ಮೈಸೂರು ಡಿಸಿ ರೋಹಿಣಿ ವರ್ಗಾವಣೆಗೆ ರಾಜಕಾರಣಿಗಳ ‘ಭೂ ಮಾಫಿಯ’ ಒತ್ತಡ..! – ಆರ್.ಟಿ.ಐ ಕಾರ್ಯಕರ್ತ ಗಂಭೀರ ಅರೋಪ.

ಮೈಸೂರು, ಜೂ.05, 2021 : (www.justkannada.in news) : ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಸುದ್ದಿಗೋಷ್ಠಿ ನಡೆಸಿ ಶಾಸಕ ಸಾರಾ ಮಹೇಶ್ ವಿರುದ್ಧ, ಭೂ ಅಕ್ರಮ ಹಾಗೂ ಭೂ ಮಾಲೀಕರಿಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ ಗಂಭೀರ ಆರೋಪ ಮಾಡಿದ್ದಾರೆ.

ಸ್ವಾಧೀನಕ್ಕಿಂತ ಹೆಚ್ಚು ಭೂಮಿ ತೋರಿಸಿ ಸರ್ಕಾರ ಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪ. ಸರ್ವೇ ನಂಬರ್ 115 ಕೇರ್ಗಳ್ಳಿ ಗ್ರಾಮದಲ್ಲಿ ಅಕ್ರಮ ಭೂ ಕಬಳಿಕೆ. ಗಣಪತಿ ರೆಡ್ಡಿ ಎಂಬುವವರಿಂದ ಸಾರಾ ಮಹೇಶ್ ಭೂ ಕಬಳಿಕೆ. ಭೂಮಾಲೀಕರಿಗೆ ಶಾಸಕ ಸಾರಾ ಮಹೇಶ್ ಅವಾಚ್ಯ ಶಬ್ದ ಬಳಸಿದ್ದಾರೆ. ಭೂ ಅಕ್ರಮದ ಬಗ್ಗೆ ಅವರೇ ಮಾತನಾಡಿರುವ ಸಂಪೂರ್ಣ ಆಡಿಯೋ ಇದೆ. ನನ್ನದು ಒಂದೇ ಮುಖ ನೋಡಿದ್ದೀಯ ಇನ್ನೊಂದು ಮುಖ ತೋರಿಸ್ತಿನಿ ಎಂದು ಬೆದರಿಸಿದ್ದಾರೆ.

jk

500 ಎಕರೆ ಗಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ಆಡಿಯೋದಲ್ಲಿ ಮಾತನಾಡಿದ್ದಾರೆ. ಭೂ ಮಾಲೀಕ ನ್ಯಾಯಾಲಯ ಹಾಗೂ ಮಾಧ್ಯಮದ ಮುಂದೆ ಹೋಗ್ತೇನೆ ಎಂದಾಗ ನಾನು ಯಾವುದಕ್ಕೂ ಹೆದರಲ್ಲ ಎಂದಿದ್ದಾರೆ. ಜಿಲ್ಲಾಡಳಿತ ಹಾಗೂ ನ್ಯಾಯಾಲಯದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ವಿಚಾರವನ್ನು ನಾನು ಜಿಲ್ಲಾಧಿಕಾರಿ ಬಳಿ ದೂರು ನೀಡಿದ್ದೇನೆ. ಪ್ರಕರಣದ ಬಗ್ಗೆ ಡಿಸಿ ತನಿಖೆ ಕೈಗೊಂಡಿರುವುದನ್ನ ಗಮನಿಸಿ ಡಿಸಿ ವರ್ಗಾವಣೆ ಕುತಂತ್ರ ನಡೆಸಿದ್ದಾರೆ. ಮೈಸೂರು ಜಿಲ್ಲೆಗೆ ಹಾಗೂ ಹೆಣ್ಣಿಗೆ ಕಳಂಕ ತರುವ ರೀತಿ ವರ್ತಿಸಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು.

ಮೈಸೂರು ತಾಲೂಕು ಕೇರಗಳ್ಳಿ ಸರ್ವೇ ನಂ.115ರ ಭೂಮಿ ವಿಚಾರ ವಿವಾದದಿಂದ‌ ಕೂಡಿದೆ. ಭೌಗೋಳಿಕವಾಗಿ 129 ಎಕರೆ ಜಾಗವಿದೆ. ಆದರೆ 191 ಎಕರೆಗೆ ಆರ್.ಟಿ.ಸಿ. ಮಾಡಿಕೊಟ್ಟಿದ್ದಾರೆ. ಹೆಚ್ಚುವರಿಯಾಗಿ 61 ಎಕರೆಗೆ ಭೂಮಿ ನೀಡಲಾಗಿದೆ. ಆ ಜಾಗ ನನ್ನದು ಅಂತ ಶಾಸಕ ಸಾ.ರಾ.ಮಹೇಶ್ ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದ ಗಂಗರಾಜು, ಅದರ ಜತೆಗೆ 500 ಎಕರೆಗೆ ಜಾಗದಲ್ಲಿ ಲೇಔಟ್ ಮಾಡಿದ್ದೇನೆ ಅಂತ ಹೇಳಿದ್ದಾರೆ. ಆದರೆ ಅಷ್ಟು ಪ್ರಮಾಣದ ಆಸ್ತಿಯನ್ನು ಸಾ.ರಾ.ಮಹೇಶ್ ತಮ್ಮ ನಾಮಪತ್ರದ ಅಫಿಡೆವಿಟ್‌ನಲ್ಲಿ ತೋರಿಸಿಕೊಂಡಿಲ್ಲ. ನೀವು ದಾಖಲೆ ತೆಗೆದುಕೊಂಡು ಬನ್ನಿ ಅಂತ ಧಮ್ಕಿ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ದೂರಿದರು. ಈ ಬಗ್ಗೆ 5 ತಿಂಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದೇವೆ ಎಂದಿರುವ ಆರ್.ಟಿ.ಐ. ಕಾರ್ಯಕರ್ತ ಗಂಗರಾಜು.

