‘ ಆ ಒಂದು ವಿಷಯ’ ಸರಿ ಮಾಡಿಕೊಂಡರೆ ರೋಹಿಣಿ ಸಿಂಧೂರಿ ಒರ್ವ ಉತ್ತಮ ಅಧಿಕಾರಿ: ಮಾಜಿ ಶಾಸಕ ಎ.ಮಂಜು.

kannada t-shirts

ಮೈಸೂರು, ಜೂ.12, 2021 : (www.justkannada.in news) : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ನಡವಳಿಕೆ ಸರಿ ಮಾಡಿಕೊಂಡರೆ ಅವರು ಒರ್ವ ಉತ್ತಮ ಅಧಿಕಾರಿ ಆಗುತ್ತಾರೆ ಎಂದು ಮಾಜಿ ಶಾಸಕ ಎ.ಮಂಜು ಕಿವಿಮಾತು ಹೇಳಿದರು.jk
ಮೈಸೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜು ಹೇಳಿದಿಷ್ಟು..
ಡಿಸಿಯಾಗಿದ್ದ ರೋಹಿಣಿ ಸಿಂಧೂರಿಯನ್ನ ನಾನು ಹತ್ತಿರದಿಂದ ಬಲ್ಲೆ. ಅವರ ಆಡಳಿತದ ಸಂದರ್ಭದಲ್ಲಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಹೀಗಾಗಿಯೇ ಅವರ ಬಗ್ಗೆ ನಾನು ಮಾತನಾಡುತ್ತಿದ್ದೇನೆ‌.
ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ, ಹಿರಿಯ ರಾಜಕಾರಣಿಗಳಿಗೆ ಗೌರವ ಕೊಡಲ್ಲ .ಒಬ್ಬ ಶಾಸಕರನ್ನ ಕುರಿತು ಏಕವಚನದಲ್ಲಿ ಮಾತನಾಡೋದು ವೆರಿ ಬ್ಯಾಡ್. ಈ ರೀತಿಯ ವರ್ತನೆಯನ್ನು ರೋಹಿಣಿ ಸಿಂಧೂರಿ ಸರಿಪಡಿಸಿಕೊಳ್ಳಬೇಕು. ಸಿಂಧೂರಿ ತಮ್ಮ ನಡವಳಿಕೆ ಸರಿ ಮಾಡಿಕೊಂಡರೆ ಅವರು ಒರ್ವ ಉತ್ತಮ ಅಧಿಕಾರಿ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಮೈಸೂರಿನ ಭೂ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಅವರು ಯಾಕೆ ಈತನಕ ಒಂದೇ ಒಂದು ಎಫ್ ಐ ಆರ್ ಮಾಡಿಲ್ಲ ಎಂದು ಮಾಜಿ ಶಾಸಕ ಎ.ಮಂಜು ಪ್ರಶ್ನಿಸಿದರು.
ಎಲ್ಲರೂ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ. ಆದ್ರೆ ಸರ್ಕಾರಿ ಭೂಮಿಯನ್ನ ಒತ್ತುವರಿ ಮಾಡಿ ದಂಧೆ ಮಾಡಬಾರದು. ಎಷ್ಟೋ ಅಧಿಕಾರಿಗಳು ಮೈಸೂರಿಗೆ ಬಂದು ಹೋಗಿದ್ದಾರೆ. ಈವರೆಗೂ ಭೂ ಮಾಫಿಯಾದವರ ವಿರುದ್ಧ ಎಫ್ ಐ ಆರ್ ಆಗಿಲ್ಲ ಯಾಕೆ. ಭೂ ಮಾಫಿಯಾ ಮಾಡಿದ್ದಾರೆ ಅಂತಾ ಡಿಸಿಯಾಗಿದ್ದ ರೋಹಿಣಿ ಹೇಳಿದ್ದಾರೆ. ಆದ್ರೆ ಅವ್ರ ಮೇಲೆ ಎಫ್ ಐ ಆರ್ ಯಾಕೆ ಮಾಡಿಸಿಲ್ಲ. ಕೇವಲ ಪ್ರಚಾರಕ್ಕೆ ಮಾಡೋದಲ್ಲ. ಸಾರ್ವಜನಿಕ ಆಸ್ತಿ, ಸರ್ಕಾರದ ಆಸ್ತಿಯ ಬಗ್ಗೆ ಆನ್ ರೆಕಾರ್ಡ್ ಇರುತ್ತದೆ. ನಾನು ಯಾರ ಪರವೂ ,ವಿರುದ್ಧವೂ ಮಾತನಾಡಲ್ಲ.
ರಾಜಕಾರಣಿಗಳು ಸಂಬಂಧಿಕರು ರಿಯಲ್ ಎಸ್ಟೇಟ್ ನಲ್ಲಿ ಆಸ್ತಿ ಮಾಡುವ ರೀತಿ, ಅಧಿಕಾರಿಗಳ ನೆಂಟರು, ಸಂಬಂಧಿಕರ ಹೆಸ್ರಲ್ಲಿ ಆಸ್ತಿ ಮಾಡಿದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಹೊರಗೆ ಬರುತ್ತದೆ.
ಕೆರೆ , ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡ್ಬೇಕು ಅಂತ ರೋಹಿಣಿ ಸಿಂಧೂರಿ ಹೇಳಿಕೊಂಡಿದ್ದಾರೆ. ಆದರೆ, ಹಾಸನದಲ್ಲಿ ಕೆರೆ ಉಳುವಿಗಾಗಿ ಜನರೇ ಸ್ವಂತ ಹಣದಲ್ಲಿ ಕೆರೆ ನಿರ್ಮಿಸಲು ಮುಂದಾಗಿದ್ದರು. ಆಗ ರೋಹಿಣಿ ಸಿಂಧೂರಿಯೇ ಹಾಸನದ ಡಿಸಿಯಾಗಿದ್ರು. ಈ ಸಂಬಂಧ ಜನತೆ ಅಹ್ವಾನ ನೀಡಿದ್ದ ವೇಳೆ ಕೆರೆ ಬಳಿ ಬಂದು ಕಾರಿಂದ ಕೆಳಗೆ ಇಳಿಯಲೇ ಇಲ್ಲ ಎಂದರು.

