ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ಸಿಡಿಮಿಡಿ.

Promotion

ಮೈಸೂರು,ಜುಲೈ,14,2021(www.justkannada.in): ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ಸಿಡಿಮಿಡಿಗೊಂಡಿದ್ದಾರೆ.jk

ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಸಚಿವ ಆರ್.ಅಶೋಕ್, ನಮಗೆ ಯಾವ ವ್ಯಕ್ತಿಯೂ ಮುಖ್ಯ ಅಲ್ಲ, ಕೆಆರ್‌ಎಸ್ ಡ್ಯಾಂ ಮುಖ್ಯ.ಡ್ಯಾಂ ಸುರಕ್ಷತೆ ಬಗ್ಗೆ ಸರ್ಕಾರ ವರದಿ ಕೇಳಿತ್ತು. ಅಲ್ಲಿನ ಅಧಿಕಾರಿ ಬಿರುಕು ಇಲ್ಲ ಅಂತ ವರದಿ ಕೊಟ್ಟಿದ್ದಾರೆ. ಇದಾದ ಬಳಿಕ ಮುಖ್ಯಮಂತ್ರಿಗಳು, ನಾನು, ಮುರುಗೇಶ್ ನಿರಾಣಿ ಎಲ್ಲರೂ ಹೇಳಿಕೆ ನೀಡಿದ್ದೇವೆ. ನಾವೆಲ್ಲ ಹೇಳಿಕೆ ನೀಡಿದ ಮೇಲೆಯೂ ಪದೇ ಪದೇ ಬಿರುಕು ಇದೆ ಅನ್ನೋದು ಸರಿಯಲ್ಲ. ಇದರಿಂದಾಗಿ ಅಣೆಕಟ್ಟೆಯ ತಳಭಾಗದಲ್ಲಿರುವ ಜನರು ಮತ್ತು ರೈತರಿಗೆ ಆತಂಕ ಉಂಟಾಗುತ್ತೆ ಎಂದು ಕಿಡಿಕಾರಿದರು.

ಇಷ್ಟೆಲ್ಲ ಆಗುತ್ತಿರುವಾಗ ಸರ್ಕಾರವೂ ಸುಮ್ಮನಿರಲು ಸಾಧ್ಯವಿಲ್ಲ. ನಾನೂ ಇಂದು ಮಂಡ್ಯಕ್ಕೆ ಹೋಗುತ್ತಿದ್ದೇನೆ, ಜಿಲ್ಲಾಧಿಕಾರಿ ಭೇಟಿ ಮಾಡುತ್ತೇನೆ.ಕೆಆರ್‌ಎಸ್ ಡ್ಯಾಂ, ಬೇಬಿ ಬೆಟ್ಟದ ಸುತ್ತ ಏನಾಗಿದೆ ಅಂತ ವರದಿ ನೀಡುವಂತೆ ಡಿಸಿಗೆ ಸೂಚನೆ ಕೊಡುತ್ತೇನೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Key words: mysore- Revenue Minister- R. Ashok – statement – Sumalatha Ambarish