Mysore -DC -Rohini Sindhuri- orders -cancellation -leave -one month-covid- Warriors

ಶಾಸಕ ಸಾ.ರಾ.ಮಹೇಶ್ ನನ್ನ ವಿರುದ್ಧ ಧಮ್ಕಿ ಹಾಕಿದ್ದಾರೆ. ಕೇರಗಳ್ಳಿಯ ಭೂಮಿ ಮಾಲೀಕರು ಎನ್ನಲಾದ ಗಣಪತಿ ರೆಡ್ಡಿ ಗಂಭೀರ ಆರೋಪ.
ನಾನೊಬ್ಬ ಸಾಮಾನ್ಯ ಮನುಷ್ಯ, ಸಾ.ರಾ.ಮಹೇಶ್ ಶಾಸಕರು. ಅವರಿಗೆ ಇರುವ ಜನ ಬೆಂಬಲ, ಪ್ರಭಾವ, ಅಧಿಕಾರ ದುರುಪಯೋಗ ಮಾಡಿಕೊಂಡು ದಬ್ಬಾಳಿಕೆ ಮಾಡಿದ್ದಾರೆ. ನಾನು ಪೊಲೀಸ್ ಠಾಣೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಜಾಗ ನನ್ನದು ಅಂತ ಕೋರ್ಟ್ ಕೂಡ ಆದೇಶ ಮಾಡಿದೆ. ಸಾ.ರಾ.ಮಹೇಶ್ ಅವರು ಸಿನಿಮೀಯ ರೀತಿಯಲ್ಲಿ ನಮ್ಮನ್ನು ಖಾಲಿ ಮಾಡಿಸಿದ್ದಾರೆ. ಸುಮಾರು 30 ಜನರು ಬಂದು ನಮ್ಮ ಸೆಕ್ಯುರಿಟಿ ಗಾರ್ಡ್‌ಗಳನ್ನು ಹೆದರಿಸಿ ಹೊರಗೆ ಕಳುಹಿಸಿದ್ದಾರೆ‌. ನಮ್ಮ ಜಾಗಕ್ಕೆ ಅದೇ ದಿನ ಬೇಲಿ ಹಾಕಿಕೊಂಡಿದ್ದಾರೆ. ಪ್ರಬಲರ ವಿರುದ್ಧ ಹೋರಾಟ ಮಾಡಲು ಸಾಧ್ಯವಾಗದೆ ಮಾಧ್ಯಮಗಳ ಮುಂದೆ ಬಂದಿದ್ದೇನೆ. ದಯವಿಟ್ಟು ನನ್ನ ಜಾಗ ನನಗೆ ಬಿಡಿಸಿಕೊಡಿ ಅಂತ ನಾನು ಮನವಿ ಮಾಡುತ್ತಿದ್ದೇನೆ. ಕೇರಗಳ್ಳಿಯ ಸರ್ವೇ ನಂ.115ರ ಭೂಮಿ ಮಾಲೀಕರು ಎನ್ನಲಾದ ಗಣಪತಿ ರೆಡ್ಡಿ ಆರೋಪ.
ಸಾರಾ ಮಹೇಶ್ ಭೂಅಕ್ರಮ ಮುಚ್ಚಿಕೊಳ್ಳಲು ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಒತ್ತಡ. ಒತ್ತಡ ಹೇರುವ ವಿಚಾರದಲ್ಲಿ ಕೆಲ ರಾಜಕಾರಣಿಗಳೆಲ್ಲಾ ಒಂದಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ.
ಕೇರ್ಗಳ್ಳಿ ಸರ್ವೆ ನಂ.115ರ ಭೂ‌ಅಕ್ರಮದ ಬಗ್ಗೆ ಕಳೆದ ತಿಂಗಳು 10ನೇ ತಾರೀಖು ಜಿಲ್ಲಾಧಿಕಾರಿಗೆ ದೂರು ನೀಡಿದ್ದೆ. ಜಿಲ್ಲಾಧಿಕಾರಿಗಳು ಅದರ ತನಿಖೆ ನಡೆಸಲು ಮುಂದಾಗಿದ್ರು. ಆದಕ್ಕಾಗಿ ಅವರನ್ನು ವರ್ಗಾವಣೆ ಮಾಡುವ ಒತ್ತಡ ಶುರುವಾಗಿದೆ. ಈ ಅಕ್ರಮದ ತನಿಖೆ ಪೂರ್ಣಗೊಂಡರೆ ಮೈಸೂರಿನಲ್ಲಿ ಸಾಕಷ್ಟು ರಾಜಕಾರಣಿಗಳ ಬಣ್ಣ ಬಯಲಾಗುತ್ತೆ. ತನಿಖೆ ಪೂರ್ಣಗೊಳ್ಳುವವರೆಗೆ ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡುವುದು ಬೇಡ.

key words : mysore-RTI-gangaraju-allegation-mla-sa.ra.mahesh-mysore-land-mafia