ಮೈಸೂರಿನಲ್ಲಿ ಮಳೆ ಅವಾಂತರದಿಂದ ಧರೆಗುರುಳಿದ ಮರಗಳು: ಪಾಲಿಕೆ ಸಿಬ್ಬಂದಿಯಿಂದ ತೆರವು ಕಾರ್ಯಚರಣೆ…

ಮೈಸೂರು,ಮೇ,24,2019(www.justkannada.in) ನಿನ್ನೆ ರಾತ್ರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುರಿದ ಬಾರಿ ಮಳಯಿಂದಾಗಿ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮರಗಳು ಧರೆಗುರುಳಿವೆ.

ನಿನ್ನೆ ಸುರಿದ ಮಳೆರಾಯ ನಗರದಲ್ಲಿ ಅವಾಂತರ ಸೃಷ್ಠಿಸಿದ್ದು, 50ಕ್ಕೂ ಹೆಚ್ಚು ಮರಗಳು, 10ಕ್ಕೂ ಹೆಚ್ಚು ವಿದ್ಯುತ್ ಕಂಬ, ಬಾರಿ ಗಾತ್ರದ ಕೊಂಬೆಗಳು ಧರೆಗುರುಳಿವೆ. ಇನ್ನು ಮುರಿದು ಬಿದ್ದಿರುವ ಮರಗಳನ್ನ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಯಪಾಲಕ ಇಂಜಿನಿಯರ್ ಸದಾಶಿವ ಕೆ.ಜಟ್ನಿ ,ಪಾಲಿಕೆ ಅಭಯ ಸಿಬ್ಬಂದಿ ಜತೆ ಹೊರಗಿನ ಕೆಲಸಗಾರರನ್ನು ಬಳಸಿಕೊಂಡು ಮರ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ. ಮರದ ಕೊಂಬೆ, ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇನ್ನು ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಮೈಸೂರಿನಲ್ಲಿ ಒಣಗಿದ ಮರ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಅನುಮತಿ ಪಡೆದು ಮರಗಳನ್ನ ತೆರವು ಮಾಡಲಾಗುತ್ತದೆ ಎಂದು ಹೇಳಿದರು.

ಶಕ್ತಿಮಾನ್ ಯಂತ್ರ ಬಳಸಿ ಮರ ಕಟಾವು ಮಾಡಲಾಗುತ್ತದೆ. ವಿದ್ಯುತ್ ಕಂಬ ತೆರವಿಗೆ ಜೆಸಿಬಿ ಬಳಕೆ ಮಾಡಲಾಗುತ್ತಿದೆ. ನಗರಪಾಲಿಕೆಯಲ್ಲಿ ಮರಕಟಾವಿಗೆ ಕೇವಲ ಎರಡು ವಾಹನಗಳಿದ್ದು ಹೆಚ್ಚುವರಿ ನಾಲ್ಕು ವಾಹನಗಳಿಗೆ ಆಯುಕ್ತರಲ್ಲಿ ಮನವಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮರಗಳಿಂದ ತೊಂದರೆ ಆಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

key words: #mysore #rain #tree #corpration