ಸುಮಾರು 10 ನಿಮಿಷಗಳ ಕಾಲ ಸಿಎಂ ಜತೆಗೆ ಚರ್ಚಿಸಿದೆ. ಈ ವೇಳೆ ನಿಮ್ಮಂತ ಹಿರಿಯರು, ಅನುಭವಸ್ಥರು ಸಚಿವ ಸಂಪುಟದಲ್ಲಿ ಇದ್ದಿದ್ದರೆ ಸರಕಾರಕ್ಕೆ ಅನುಕೂಲವಾಗುತ್ತಿತ್ತು ಎಂದು ಸಿಎಂ ಅಭಿಪ್ರಾಯ ವ್ಯಕ್ತಪಡಿಸಿದರು. ಅವರನ್ನು ಭೇಟಿ ಮಾಡಲು ಇನ್ನು ಅನೇಕರು ಕಾಯುತ್ತಿದ್ದ ಕಾರಣ ನಾನೇ ಬೇಗೆ ಅಲ್ಲಿಂದ ನಿರ್ಗಮಿಸಿದೆ ಎಂದು ರಾಮದಾಸ್ ಹೇಳಿದರು.

ಈ ಸೀಲ್ಡ್ ಕವರನಲ್ಲಿ ಏನಿದೆ ಎಂಬ ಪ್ರಶ್ನೆಗೆ, ಮುಚ್ಚಿದ ಲಕೋಟೆಯಲ್ಲಿ ನನ್ನ ಕೆಲಸದ ಅನುಭವಗಳ ಪಟ್ಟಿ ಇದೆ. ರಾಜ್ಯ ಹಾಗೂ ಪಕ್ಷದ ಹಿತದೃಷ್ಟಿಯಿಂದ ಕೆಲವು ವಿಚಾರ ಉಲ್ಲೇಖಿಸಲಾಗಿದೆ. ಜತೆಗೆ 2023 ರ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯುವ ಸಲುವಾಗಿ ಮಾಡಬಹುದಾದ ಕಾರ್ಯತಂತ್ರಗಳೇನು ಎಂಬುದನ್ನು ತಿಳಿಸಲಾಗಿದೆ ಎಂದರು.

 

key words : mysore-s.a.ramadas-meet-cm-bommaiaha-bangalore-bjp