ಆರ್.ಟಿ.ಐ ಕಾರ್ಯಕರ್ತರ ದೂರು ಅರ್ಜಿ ಫಲ : ಮೃತ ಉಪ ಪೊಲೀಸ್ ನಿರೀಕ್ಷಕ ಮಡದಿಗೆ ಅನುಕಂಪದ ಉದ್ಯೋಗ.

kannada t-shirts

ಮೈಸೂರು, ಜೂ.14, 2021 : (www.justkannada.in news) : ಚನ್ನರಾಯಪಟ್ಟಣದಲ್ಲಿ ಉಪ ಪೊಲೀಸ್ ನಿರೀಕ್ಷಕರಾಗಿದ್ದ, ಕಿರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರ ಮಡದಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಮೈಸೂರಿನ ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನಡೆಸಿದ ಹೋರಾಟ ಫಲ ನೀಡಿದೆ.jk
ಸಿಂಧೂ ಪ್ರಿಯಾ.ಎಂ ಕೋಂ ಲೇಟ್ ಕಿರಣ್ ಕುಮಾರ್, ರವರಿಗೆ ಸರ್ಕಾರದ ಆದೇಶದಂತೆ ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅನುಕಂಪದ ಆಧಾರದ ಮೇಲೆ ಪ್ರಥಮ ಧರ್ಜೆ ಸಹಾಯಕ ಹುದ್ದೆ ನೀಡಲಾಗಿದೆ.

ಘಟನೆ ವಿವರ :
ಮೈಸೂರಿನ ಆರ್.ಟಿ.ಐ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಅವರು, ಮುಖ್ಯಮಂತ್ರಿಗೆ ದೂರು ಅರ್ಜಿ ಸಲ್ಲಿಸಿದ್ದು ಅದರ ವಿವರ ಹೀಗಿದೆ..
ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಆರೋಗ್ಯಾಧಿಕಾರಿಯಾಗಿದ್ದ ಡಾ|| ನಾಗೇಂದ್ರರವರು, ಕೋರೋನಾ ವಾರಿರ್ಯಸ್ ಆಗಿದ್ದು, ಕೆಲಸದ ಒತ್ತಡಕ್ಕೆ ಮತ್ತು ಹಿರಿಯ ನಂಜನಗೂಡು ಅಧಿಕಾರಿಗಳ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಎಂಬ ಕಾರಣದಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ಅವರ ಕುಟುಂಬದವರಿಗೆ ಐವತ್ತು ಲಕ್ಷ ರೂಪಾಯಿ ಪರಿಹಾರ ಮತ್ತು ಅವರ ಮನೆಯವರಿಗೆ ಸರ್ಕಾರಿ ನೌಕರಿಯನ್ನು ನೀಡಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ,
ಡಾ|| ನಾಗೇಂದ್ರರವರಂತೆ ಚನ್ನರಾಯಪಟ್ಟಣದಲ್ಲಿ ಉಪ ಪೊಲೀಸ್ ನಿರೀಕ್ಷಕರಾಗಿದ್ದ, ಕಿರಣ್ ಕುಮಾರ್ ರವರು ಕೂಡಾ ಕೊರೋನಾ ವಾರಿಯರ್ಸ್ ಆಗಿದ್ದರು. ಕೆಲಸಗಳ ಒತ್ತಡಕ್ಕೆ ಮತ್ತು ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಎಂಬುದು ತಿಳಿದಿರುತ್ತೆ. ಆದ್ದರಿಂದ ಕಿರಣ್ ಕುಮಾರ್ ರವರ ಆತ್ಮಹತ್ಯೆ ಪ್ರಕರಣವನ್ನೂ ಸಹ ವಿಶೇಷ ಪ್ರಕರಣವೆಂದು ಪರಿಗಣಿಸಿ, ಅವರ ಕುಟುಂಬದವರಿಗೂ ಐವತ್ತು ಲಕ್ಷ ರೂಪಾಯಿ ಮತ್ತು ಅವರ ಮನೆಯವರಿಗೆ ಸರ್ಕಾರಿ ನೌಕರಿಯನ್ನು ನೀಡುವಂತೆ ದೂರು ನೀಡಿದ್ದರು.

ಫಲ ನೀಡಿದ ದೂರು ಅರ್ಜಿ :

ಸ್ನೇಹಮಯಿ ಕೃಷ್ಣ ಅವರ ದೂರು ಅರ್ಜಿ ಫಲ ನೀಡಿದ್ದು, ಮೃತ ಕಿರಣ್ ಕುಮಾರ್ ಅವರ ಮಡದಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಿರುವ ಬಗ್ಗೆ ಪೊಲೀಸ್ ಉಪಾಧೀಕ್ಷಕರ ಕಚೇರಿ ಹಿಂಬರ ನೀಡಿದ್ದು, ಅದು ಹೀಗಿದೆ…
ದೂರಿನ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಂಧೂ ಪ್ರಿಯಾ.ಎಂ ಕೋಂ ಲೇಟ್ ಕಿರಣ್‌ಕುಮಾರ್‌, ರವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈಗಾಗಲೆ ಸಿಂಧೂ ಪ್ರಿಯಾ.ಎಂ ಕೋಂ ಲೇಟ್ ಕಿರಣ್ ಕುಮಾರ್, ರವರಿಗೆ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಹಾಸನ ಜಿಲ್ಲೆ ಹಾಸನ ರವರ ಆದೇಶ ಸಂಖ್ಯೆ ಸಿಬ್ಬಂದಿ (1)236/2020-2021 ದಿನಾಂಕ 26-03-2021 ರಂತೆ ಅನುಕಂಪದ ಆಧಾರದ ಮೇಲೆ ಪ್ರಥಮ ಧರ್ಜೆ ಸಹಾಯಕ ಹುದ್ದೆ ನೀಡಿ ಜಿಲ್ಲಾಧಿಕಾರಿಗಳ ಕಛೇರಿ ಹಾಸನ ಕಛೇರಿಯಲ್ಲಿ ನೇಮಿಸಿ ಆದೇಶಿಸಿರುತ್ತಾರೆ.
ಮುಂದುವರಿದು ಅದೇ ರೀತಿ, ಡಾ|| ನಾಗೇಂದ್ರ ರವರ ಕುಟುಂಬದವರಿಗೆ ನೀಡುತ್ತಿರುವ ಪರಿಹಾರ ಮತ್ತು ಸೌಲಭ್ಯವನ್ನು, ಕಿರಣ್ ಕುಮಾರ್ ರವರ ಕುಟುಂಬಕ್ಕೂ ನಿಡಬೇಕೆಂಬ ಮನವಿಯು ಬಗ್ಗೆ ಸರ್ಕಾರ ನಿರ್ಧರಿಸಬೇಕಾದ ವಿಚಾರವೆಂಬ ಅಂಶವನ್ನು ತಿಳಿಸಿ, ನಿಮಗೆ ಹಿಂಬರಹ ನೀಡಲಾಗಿದೆ ಎಂದಿದ್ದಾರೆ.

key words : mysore-RTI-activist-sneha-mahi-krishna-hassan-police-kiran.kumar

website developers in mysore