ENGLISH SUMMARY.

“If she rectifies one thing Rohini Sindhuri is a very good officer’: Former MLA A. Manju
Mysuru, June 12, 201 (www.justkannada.in): “I have noticed former Mysuru DC Rohini Sindhuri’s work very closely. I am also a person who has suffered a lot from her strict administration,” opined former MLA A. Manju.
Addressing a press meet in Mysuru today he said, “Rohini Sindhuri is a person who likes publicity, she doesn’t respect senior politicians. It is very bad to address an MLA in a singular tone. She should rectify this. Otherwise, she is a very good officer.”
“IAS officer Rohini Sindhuri has spoken extensively about the land mafia in Mysuru. Then why didn’t file even a single FIR,” he questioned.
Further speaking he said, “All of them are engaged in real estate business. But no one should encroach on government land and do business. Mysuru has seen so many officers. But why not even a single FIR has been registered to date? Rohini Sindhuri has alleged land mafia, but why has she not filed an FIR? No one should make allegations or work only for publicity, public property is government property, everything will be on records. I am not speaking on behalf or against anyone.”
The coming days will reveal how relatives of politicians do the real estate business. Not only that, coming days will reveal how much property politicians have accrued, he added.
“Rohini Sindhuri has stated that government land and tank encroachments should be removed. But when she was the Deputy Commissioner in Hassan a few people had come forward to construct a tank using their own money. The people had invited her to the place. But when she arrived there she didn’t even get out of the car,” he informed.
Keywords: Former MLA A. Manju/ Mysuru/ DC/ Rohini Sindhuri/ land acquisition/ good officer

key words : mysore-rohini-sindoori-dc-real-estate-mafia-bjp

website developers in mysore