ಮೈಸೂರು : ರೈಲು ಸಮಯದ ಪರಿಷ್ಕರಣೆ: ಬದಲಾದ ಸಮಯ ಬಗ್ಗೆ ಮಾಹಿತಿ ಇಲ್ಲಿದೆ ಮಾಹಿತಿ…

ಮೈಸೂರು,ಡಿಸೆಂಬರ್,22,2020(www.justkannada.in): ಹುಬ್ಬಳ್ಳಿ – ಮೈಸೂರು – ಹುಬ್ಬಳ್ಳಿ ವಿಶೇಷ ಎಕ್ಸ್‌ ಪ್ರೆಸ್ ಮತ್ತು ಮೈಸೂರು- ಅಜ್ಮೀರ್ ಸಾಪ್ತಾಹಿಕ ಎಕ್ಸ್‌ ಪ್ರೆಸ್ ವಿಶೇಷ  ರೈಲು ಸಮಯದ ಪರಿಷ್ಕರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಮತ್ತು ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ.Teachers,solve,problems,Government,bound,Minister,R.Ashok

ರೈಲುಗಳ ಪರಿಷ್ಕೃತ ಸಮಯವನ್ನುಈ ಕೆಳಕಂಡಂತಿದೆ….

  1. ರೈಲು ಸಂಖ್ಯೆ 06581/06582 ಹುಬ್ಬಳ್ಳಿ – ಮೈಸೂರು – ಹುಬ್ಬಳ್ಳಿ ವಿಶೇಷ ಎಕ್ಸ್‌ ಪ್ರೆಸ್…

ರೈಲು ಸಂಖ್ಯೆ 06581/06582 ಹುಬ್ಬಳ್ಳಿ – ಮೈಸೂರು – ಹುಬ್ಬಳ್ಳಿ ವಿಶೇಷ ಎಕ್ಸ್‌ ಪ್ರೆಸ್ ರೈಲಿನ ಹುಬ್ಬಳ್ಳಿಯಿಂದ 23.12.2020 ರಂದು ಮತ್ತು ಮೈಸೂರಿನಿಂದ 23.12.2020 ರಂದು ಪ್ರಾರಂಭವಾಗುವ ಪ್ರಯಾಣವನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.

ರೈಲು ಸಂಖ್ಯೆ 06581 ಹುಬ್ಬಳ್ಳಿ – ಮೈಸೂರು ಉತ್ಸವದ ವಿಶೇಷ ಎಕ್ಸ್‌ ಪ್ರೆಸ್ 18:20 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮರುದಿನ 08:55 ಗಂಟೆಗೆ ಮೈಸೂರು ತಲುಪಲಿದೆ.

ಅದರಂತೆ ರೈಲು ಸಂಖ್ಯೆ 06582 ಮೈಸೂರು – ಹುಬ್ಬಳ್ಳಿ ಸ್ಪೆಷಲ್ ಎಕ್ಸ್‌ ಪ್ರೆಸ್ ಮೈಸೂರಿನಿಂದ 18:35 ಗಂಟೆಗೆ ಹೊರಟು ಮರುದಿನ 10:25 ಗಂಟೆಗೆ ಧಾರವಾಡಕ್ಕೆ ಆಗಮಿಸಲಿದೆ. ಈ ಸಮಯವು ಮೈಸೂರಿನಿಂದ 23.12.2020 ರಂದು ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

  1. ರೈಲು ಸಂಖ್ಯೆ .06210 / 06209 ಮೈಸೂರು – ಅಜ್ಮೀರ್ – ಮೈಸೂರು ಎಕ್ಸ್‌ ಪ್ರೆಸ್ ವಿಶೇಷ

ರೈಲು ಸಂಖ್ಯೆ .06210 ಮೈಸೂರು- ಅಜ್ಮೀರ್ ಸಾಪ್ತಾಹಿಕ ಎಕ್ಸ್‌ ಪ್ರೆಸ್ ವಿಶೇಷ ಮಂಗಳವಾರ ಮೈಸೂರಿನಿಂದ 19:00 ಗಂಟೆಗೆ ಹೊರಟು ಗುರುವಾರ ಅಜ್ಮೀರ್ ತಲುಪಲಿದೆ.

ರೈಲು ಸಂಖ್ಯೆ 06209 ಅಜ್ಮೀರ್ – ಮೈಸೂರು ಎಕ್ಸ್‌ ಪ್ರೆಸ್ ವಿಶೇಷ ಭಾನುವಾರ ಅಜ್ಮೀರ್‌ನಿಂದ 06.00 ಗಂಟೆಗೆ ಹೊರಟು ಮಂಗಳವಾರ 02.15 ಗಂಟೆಗೆ ಮೈಸೂರು ತಲುಪಲಿದೆ.

Key words: Mysore- Revision – train-time-hubli-mysore- ajmeer