ಮೈಸೂರು ಜಿಲ್ಲೆಯಲ್ಲಿ ವರುಣನ ಅಬ್ಬರ: ಸರಗೂರು ಹ್ಯಾಂಡ್ ಪೋಸ್ಟ್ ರಸ್ತೆ ಬಂದ್: ನೂರಾರು ಎಕರೆಯ ಬೆಳೆ ನಾಶ..

ಮೈಸೂರು,ಆ,8,2019(www.justkannada.in): ಮಳೆರಾಯನ ಅಬ್ಬರದಿಂದ ರಾಜ್ಯದ ಜನತೆ ತತ್ತರಿಸಿದ್ದು ಮೈಸೂರಿನಲ್ಲೂ ವರುಣನ ಆರ್ಭಟ ಜೋರಾಗಿದೆ. ಈ ನಡುವೆ ಎಚ್.ಡಿ ಕೋಟೆರ ಹುಣಸೂರಿಗೆ ಮಳೆರಾಯನ ಎಫೆಕ್ಟ್ ತಟ್ಟಿದೆ.

ಭಾರಿ ಮಳೆಯಿಂದಾಗಿ ಎಚ್ ಡಿ ಕೋಟೆಯ ತಾರಕ ಸೇರುವೆ, ಹೊಮ್ಮರಗಳ್ಳಿ ಸೇತುವೆ, ಮಾದಾಪುರ ಸೇತುವೆ ಜಲಾವೃತಗೊಂಡಿದ್ದು ಸೇತುವೆ  ಬಳಿ ಪೋಲೀಸರನ್ನ ನಿಯೋಜನೆ ಮಾಡಲಾಗಿದೆ . ಸೇತುವೆ ಬಳಿ ಪೋಲಿಸರು ಕಟ್ಟೆಚ್ಚರ ವಹಿಸಿದ್ದು ಜಲಾವೃತಗೊಂಡ ಸೇತುವೆ ಮೇಲೆ ವಾಹನ ಸಂಚಾರ ನಿಷೇಧ ಹೇರಲಾಗಿದೆ. ಸೇತುವೆ ಹಿಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು  ಸಾರ್ವಜನಿಕರು ಸೇತುವ ದಾಟದಂತೆ ಸೂಚನೆ ನೀಡಲಾಗಿದೆ

ಇನ್ನೊಂದೆಡೆ ಮಳೆರಾಯನ ಅಬ್ಬರದಿಂದ ಹ್ಯಾಂಡ್ ಪೋಸ್ಟ್ ಬಳಿ ಸರ್ಕಾರ ಶಾಲೆ ಬಳಿ ರಸ್ತೆ ಕುಸಿದಿದ್ದು ಸರಗೂರು ಹ್ಯಾಂಡ್ ಪೋಸ್ಟ್ ರಸ್ತೆ ಬಂದ್ ಆಗಿದೆ. ರಸ್ತೆ ವಿಭಜಿಸಿ ತಗ್ಗು ಪ್ರದೇಶಕ್ಕೆ  ನೀರು ನುಗ್ಗದ್ದು, ಡಾಂಬರ್ ರಸ್ತೆ ವಿಭಜಿಸಿ ನೀರು ಹರಿಯುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಜನರನ್ನು ನಿಯಂತ್ರಿಸಲು ಪೋಲೀಸರು ಹರಸಾಹಸ ಪಡುತ್ತಿದ್ದು  ಉಕ್ಕಿಹರಿಯುತ್ತಿರೊ ನೀರನ್ನು ದಾಟದಂತೆ ಪೋಲೀಸರು ತಡೆಯುತ್ತಿದ್ದಾರೆ.

ಹುಣಸೂರಿನ ಹನಗೂಡು ವ್ಯಾಪ್ತಿಯಲ್ಲಿ ತುಂಬಿ ಹರಿಯುತ್ತಿರೊ ಲಕ್ಷ್ಮಣ ತೀರ್ಥ ನದಿ: ಬೆಳೆನಾಶ

ಇನ್ನೊಂದೆಡೆ ಮೈಸೂರು ಜಿಲ್ಲೆಯ  ಹುಣಸೂರಿನ ಹನಗೂಡು ವ್ಯಾಪ್ತಿಯಲ್ಲಿ ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದ್ದು, ಇದರ ಪರಿಣಾಮ ಹನಗೂಡು ವ್ಯಾಪ್ತಿಯಲ್ಲಿ ನೂರಾರು ಎಕರ ಫಸಲು ನಾಶವಾಗಿದೆ. ಮದಗನೂರ, ಶಿಂಡೇನಹಳ್ಳಿ, ಪ್ರದೇಶದಲ್ಲಿ  ಬೆಳೆದಿದ್ದ ಬೆಳೆಗಳು ಜಲಾವೃತವಾಗಿದ್ದು ಅಪಾರ ಪ್ರಮಾಣದ ಶುಂಠಿ, ಹತ್ತಿ, ಜೋಳ ಮತ್ತಿತರ ಬೆಳೆ ನಾಶವಾಗಿದೆ. ಬೆಳೆ ನಾಶದಿಂದರೈತರು ಕಂಗೆಟ್ಟಿದ್ದು ಮತ್ತಷ್ಟು ಪ್ರದೇಶ ಜಲಾವೃತಗೊಳ್ಳೊ ಆತಂಕದಲ್ಲಿದ್ದಾರೆ.

Key words: mysore- rain- Sarguru- Hand Post -Road- Bandh.