ಮೈಸೂರಿನ ಹೆಲಿಪ್ಯಾಡ್ ಜಾಗಕ್ಕೆ ಬೇಲಿ ಹಾಕಿದ್ದಕ್ಕೆ ಪ್ರಮೋದಾದೇವಿ ಒಡೆಯರ್  ನೀಡಿದ್ದು ಈ ಕಾರಣ…

ಮೈಸೂರು,ಜನವರಿ,2,2020(www.justkannada.in):  ಮೈಸೂರಿನ ಹೆಲಿಪ್ಯಾಡ್ ಜಾಗಕ್ಕೆ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.jk-logo-justkannada-mysore

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದಾ ದೇವಿ ಒಡೆಯರ್,  ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಹೆಲಿಪ್ಯಾಡ್ ಇರುವ ಜಾಗ ನಮ್ಮದು. ಆ ಜಾಗದಲ್ಲಿ ಯಾರೋ ಹೊರಗಿನವರು ಬೇಲಿ ಹಾಕುವುದನ್ನು ಗಮನಿಸಿದ್ದೇವೆ. ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೋರ್ಡ್ ಹಾಕಿಸಿದ್ದೇವೆ. ನಮ್ಮ ಆಸ್ತಿಯನ್ನು ನಾವು ಸುರಕ್ಷತೆ ಮಾಡುತ್ತಿದ್ದೇವೆ. ಹೀಗಾಗಿ ಯಾರಿಗೋ ತೊಂದರೆ ಕೊಡಬೇಕು ಅನ್ನುವುದು ನನ್ನ ಉದ್ದೇಶ ಅಲ್ಲ. ಮುಂದೆಯೂ ಅಗತ್ಯಬಿದ್ದರೆ ಹೆಲಿಪ್ಯಾಡ್ ಬಳಸಿಕೊಳ್ಳಲಿ ಎಂದು ಹೇಳಿದರು.

ಕುರುಬಾರಹಳ್ಳಿ, ಆಲನಹಳ್ಳಿ, ಚೌಡಳ್ಳಿ ಜಾಗದ ವಿಚಾರ ಸಂಬಂಧ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದಾ ದೇವಿ ಒಡೆಯರ್, ಹೈಕೋರ್ಟ್ ಜೂನ್‌ ತಿಂಗಳಲ್ಲಿ ನೀಡಿದ ತೀರ್ಪಿನ ಪ್ರಕಾರ ಸದರಿ ಜಾಗ ನಮ್ಮದು, 1971ರ ದಾಖಲೆಗಳಂತೆ ರಾಜವಂಶಕ್ಕೆ ಸೇರಿದ 1500 ಎಕರೆ ಜಾಗ ಇತ್ತು. 2010ರವರೆಗೂ ಯಾವುದೇ ವಿವಾದ ಇರಲಿಲ್ಲ. ಹರ್ಷಗುಪ್ತಾ ಅವರು ಡಿಸಿ ಆಗಿದ್ದ ಸಂದರ್ಭದಲ್ಲಿ ಸದರಿ ಜಾಗವನ್ನು ಬಿ ಖರಾಬು ಅಂತ ಡಿಸಿ ಕೋರ್ಟ್‌ ತೀರ್ಪು ನೀಡಿತು.  ಬಳಿಕ ಬಂದ ವಸ್ತ್ರದ್ ಅವರು ರಾಜವಂಶಸ್ಥರ ಜಾಗ ಅಂತ ಬರೆದರು. ಅವರೇ ತಮ್ಮ ತೀರ್ಪನ್ನು ವಾಪಸ್ ಪಡೆದು ಬಿ ಖರಾಬು ಅಂದರು.

ಇದಾದ ಬಳಿಕ ಶಿಖಾ ಅವರು ಡಿಸಿ ಆಗಿದ್ದ ವೇಳೆ ಅವರು ಮೊದಲ ಬಾರಿ ನೋಟಿಸ್ ಕೊಟ್ಟರು. ಆ ನೋಟಿಸ್ ಆಧಾರದ ಮೇಲೆ ಮಾಲೀಕತ್ವದ ಹಕ್ಕು ಪ್ರತಿಪಾದಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದೆವು.  ಜೂನ್ ನಲ್ಲಿ ತೀರ್ಪು ಬಂದಿದ್ದು, ಸದರಿ ಜಾಗ ನಮ್ಮದು ಅಂತ ಆದೇಶಿಸಲಾಗಿದೆ.  ಈಗ ಅಲ್ಲಿ ಎಷ್ಟು ಜಾಗ ಇದೆಯೋ ಎಂಬುದು ಗೊತ್ತಿಲ್ಲ.mysore-reason-pramoda-devi-wodeyar-fence-helipad

ಹೊಸದಾಗಿ ಸರ್ವೇ ಮಾಡಿಕೊಡಿ  ಎಂದು ಕಂದಾಯ ಇಲಾಖೆಗೆ ಪತ್ರ ಬರೆದಿದ್ದೇವೆ. ಆದರೆ ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ‌.  ಮುಂದೆ ಏನು ಮಾಡಬೇಕು ಅಂತ ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರಮೋದದೇವಿ ಒಡೆಯರ್ ತಿಳಿಸಿದರು.

Key words: mysore- reason – Pramoda Devi Wodeyar – Fence-helipad