ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಶೀಘ್ರವೇ ಪರಿಹಾರ- ಸಚಿವ ಎಸ್.ಟಿ ಸೋಮಶೇಖರ್ ಭರವಸೆ…

ಮೈಸೂರು,ಜು,11,2020(www.justkannada.in):  ಮೈಸೂರಿನಲ್ಲಿ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೆಲವು ರೈತ ಕುಟುಂಬಕ್ಕೆ ಪರಿಹಾರ ಬಾರದ ವಿಚಾರವನ್ನ ಜಿಲ್ಲಾಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಶೀಘ್ರವೇ ಆ ರೈತ ಕುಟುಂಬಕ್ಕ ಪರಿಹಾರ ನೀಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.jk-logo-justkannada-logo

ಮೈಸೂರು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ  ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಶಾಸಕ ಎಲ್ ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್,ಎಸ್ ಪಿ ರಿಷ್ಯಂತ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳು, ರಸಗೊಬ್ಬರ, ಜಿಲ್ಲೆಯ ಮಳೆಯ ಬಗ್ಗೆ  ಸಚಿವ ಎಸ್ ಟಿ ಸೋಮಶೇಖರ್ ಮಾಹಿತಿ ಪಡೆದರು. mysore- relief -family – suicide- farmers- Minister -ST Somashekhar

ಮೈಸೂರಿನಲ್ಲಿ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೆಲವು ರೈತ ಕುಟುಂಬಕ್ಕೆ ಪರಿಹಾರ ಬಾರದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಈ ಬಗ್ಗೆ ಜಿಲ್ಲಾಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ. ಒಟ್ಟು 14 ರೈತ ಕುಟುಂಬಕ್ಕೆ ಪರಿಹಾರ ಬರಬೇಕಿದೆ. ತಕ್ಷಣದಲ್ಲಿ  ರೈತ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ನಾಲೆಗಳಿಗೆ ನೀರು ಹರಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಕಬಿನಿ ಜಲಾಶಯ ನಮ್ಮ ಕಂಟ್ರೋಲ್ ನಲ್ಲಿ ಇದೆ. ಹೀಗಾಗಿ ಕಬಿನಿ ಜಲಾಶಯದಿಂದ  ಶೀಘ್ರದಲ್ಲೇ ನೀರು ಹರಿಸಲಿದ್ದೇವೆ. ಕೆಆರ್ ಎಸ್ ವ್ಯಾಪ್ತಿಗೆ ಬರುವ ನಾಲೆಗಳಿಗೆ ನೀರು ಹರಿಸುವ ಬಗ್ಗೆ ಅಲ್ಲಿನ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ಮಾಡಿ ನೀರು ಹರಿಸಲಾಗುವುದು ಎಂದು ತಿಳಿಸಿದರು.

Key words: mysore- relief -family – suicide- farmers- Minister -ST Somashekhar